Home Karnataka State Politics Updates K S Eshwarappa: ಒಂದೇ ಸಾಲಿನಲ್ಲಿ ತನ್ನ ಪ್ರಣಾಳಿಕೆ ಘೋಷಿಸಿದ ಈಶ್ವರಪ್ಪ !!

K S Eshwarappa: ಒಂದೇ ಸಾಲಿನಲ್ಲಿ ತನ್ನ ಪ್ರಣಾಳಿಕೆ ಘೋಷಿಸಿದ ಈಶ್ವರಪ್ಪ !!

Hindu neighbor gifts plot of land

Hindu neighbour gifts land to Muslim journalist

K S Eshwarappa: ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ವತಂತ್ರವಾಗಿ ಸ್ಪರ್ಧೆಗಿಳಿದಿರುವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಅವರು ಇಂದು ತನ್ನ ಪ್ರಣಾಳಿಕೆಯನ್ನು ಘೋಷಿಸಿದ್ದಾರೆ. ಬಿಜೆಪಿ ಪ್ರಣಾಳಿಕೆ ಘೋಷಣೆ ದಿನವೇ ಈಶ್ವರಪ್ಪ(K S Eshwarappa) ಕೂಡ ಪ್ರಣಾಳಿಕೆ ಘೋಷಿಸಿರುವುದು ವಿಶೇಷ.

https://x.com/ikseshwarappa/status/1779340130974609708?t=UK6jJFcBmzblWExm57RR2A&s=08

ಅಚ್ಚರಿ ಏನೆಂದರೆ ಈಶ್ವರಪ್ಪನವರು ಕೇವಲ ಒಂದೇ ಸಾಲಿನಲ್ಲಿ ಪ್ರಣಾಳಿಕೆ ಘೋಷಣೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಅವರು ‘ಹಿಂದುತ್ವದ ಉಳಿವು, ಪಕ್ಷದ ಶುದ್ಧೀಕರಣ, ಅಪ್ಪ-ಮಕ್ಕಳಿಂದ ರಾಜ್ಯ ಬಿಜೆಪಿ(BJP) ಯನ್ನು ಮುಕ್ತಗೊಳಿಸುವುದೇ ನನ್ನ ಚುನಾವಣಾ ಪ್ರಣಾಳಿಕೆ’ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ: Urfi Javed: ಉರ್ಫಿ ಹಾಲಿನಂತ ತ್ವಚೆ ಹೊಂದಲು ಮನೆಯಲ್ಲಿ ತಯಾರಿಸೋ ಈ ಫೇಸ್ ಪ್ಯಾಕ್ ಕಾರಣವಂತೆ !!

ಇದರೊಂದಿಗೆ ಮತ್ತೊಂದು ಪೋಸ್ಟ್ ಮಾಡಿದ ಈಶ್ವರಪ್ಪನವರು ‘ರಾಜ್ಯ ಬಿಜೆಪಿ ಮಾನ್ಯ ಅಧ್ಯಕ್ಷ ವಿಜಯೇಂದ್ರ ಅವರೆ, ಅಪಪ್ರಚಾರ ಮಾಡಿ ರಾಷ್ಟ್ರಭಕ್ತರಲ್ಲಿ ಗೊಂದಲ ಮೂಡಿಸುವುದನ್ನು ನಿಲ್ಲಿಸಿ. ಪ್ರಧಾನಿ ಮೋದಿ, ಅಮಿತ್‌ ಶಾ ಅಥವಾ ಬೇರೆ ಯಾರೇ ಹೇಳಿದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Suicide: ಸ್ಯಾಂಡಲ್ ವುಡ್ ನಿರ್ಮಾಪಕ “ಸೌಂದರ್ಯ ಜಗದೀಶ್” ಆತ್ಮಹತ್ಯೆ

ಈಶ್ವರಪ್ಪ ಬಂಡಾಯವೇಕೆ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಈಶ್ವರಪ್ಪನವರಿಗೆ ಈ ಸಲ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ, ಮುಂದೆ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮಗ ಕಾಂತೇಶ್ ಗೆ ಹಾವೇರಿ ಲೋಕಸಭಾ ಟಿಕೆಟ್ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಹಾವೇರಿ ಲೋಕಸಭೆ ಕ್ಷೇತ್ರ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಹೈಕಮಾಂಡ್‌ ಬಿಗ್‌ ಶಾಕ್‌ ನೀಡಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್‌ ನೀಡಿತ್ತು. ಇದರಿಂಗಾಗಿ ಕೊಟ್ಟ ಮಾತಿಗೆ ಬಿ ಎಸ್‌ ಯಡಿಯೂರಪ್ಪ ಅವರು ತಪ್ಪಿದ್ದಾರೆ, ನನಗೆ ಮೋಸವಾಗಿದೆ ಎಂದು ಕೆ ಎಸ್‌ ಈಶ್ವರಪ್ಪ ಅವರು, ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.