Home Karnataka State Politics Updates Karnataka High Court: ಜನನ-ಮರಣ ತಿದ್ದುಪಡಿ ಕಾಯ್ದೆ- ಕೇಂದ್ರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ನಿಂದ ತಡೆ...

Karnataka High Court: ಜನನ-ಮರಣ ತಿದ್ದುಪಡಿ ಕಾಯ್ದೆ- ಕೇಂದ್ರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ನಿಂದ ತಡೆ !!

Karnataka High Court

Hindu neighbor gifts plot of land

Hindu neighbour gifts land to Muslim journalist

Karnataka High Court: ಕೇಂದ್ರದ ಜನನ-ಮರಣ(Birth Death Registeration)ತಿದ್ದುಪಡಿ ಕಾಯ್ದೆಗೆ ಕರ್ನಾಟಕ ಹೈಕೋರ್ಟ್ (Karnataka High Court)ಮಧ್ಯಂತರ ತಡೆ ವಿಧಿಸಿದೆ. ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಜನನ ಮರಣ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವ ಅಧಿಕಾರವನ್ನು ಸಹಾಯಕ ಕಮಿಷನರ್(ಎ.ಸಿ.) ನ್ಯಾಯಾಲಯಕ್ಕೆ ನೀಡುವ ಸೆಕ್ಷನ್ 13(3)ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಜನನ ಅಥವಾ ಮರಣ ದಿನಾಂಕ ಪರಿಶೀಲಿಸುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್ ಅಥವಾ ಮುನ್ಸಿಫ್ ನ್ಯಾಯಾಲಯದಿಂದ ಕಂದಾಯ ಇಲಾಖೆಗೆ ಸೇರುವ ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ)ಕಾಯ್ದೆ 2023ರ ಸೆಕ್ಷನ್ 13(3)ನಲ್ಲಿ ಈ ಅಧಿಕಾರ ನೀಡಲಾಗಿದೆ.

ಈ ಸೆಕ್ಷನ್ ಕುರಿತು ಆಕ್ಷೇಪ ವ್ಯಕ್ತಪಡಿಸಿ ಬೆಂಗಳೂರು ವಕೀಲರ ಸಂಘ ಕರ್ನಾಟಕ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದೆ. ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿರುವ ಹಿನ್ನೆಲೆ ವಿಚಾರಣೆ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸುವವರೆಗೆ ಇಲ್ಲವೇ ಮುಂದಿನ ವಿಚಾರಣೆಯವರೆಗೆ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ)ಕಾಯ್ದೆ 2023ರ ಸೆಕ್ಷನ್ 13(3) ತಡೆಯಾಜ್ಞೆ ನೀಡಲಾಗಿರುವ ಕುರಿತು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

 

ಇದನ್ನು ಓದಿ: DA Arreras: ಸರ್ಕಾರಿ ನೌಕರರೇ, ಡಿಎ ಬೆನ್ನಲ್ಲೇ 18 ತಿಂಗಳ ಆರಿಯರ್ಸ್ ಬಗ್ಗೆ ಬಂತು ಗುಡ್ ನ್ಯೂಸ್ !!