Home Karnataka State Politics Updates Jagadish shetter: ಬಿಜೆಪಿಗೆ ಎಂಟ್ರಿ ಕೊಡುತ್ತಿದ್ದಂತೆ ಹೊಸ ಬಾಂಬ್ ಸಿಡಿದ ಜಗದೀಶ್ ಶೆಟ್ಟರ್!!

Jagadish shetter: ಬಿಜೆಪಿಗೆ ಎಂಟ್ರಿ ಕೊಡುತ್ತಿದ್ದಂತೆ ಹೊಸ ಬಾಂಬ್ ಸಿಡಿದ ಜಗದೀಶ್ ಶೆಟ್ಟರ್!!

Jagadish shetter

Hindu neighbor gifts plot of land

Hindu neighbour gifts land to Muslim journalist

Jagadish shetter: ವಿಧಾನಸಭಾ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿ ಸತ್ತರೂ ಬಿಜೆಪಿ ಹೋಗಲ್ಲ ಎಂದ ಜಗದೀಶ್ ಶೆಟ್ಟರ್(Jagadish shetter) ಕೆಲವೇ ದಿನಗಳ ಹಿಂದಷ್ಟೇ ಬಿಜೆಪಿ ರೀ ಎಂಟ್ರಿ ಕೊಟ್ಟಿದ್ದಾರೆ. ಆದರೆ ಈ ಬೆನ್ನಲ್ಲೇ ಹೊಸ ಬಾಂಬ್ ಒಂದನ್ನು ಅವರು ಸಿಡಿಸಿದ್ದಾರೆ.

ಹೌದು, ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್, ನಾನೀಗ ಮರಳಿ ಬಿಜೆಪಿ ಬಂದಿದ್ದೇನೆ. ನನ್ನೊಂದಿಗೆ ಕಾಂಗ್ರೆಸ್ ಸೇರಿದವರೆಲ್ಲರೂ ಮತ್ತೆ ಬಿಜೆಪಿ(BJP)ಗೆ ಬರಲಿದ್ದಾರೆ. ಇಷ್ಟು ಮಾತ್ರವಲ್ಲ, ಕಾಂಗ್ರೆಸ್ ನ ಹಲವರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಆದಷ್ಟು ಶೀಘ್ರದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ದೊಡ್ಡ ಬಾಂಬ್ ಸಿಡಿಸಿದ್ದಾರೆ.

ಅಲ್ಲದೆ ಬಿಜೆಪಿಯಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಸ್ಥಾನಮಾನ ಏನೆಂದು ಪ್ರಶ್ನಿಸಿದಕ್ಕೆ ನಾನು ಪಕ್ಷ ಕೊಡುವ ಯಾವುದೇ ಜವಾಬ್ದಾರಿಯನ್ನಾದರೂ ನಿರ್ವಹಿಸಲು ಸಿದ್ಧ. ಪಕ್ಷ ಹೇಳಿದರೆ ಲೋಕಸಭೆ ಚುನಾವಣೆಗೆ(Parliament election)ಸ್ಪರ್ಧಿಸಲು ಸಿದ್ಧ. ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕು ಎನ್ನುವುದೇ ನಮ್ಮ ಗುರಿ ಎಂದು ಹೇಳಿದ್ದಾರೆ.