Home Karnataka State Politics Updates Kiran Mazumdar Shah: ಕಾಂಗ್ರೆಸ್ಸಿನ ಐತಿಹಾಸಿಕ ಗೆಲುವಿಗೆ ಇವೇ ಮೂಲ ಕಾರಣ! 3 ತ್ರಿಸೂತ್ರ ಬಿಚ್ಚಿಟ್ಟ...

Kiran Mazumdar Shah: ಕಾಂಗ್ರೆಸ್ಸಿನ ಐತಿಹಾಸಿಕ ಗೆಲುವಿಗೆ ಇವೇ ಮೂಲ ಕಾರಣ! 3 ತ್ರಿಸೂತ್ರ ಬಿಚ್ಚಿಟ್ಟ ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್ ಷಾ

Kiran Mazumdar Shah
Image source- IBAB

Hindu neighbor gifts plot of land

Hindu neighbour gifts land to Muslim journalist

Kiran Mazumdar Shah: ಕರ್ನಾಟಕದಲ್ಲಿ(Karnataka) ಕಾಂಗ್ರೆಸ್‌(Congress) ಪಕ್ಷ ಐತಿಹಾಸಿಕ ಗೆಲುವನ್ನು ದಾಖಲಿಸಿದ ಬಳಿಕ ಗೆಲುವಿಗೆ ಕಾರಣ ಏನೆಂಬುದಾಗಿ ಅನೇಕ ವಿಮರ್ಶೆ ಮಾಡಾಮಲಾಗುತ್ತಿದೆ. ದೇಶಾದ್ಯಂತ ರಾಜಕೀಯ ತಜ್ಞರು, ನಾಯಕರು, ಉದ್ಯಮಿಗಳು, ಸಿರಿವಂತರು ಹಾಗೂ ಮಾಧ್ಯಮದವರು ವಿವಿಧ ಕಾರಣಗಳನ್ನು ನೀಡಿ ಕಾಂಗ್ರೆಸ್(Congress) ಗೆಲುವಿನ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ. ಅಂತೆಯೇ ಇದೀಗ ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್ ಷಾ(Kiran Mazumdar Shah- founder of Biocon) ಅವರು ಕಾಂಗ್ರೆಸ್ ಅನ್ನು ಹಾಡಿ ಹೊಗಳಿದ್ದು, ಈ ಕಾರಣದಿಂದಾಗಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದಿದ್ದಾರೆ.

ಹೌದು, 135 ಕ್ಷೇತ್ರಗಳಲ್ಲಿ ಗೆದ್ದು ಕಾಂಗ್ರೆಸ್‌ ದಾಖಲೆ ಬರೆದಿದೆ. ಇದೀಗ ಕಾಂಗ್ರೆಸ್‌ನ ಈ ಗೆಲುವಿಗೆ ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್ ಷಾ ಅವರು ಮೂರು ಕಾರಣಗಳನ್ನು ನೀಡಿ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಕರ್ನಾಟಕದ ಜನತೆಯಿಂದ ಕಾಂಗ್ರೆಸ್‌ಗೆ ಭರ್ಜರಿ ತೀರ್ಪು ಸಿಕ್ಕಿದ್ದು ನನ್ನ ಗಮನಕ್ಕೆ ಬಂತು. ಮೂಲಸೌಕರ್ಯ ಅಭಿವೃದ್ಧಿ, ಆರ್ಥಿಕ ಸಮೃದ್ಧಿ ಮತ್ತು ಸಾಮಾಜಿಕ ಸಾಮರಸ್ಯ ಮುಂತಾದವು ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಜನರು ಅಳೆಯುವ ಮಾನದಂಡಗಳಾಗಿವೆ‘ ಇವೆಲ್ಲವನ್ನೂ ಪಾಲಿಸಿದ ಕರ್ನಾಟಕ ಕಾಂಗ್ರೆಸ್ ತನ್ನ ಅಭೂತಪೂರ್ವ ಗೆಲುವು ಸಾಧಿಸಿತು ಎಂಬ ನಿಟ್ಟಿನಲ್ಲಿ ಎಂದು ಅವರು ಬರೆದುಕೊಂಡಿದ್ದಾರೆ.

ಅಂದಹಾಗೆ ಈ ಹಿಂದೆಯೂ ಕೂಡ ಕಿರಣ್ ಅವರು ಅನೇಕ ವಿಚಾರಗಳಾದಿಯಾಗಿ ಕರ್ನಾಟಕದ ಬಿಜೆಪಿ(BJP) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಳೆಯಿಂದಾಗಿ ಬೆಂಗಳೂರಿನಲ್ಲಿ ಅಧ್ವಾನ ಉಂಟಾದಾಗ ಕಠಿಣ ಮಾತುಗಳಿಂದ ಸರ್ಕಾರವನ್ನು ಟೀಕೆ ಮಾಡಿದ್ದರು. ಅಲ್ಲದೆ ರಾಜ್ಯದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಭಿನ್ನಾಭಿಪ್ರಾಯವನ್ನು ಬಗೆಹರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavraj Bommai) ಅವರನ್ನು ಒತ್ತಾಯಿಸಿದ್ದರು. ಯಾವುದೇ ‘ಕೋಮುವಾದ ಹೊರಗಿಡುವಿಕೆ’ಗೆ ಅವಕಾಶ ನೀಡುವುದರಿಂದ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕ ನಾಯಕತ್ವದಲ್ಲಿ ರಾಜ್ಯದ ಸ್ಥಾನವು ನಾಶವಾಗುತ್ತದೆ ಎಂದು ಅವರು ಎಚ್ಚರಿಕೆ ಕೂಡ ನೀಡಿದ್ದರು.

ಇದನ್ನೂ ಓದಿ:D K Shivkumar: ಏಕಾಂಗಿಯಾಗಿ ದೆಹಲಿಗೆ ಬರಲು ಹೈಕಮಾಂಡ್ ಸೂಚನೆ, ರಾಜಧಾನಿಯತ್ತ ಡಿಕೆಶಿ ದೌಡು! ಸಂಜೆಯ ಹೊತ್ತಿಗೆ ಕರ್ನಾಟಕಕ್ಕೆ ಇಬ್ಬರು ಮುಖ್ಯಮಂತ್ರಿಗಳು !!!