Home Karnataka State Politics Updates C.T Ravi: ಅಜ್ಜಯ್ಯನ ಮೇಲೆ ಆಣೆ ಹಾಕಲು ಡಿಕೆಶಿಗೆ ಒತ್ತಾಯ: ಜೀವನದಲ್ಲಿ ಲಂಚ ಪಡೆದಿಲ್ಲ ಅಂತ...

C.T Ravi: ಅಜ್ಜಯ್ಯನ ಮೇಲೆ ಆಣೆ ಹಾಕಲು ಡಿಕೆಶಿಗೆ ಒತ್ತಾಯ: ಜೀವನದಲ್ಲಿ ಲಂಚ ಪಡೆದಿಲ್ಲ ಅಂತ ಪ್ರಮಾಣ ಮಾಡಿ ಎಂದ ಸಿ.ಟಿ ರವಿ

C.T Ravi
Image source :News 9live

Hindu neighbor gifts plot of land

Hindu neighbour gifts land to Muslim journalist

ಸಿ.ಟಿ.ರವಿ: ಚಿಕ್ಕಮಗಳೂರಿನಲ್ಲಿಂದು (ಚಿಕ್ಕಮಗಳೂರು) ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಸಿ.ಟಿ ರವಿ (ಸಿ.ಟಿ. ರವಿ) ಅವರು, ನನ್ನ ಜೀವನದಲ್ಲಿ ಒಮ್ಮೆಯೂ ಲಂಚ ತೆಗೆದುಕೊಂಡಿಲ್ಲ ಅಂತಾ ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ಅವರು ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.

 

ನಿಜವಾಗಲೂ ಡಿಕೆ ಶಿವಕುಮಾರ್ ಅವರು ತಮ್ಮ ಸರ್ಕಾರ ಪ್ರಮಾಣಿಕ ಅನ್ನೋದಾದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಸಿ.ಟಿ ರವಿ ಶಾಕ್ ಕೊಟ್ಟಿದ್ದಾರೆ.

 

ಮುಖ್ಯವಾಗಿ ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡಲಿ ಅನ್ನುವುದು ನಮ್ಮ ಆರೋಪವಲ್ಲ. ಹೆಚ್ಚುವರಿ ಗುತ್ತಿಗೆದಾರರ ಸಂಘ (BBMP ಗುತ್ತಿಗೆದಾರರ ಒಕ್ಕೂಟ) ಆರೋಪ. ಡಿಕೆಶಿಗೆ ಅಜ್ಜಯ್ಯನ ಮಠದ ಬಗ್ಗೆ ಭಕ್ತಿ ವಿಷಯ ಅಲ್ಲಿಗೆ ಕರೆದಿದ್ದಾರೆ. ನಾವು ತಪ್ಪೇ ಮಾಡಿಲ್ಲ ಅನ್ನೋದಾದ್ರೆ ಹೋಗಿ ಪ್ರಮಾಣ ಮಾಡಬಹುದಲ್ವಾ? ಎಂದು ಪ್ರಶ್ನಿಸಿದ್ದಾರೆ.

 

ಗುತ್ತಿಗೆದಾರರ ಬಳಿ ನನಗೆ ಮಾಹಿತಿ ಇದೆ. ಮೊದಲು ಹಳೆಯದ್ದಕ್ಕೆಲ್ಲಾ ಸೇರಿಸಿ 7% ಫಿಕ್ಸ್ ಮಾಡಿದ್ರು, ಮದ್ಯವರ್ತಿಗಳು 10% ಅಂದ್ರು ಆಮೇಲೆ ಚರ್ಚೆ ಮಾಡಿ 15% ಆದ್ರೆ ಮಾತ್ರ ಕ್ಲಿಯರ್ ಅಂತಾ ಹೇಳಿದ್ದಾರೆ. ಆರೋಪ ಗುತ್ತಿಗೆದಾರರ ಸಂಘದ್ದು, ಸುಳ್ಳು ಅನ್ನೋದಾದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಸತ್ಯ ಮಾಡಲಿ. ಸತ್ಯ ಮಾಡುವಾಗ ನನ್ನ ಜೀವನದಲ್ಲೇ ಲಂಚ ತೆಗೆದುಕೊಂಡಿಲ್ಲ ಎಂದು ಹೇಳಿದ್ರೆ ಸಾಕು, ಬೇರೆ ಸಾಕ್ಷಿಯೇ ಬೇಕಾಗಿಲ್ಲ ಎಂದು ಹೇಳಿದ್ದಾರೆ.

 

ಕಾಂಗ್ರೆಸ್ ನ ನಿರೀಕ್ಷೆಯ ಶಾಸಕರು ಒಂದೇ ದಿನ ವಸೂಲಿ ಮಾಡಿದ್ದಾರೆ. ನಾವು ಅಷ್ಟು ಖರ್ಚು ಮಾಡಿದ್ದೇವೆ ಅಂತ ಬಹಿರಂಗವಾಗಿ ಹೇಳ್ತಿದ್ದಾರೆ. ದಾನ-ಧರ್ಮಕ್ಕೆ ರಾಜಕಾರಣ ಮಾಡ್ತೀನಾ? ನಾನೇನು ಧರ್ಮರಾಯನಾ? ಖರ್ಚು ಮಾಡಿರೋದು ವಸೂಲಿ ಆಗಬೇಕು, ಇಲ್ಲ ಅಂದ್ರೆ ಹೆಂಡ್ರು ಮಕ್ಕಳನ್ನ ಬೀದಿಯಲ್ಲಿ ನಿಲ್ಲಿಸ್ಲಾ? ಅಂತಿದ್ದಾರೆ. ಒಟ್ಟಿನಲ್ಲಿ ಕರಪ್ಷನ್-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕಿಡಿ ಕಾರಿದ್ದಾರೆ.

 

ಇನ್ನು ದೇಶ-ರಾಜ್ಯದ ಹಗರಣಗಳನ್ನ ಪಟ್ಟಿ ಮಾಡಿದ್ರೆ 90% ಕಾಂಗ್ರೆಸ್ ಅವಧಿಯೇ ಆಗಿದೆ. 90% ಅಪರಾಧಿ ಸ್ಥಾನದಲ್ಲಿ ಇರೋರು ಕಾಂಗ್ರೆಸ್ ಸಚಿವರು, ಆ ಕಾಲದ ಅಧಿಕಾರಿಗಳು. ಭ್ರಷ್ಟಾಚಾರದ ಬೀಜ ಬಿದ್ದದ್ದೇ ಕಾಂಗ್ರೆಸ್ ಪಕ್ಷ. ಭ್ರಷ್ಟಾಚಾರದಿಂದ ಕಾಂಗ್ರೆಸ್ ವಿಮುಕವಾಗಿದೆ ಅನ್ನೋದನ್ನ ಯಾರೂ ನಂಬಲ್ಲ. ಏಕೆಂದರೆ ಭ್ರಷ್ಟಾಚಾರದ ಮತ್ತೊಂದು ಮುಖವೇ ಕಾಂಗ್ರೆಸ್.

ಇದನ್ನೂ ಓದಿ : ಬೆಳ್ತಂಗಡಿ: ಹೈ ಟೆನ್ಷನ್ ಲೈನ್ ಗೆ ಅಲ್ಯೂಮಿನಿಯಂ ಏಣಿ ತಾಗಿ ಶಾಕ್!