Home Karnataka State Politics Updates Yatindra Siddaramaiah : ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಬಿಡಬಾರದು – ಯತೀಂದ್ರ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ

Yatindra Siddaramaiah : ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಬಿಡಬಾರದು – ಯತೀಂದ್ರ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

Yatindra Siddaramaiah : ಭಾರತವನ್ನ ಹಿಂದೂ ರಾಷ್ಟ್ರವಾಗಿಸುವ ಯತ್ನ ನಡೆಯುತ್ತಿದೆ. ನಾವುಗಳು ಈ ರೀತಿ ಆಗಲು ಬಿಡಬಾರದು ಎನ್ನುವ ಮೂಲಕ ಹಿಂದೂ ರಾಷ್ಟ್ರ ಕಲ್ಪನೆಗೆ ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ(Yatindra Siddaramaiah )ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರು ನಗರದಲ್ಲಿ(Mysore) ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ನಡೆದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು ಹಿಂದೂ ರಾಷ್ಟ್ರ ಅಪಾಯಕಾರಿ ಎಂದು ಅಂಬೇಡ್ಕರ್‌ ಹೇಳಿದ್ದರು. ಕೆಲವರು ಹಿಂದೂ ರಾಷ್ಟ್ರ ಮಾಡಬೇಕು ಎಂದು ಹೊರಟಿದ್ದಾರೆ ಅದಕ್ಕೆ ಬಿಡಬಾರದು ಎಂದು ಹೇಳಿದ್ದಾರೆ. ಭಾರತವು ವಿವಿಧ ಜಾತಿ, ಧರ್ಮ, ಸಂಸ್ಕೃತಿಯ ದೇಶವಾಗಿದೆ. ಆದರೆ ಕೆಲವರು ರಾಜಕೀಯ ಲಾಭಕ್ಕಾಗಿ ಒಂದು ಧರ್ಮದ ರಾಷ್ಟ್ರವಾಗಿಸಲು ಯತ್ನಿಸುತ್ತಿದ್ದಾರೆ. ಅದನ್ನು ನಾವು ವಿರೋಧಿಸಬೇಕು ಎಂದರು.

ಅಲ್ಲದೆ ದೇಶದ ಸಂವಿಧಾನ ಬಹಳ ಗಟ್ಟಿಯಾಗಿದೆ. ಕೆಲವು ಜನ ಮಾತ್ರ ಒಂದು ಧರ್ಮದ ರಾಷ್ಟ್ರವಾಗಬೇಕೆಂದು ಬಯಸುತ್ತಿದ್ದಾರೆ. ಬಹುಸಂಖ್ಯಾತರು ಸೌಹರ್ದತೆ, ಸೋದರರಂತೆ ಬಾಳಬೇಕೆಂದು ಬಯಸುತ್ತಿದ್ದಾರೆ. ಸಾರ್ವಜನಿಕವಾಗಿ ನಾವು ನೆಮ್ಮದಿಯಾಗಿರಬೇಕೆಂದರೆ ಸಂವಿಧಾನವನ್ನ ನಾವು ರಕ್ಷಣೆ ಮಾಡಬೇಕು. ಭಾರತದ ದೇಶ ವಿವಿಧತೆಯಲ್ಲಿ ಏಕೆತೆಯನ್ನ ಸಾರುವ ದೇಶವಾಗಿದೆ. ಇಲ್ಲಿ ಹಲವು ಜಾತಿ ಧರ್ಮಗಳು ಸಾಮರಸ್ಯದಿಂದ ಬಾಳುತ್ತಿವೆ. ಇದೇ ಭಾರತ ದೇಶದ ಶಕ್ತಿ ಕೂಡ ಆಗಿದೆ‌. ಎಲ್ಲಿಯ ತನಕ ನಮ್ಮ ದೇಶದಲ್ಲಿ ವೈವಿದ್ಯತೆ ಇರುತ್ತೆ, ಎಲ್ಲಾ ಸಮುದಾಯಗಳು ಶಾಂತಿ ಸಂತೋಷದಿಂದ ಇರುಲು ಸಾಧ್ಯವಾಗುತ್ತೆ, ಅಲ್ಲಿಯವರೆಗೆ ಭಾರತ ದೇಶ ಮುಂದುವರೆಯಲು ಸಾಧ್ಯ ಎಂದರು.