Home Karnataka State Politics Updates Jagadish shetter: ಬಿಜೆಪಿ ಸೇರ್ಪಡೆ ವಿಚಾರ- ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಜಗದೀಶ್ ಶೆಟ್ಟರ್ !! ಬಿಜೆಪಿಗಿದು...

Jagadish shetter: ಬಿಜೆಪಿ ಸೇರ್ಪಡೆ ವಿಚಾರ- ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಜಗದೀಶ್ ಶೆಟ್ಟರ್ !! ಬಿಜೆಪಿಗಿದು ಎಚ್ಚರಿಕೆಯೇ?

Hindu neighbor gifts plot of land

Hindu neighbour gifts land to Muslim journalist

Jagadish shetter: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ(Lakshmana savadi) ಬಿಜೆಪಿ ತೊರೆದು ಕಾಂಗ್ರೆಸ್ ತೊರೆದಿದ್ದರು. ಆದರೆ ಅಚ್ಚರಿ ಎಂಬಂತೆ ಕೆಲವು ದಿನಗಳ ಹಿಂದಷ್ಟೇ ಜಗದೀಶ್ ಶೆಟ್ಟರ್(Jagadish shetter) ಮರಳಿ ಬಿಜೆಪಿ ಸೇರಿ ಮತ್ತೆ ತಮ್ಮ ಮನೆ ಸೇರಿಕೊಂಡರು. ಈ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಅವರು ಸಂದರ್ಶನದಲ್ಲಿ ಅಚ್ಚರಿ ಸ್ಟೇಟ್ಮೆಂಟ್ ಒಂದನ್ನು ನೀಡಿದ್ದಾರೆ.

ಹೌದು, ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು ಬಿಜೆಪಿ ತೊರೆದಿದ್ದರ ಬಗ್ಗೆ ಪಶ್ಚಾತ್ತಾಪವಿಲ್ಲ, ಕರೆಯದಿದ್ದರೆ ಕಾಂಗ್ರೆಸ್‌ನಲ್ಲೇ ಇರುತ್ತಿದ್ದೆ ಎಂದು ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ. ಅಂದರೆ ರಾಜಕೀಯ ಮಾಡಲು ಪಕ್ಷ ಬೇಡ ತನ್ನ ವರ್ಚಸ್ಸು ಸಾಕು, ರಾಜಕೀಯಕ್ಕೆ ಯಾವ ಪಕ್ಷದ ಅಗತ್ಯವೇ ಇಲ್ಲ ಎನ್ನುವಂತೆ ಹೇಳಿದ್ದು ಒಂದೆಡೆಯಾದರೆ ಬಿಜೆಪಿಗೆ ಬರಲು ಸಂಪೂರ್ಣ ಒಪ್ಪಿಗೆ ಇಲ್ಲ ಎನ್ನುವರ್ಥದಲ್ಲಿ ಹೇಳೆದಂತಿದೆ. ಕೆಲವರು ಇದು ಬಿಜೆಪಿಗೆ ಮತ್ತೆ ಎಚ್ಚರಿಕೆಯಾಗಿದೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಶೆಟ್ಟರ್ ಬಹಳಷ್ಟು ನೋವಿನಿಂದ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದೆ. ಅಲ್ಲಿದ್ದಷ್ಟು ಕಾಲ ಆ ಪಕ್ಷವನ್ನು ಬಲಪಡಿಸಲು ನನ್ನ ಕೈಲಾದ ಪ್ರಯತ್ನ ಮಾಡಿದೆ. ಹೀಗಾಗಿ, ಇಲ್ಲಿಂದ ಅಲ್ಲಿಗೆ ಹೋದಾಗ ಅಥವಾ ಅಲ್ಲಿಂದ ಇಲ್ಲಿಗೆ ವಾಪಸ್ ಬಂದಾಗ ಪಶ್ಚಾತ್ತಾಪ ಉಂಟಾಗಿಲ್ಲ. ಇದೀಗ ಬಿಜೆಪಿ ಕಡೆಯಿಂದ ಪ್ರತಿಕ್ರಿಯೆ ಬಂದಿದ್ದರಿಂದ ನಾನು ಅದಕ್ಕೆ ಸ್ಪಂದಿಸಿದೆ ಎಂದು ಹೇಳಿದ್ದಾರೆ.