Home Karnataka State Politics Updates D V Sadananda gouda: ಮಾಜಿ ಸಿಎಂ ಸದಾನಂದಗೌಡಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ !!

D V Sadananda gouda: ಮಾಜಿ ಸಿಎಂ ಸದಾನಂದಗೌಡಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ !!

D V Sadananda gouda

Hindu neighbor gifts plot of land

Hindu neighbour gifts land to Muslim journalist

D V Sadananda gouda: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಳಿಕ ರಾಜ್ಯ ಬಿಜೆಪಿಯಲ್ಲಿ ಬಹಳಷ್ಟು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಪಕ್ಷದ ಕೆಲವು ವರಿಷ್ಠರಿಗೆ ಬಿಜೆಪಿ ಭಾರೀ ದೊಡ್ಡ ಶಾಕ್ ನೀಡಿದೆ. ಅಂತೆಯೇ ಇದೀಗ ಬಿಜೆಪಿ ಪ್ರಬಲ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಡಿ. ವಿ ಸದಾನಂದಗೌಡರಿಗೆ(D V Sadananda gouda) ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ನೀಡಿದ್ದು ಲೋಕಸಭಾ ಚುನಾವಣೆಯ ಟಿಕೆಟ್ ಕುರಿತು ಊಹಿಸದಂತ ಆಘಾತ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಡಿ ವಿ ಸದಾನಂದ ಗೌಡ ಅವರು ತಮ್ಮ ಪಕ್ಷದ ವಿರುದ್ಧವೇ ಆಕ್ರೋಶಭರಿತ ಹೇಳಿಕೆಗಳನ್ನು ನೀಡುತ್ತಿದ್ದರು. ಬಹಿರಂಗವಾಗೇ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕುರಿತು ಪಕ್ಷಕ್ಕೆ ಮುಜುಗರ ತರುವಂತ ಮಾತುಗಳನ್ನು ಆಡುತ್ತಿದ್ದರು. ಇದು ಇಂದು ನಿಲ್ಲಬಹುದು, ನಾಳೆ ನಿಲ್ಲಬಹುದು ಎಂದು ಹೈಕಮಾಂಡ್ ನಿರೀಕ್ಷಿಸಿದರೂ ಕೂಡ ಹೆಚ್ಚಾಗುತ್ತಿತ್ತೇ ವಿನಹ ಕಡಿಮೆಯಾಗಲಿಲ್ಲ. ಹೀಗಾಗಿ ಗರಂ ಆದ ಹೈಕಮಾಂಡ್ ಸದಾನಂದ ಗೌಡರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಗೆ ಹೋಗಿದ್ದ ಗೌಡರಿಗೆ ಬಿಗ್ ಶಾಕ್ ಎದುರಾಗಿದೆ.

ಹೌದು, ಹೈಕಮಾಂಡ್ ಕರೆದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ ಡಿವಿಎಸ್ ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಮಾತಿಗೆ ಸಿಗಲಿಲ್ಲ. ಕೇಂದ್ರ ಸಚಿವ ಮತ್ತು ಕರ್ನಾಟಕ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ, 2024 ರ ಲೋಕಸಭೆ ಚುನಾವಣೆ ಸಂಬಂಧ ರಾಜಕೀಯ ಪರಿಸ್ಥಿತಿಯ ಕುರಿತು ಚರ್ಚಿಸಿದ್ದು ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರ ನೇಮಕ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದವು ಎಂದು ಮೂಲಗಳು ತಿಳಿಸಿವೆ.

ಈ ಸಲದ ಲೋಕಸಭಾ ಟಿಕೆಟ್ ಇಲ್ಲ ?!
ಬೆಂಗಳೂರು ಉತ್ತರ ಸಂಸದ ಸದಾನಂದಗೌಡರಿಗೆ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.

ಏನಂದ್ರು ಸದಾನಂದ ಗೌಡ್ರು?
ಅಕ್ಟೋಬರ್ 25ರಂದು ಬರಲು ಹೇಳಿದ್ದರಿಂದ ದೆಹಲಿಗೆ ಹೋಗಿದ್ದೆ. ಆದರೆ ನಡ್ಡಾ ಅವರು ಚುನಾವಣೆಯ ಸಭೆಗಳಲ್ಲಿ ಬ್ಯುಸಿ ಆಗಿದ್ದರು. ನನಗಂತೂ ಭೇಟಿ ಸಿಗದೆ ಇರೋದು ಬೇಸರ ಇಲ್ಲ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಬಗ್ಗೆ ನನಗಂತೂ ಗೊತ್ತಿಲ್ಲ. ಅದರ ಬಗ್ಗೆ ನನ್ನನ್ನು ಕೇಳಬೇಡಿ ಎಂದು ಮಾತು ಮುಗಿಸಿದ್ದಾರೆ.

ಇದನ್ನೂ ಓದಿ: Department of Higher education: ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಬಂತು ಹೊಸ ರೂಲ್ಸ್ – ಇಲಾಖೆಯ ನಿರ್ಧಾರಕ್ಕೆ ವಿದ್ಯಾರ್ಥಿಗಳು ಫುಲ್ ಖುಷ್