Home Karnataka State Politics Updates Next Chief Minister in Karnataka : ಮೊದಲ ಶಾಸಕಾಂಗ ಸಭೆಗೆ ಅನೇಕ ಶಾಸಕರ ಗೈರು!...

Next Chief Minister in Karnataka : ಮೊದಲ ಶಾಸಕಾಂಗ ಸಭೆಗೆ ಅನೇಕ ಶಾಸಕರ ಗೈರು! ಸಿದ್ದುಗೆ 75, ಡಿಕೆಶಿಗೆ 40 ಶಾಸಕರ ಬೆಂಬಲ! ತಲೆಕೆಳಗಾಯ್ತು ಹೈಕಮಾಂಡ್ ಲೆಕ್ಕಾಚಾರ!

Next Chief Minister in Karnataka
Image source- Hindustan Times

Hindu neighbor gifts plot of land

Hindu neighbour gifts land to Muslim journalist

Karnataka next CM Selection: ಕಾಂಗ್ರೆಸ್(Congress) ಅಭೂತಪೂರ್ವ ಗೆಲುವು ಸಾಧಿಸಿದರೂ ಕೂಡ ಸಿಎಂ(Karnataka next CM Selection) ಯಾರು ಎಂಬ ವಿಚಾರ ಮಾತ್ರ ಯಾಕೋ ಹಗ್ಗಜಗ್ಗಾಟದ ರೂಪ ತಾಳುತ್ತಿದೆ. ಫಲಿತಾಂಶ ಬಂದು ಎರಡು ದಿನವಾದರೂ ಕೂಡ ಕಾಂಗ್ರೆಸ್ ಹೈಕಮಾಂಡ್(High Command) ಇನ್ನೂ ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ. ಆದರೆ ಈ ನಡುವೆ ವರಿಷ್ಠರಿಗೆ ಮತ್ತೊಂದು ತಲೆನೋವು ಎದುರಾಗಿದೆ.

ನಿನ್ನೆ ದಿನ ಬೆಂಗಳೂರಿನ(Bangalore) ಶಾಂಗ್ರಿಲಾ(Shangrila) ಹೋಟೆಲ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕಾಂಗ ಸಭೆ ನಡೆಯಿತು. ಈ ಮಹತ್ವದ ಸಭೆಯಲ್ಲಿ ಸಿಎಲ್ ಪಿ(CLP) ನಾಯಕನಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಈ ಹಮತ್ವದ ಸಭೆಗೆ ಕಾಂಗ್ರೆಸ್ ನ ಅನೇಕ ಶಾಸಕರು ಗೈರಾಗಿದ್ದಾರೆ.

ಮೊದಲ ಸಭೆಗೆ ಶಾಸಕರು ಗೈರಾದದ್ದು ಸರ್ಕಾರ ರಚನೆಯ ಆರಂಭಿಕ ಹಂತದಲ್ಲೇ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಂದಹಾಗೇ ನಿನ್ನೆಯ ಮಹತ್ವದ ಸಿಎಲ್ ಪಿ ಸಭೆಗೆ ಅನೇಕ ಶಾಸಕರು ಬರಲು ಸಾಧ್ಯವಾಗದ ಕಾರಣ ಎಲ್ಲಾ ಶಾಸಕರ ನಿರ್ಧಾರವನ್ನು ಎಐಸಿಸಿ(AICC) ಅಧ್ಯಕ್ಷರಿಗೆ ಬಿಡಲು ನಿರ್ಧರಿಸಿದರು.

ಅಂದರೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರಿಗೆ ಬಿಡಲು ಸಿಎಲ್ಪಿ ಸಭೆಯಲ್ಲಿ ನಿರ್ಧರಿಸಲಾಯಿತು. ಹೀಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಇಂದೂ ಮುಂದುವರೆಯಲಿದ್ದು, ಶಾಸಕರು ಒಬ್ಬೊಬ್ಬರಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದೆ ಬಂದು ತಮ್ಮ ಸಿಎಂ ಅಭ್ಯರ್ಥಿಯ ಆಯ್ಕೆಯ ಮಾಹಿತಿಯನ್ನು ತೆರೆದಿಡಲಿದ್ದಾರೆ.

ಇದೆಲ್ಲದರ ನಡುವೆ ಸಿದ್ದರಾಮಯ್ಯ(Siddaramaiah) ಅವರಿಗೆ ಸುಮಾರು 75 ಶಾಸಕರ ಬೆಂಬಲವಿದ್ದರೆ, ಶಿವಕುಮಾರ್(DK Shivkumar) ಅವರಿಗೆ ಸುಮಾರು 40 ಶಾಸಕರ ಬೆಂಬಲವಿದೆ ಎನ್ನಲಾಗುತ್ತಿದೆ. ಇದು ಕೊಂಚ ತಲೆನೋವಾಗಿ ಕಾಡುತ್ತಿದೆ. ಹೀಗಾಗಿ ನಾಳೆ ಎಐಸಿಸಿ ಅಧ್ಯಕ್ಷರು ಶಾಸಕರನ್ನು ಒಬ್ಬೊಬ್ಬರಾಗಿ ಭೇಟಿಯಾಗಿ ಸಿಎಲ್ಪಿ ನಾಯಕನ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಒಟ್ಟಿನಲ್ಲಿ ಸಿಎಲ್ಪಿ ತನ್ನ ವರದಿಯನ್ನು ಪಕ್ಷದ ಹೈಕಮಾಂಡ್ಗೆ ಕಳುಹಿಸಲಿದ್ದು, ಅವರು ಮುಂದಿನ ಕರ್ನಾಟಕದ ಮುಖ್ಯಮಂತ್ರಿಯ ಹೆಸರನ್ನು ಆಯ್ಕೆ ಮಾಡಿ ಘೋಷಿಸಲಿದ್ದಾರೆ. ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದೇ ತೀವ್ರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ:Next Chief minister in Karnataka : ಯಾರಾಗ್ತಾರೆ ಗೊತ್ತಾ ಕರ್ನಾಟಕದ ಸಿಎಂ? ಇಲ್ಲಿದೆ ನೋಡಿ ಕಾಂಗ್ರೆಸ್ ಹೈಕಮಾಂಡ್ ನ ಹೊಸ ಲೆಕ್ಕಾಚಾರ!