Home Karnataka State Politics Updates ಕೋಳಿ ಕೇಳಿ ಮಸಾಲೆ ಅರಿಯೋಕೆ ಆಗಲ್ಲ : ‘ಆಪರೇಷನ್ ಹಸ್ತ’ದ ಬಗ್ಗೆ ಡಿಸಿಎಂ ಡಿಕೆಶಿ ಸುಳಿವು

ಕೋಳಿ ಕೇಳಿ ಮಸಾಲೆ ಅರಿಯೋಕೆ ಆಗಲ್ಲ : ‘ಆಪರೇಷನ್ ಹಸ್ತ’ದ ಬಗ್ಗೆ ಡಿಸಿಎಂ ಡಿಕೆಶಿ ಸುಳಿವು

DCM DK Shivakumar
Image credit: The indian express

Hindu neighbor gifts plot of land

Hindu neighbour gifts land to Muslim journalist

DCM DK Shivakumar : ರಾಜಕೀಯದಲ್ಲಿ ಮಾತು, ಜಗಳ, ವಾಗ್ದಾಳಿಗಳು ಸರ್ವೇಸಾಮಾನ್ಯ. ಬಿಜೆಪಿ (Bjp), ಕಾಂಗ್ರೆಸ್ (Congress), ಜೆಡಿಎಸ್ (jds) ಪಕ್ಷದ ನಾಯಕರ ಮಧ್ಯೆ ಸದಾ ವಾಗ್ದಾಳಿಗಳು ನಡೆಯುತ್ತಲೇ ಇರುತ್ತದೆ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿರುವ ವಿಚಾರ ಎಲ್ಲರಿಗೂ ತಿಳಿದಿರುವಂತದ್ದೆ.

ಈ ಮಧ್ಯೆ ಚುನಾವಣೆಯ ಸಂದರ್ಭದಲ್ಲಿ ಕೆಲವು ಬಿಜೆಪಿ ನಾಯಕರುಗಳು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇನ್ನು ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷ ಸೇರಿದ್ದಾರೆ. ಈಗಲೂ ಈ ರೀತಿ ಸೇರ್ಪಡೆಗೊಳ್ಳುತ್ತಲೇ ಇದ್ದಾರೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ರಾಜಕೀಯ ನಾಯಕರುಗಳ ಪರಸ್ಪರ ವಾಕ್ಸಮರಕ್ಕೂ ಕಾರಣವಾಗಿದೆ.

ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತದ ಬಗ್ಗೆ ಭಾರಿ ಚರ್ಚೆಗಳಾಗುತ್ತಿರೂವ ಬೆನ್ನಲ್ಲೆ ಇದೀಗ ಈ ಬಗ್ಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್ (D K Shivakumar) ಅವರು, ‘ಕೋಳಿ ಕೇಳಿ ಮಸಾಲೆ ಅರಿಯೋಕೆ ಆಗಲ್ಲ’ ಎಂದು ಗಾದೆ ಮಾತಿನ ಮೂಲಕ ಶಿವಕುಮಾರ್ ಆಪರೇಷನ್ ಹಸ್ತದ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್(DCM DK Shivakumar) , ‘ಕೋಳಿ ಕೇಳಿ ಮಸಾಲೆ ಅರಿಯೋಕೆ ಆಗಲ್ಲ, ಕಾಂಗ್ರೆಸ್ ಬರುವವರನ್ನು ತಡೆಯೋಕೆ ಆಗಲ್ಲ’ ಎಂದಿದ್ದಾರೆ.
ನಾವು ಯಾರನ್ನೂ ಕಾಂಗ್ರೆಸ್ ಗೆ ಬನ್ನಿ ಎಂದು ಕರೆಯುತ್ತಿಲ್ಲ, ಹಾಗಂತ ಬಿಜೆಪಿ ಬಿಟ್ಟು ಕಾಂಗ್ರೆಸ್ ಬರುವವರನ್ನು ತಡೆಯೋಕೆ ಆಗಲ್ಲ. ನಿಮ್ಮ ಅಧಿಕಾರಕ್ಕಾಗಿ ಅಂದು ನಮ್ಮ ಸರ್ಕಾರ ಬೀಳಿಸಿಲ್ವಾ? ಕಾಂಗ್ರೆಸ್ ಗೆ ಬರುವವರನ್ನು ತಡೆಯೋಕೆ ಆಗುತ್ತಾ? ಎಂದು ಹೇಳುವ ಮೂಲಕ ಸಿಟಿ ರವಿಗೆ (C.T Ravi) ಟಾಂಗ್ ನೀಡಿದರು.

ಇದನ್ನೂ ಓದಿ: Uttar Pradesh: ಹಿಂದು-ಮುಸ್ಲಿಂ ಲವ್‌ ಸ್ಟೋರಿ; ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕ ಎಸ್ಕೇಪ್‌, ಹೆತ್ತವರ ಕೊಲೆ!