Home Karnataka State Politics Updates Karnataka Election -2023 : ಈ ಶಾಸಕನ ವಿರುದ್ಧ ತೊಡೆ ತಟ್ಟಿ ಒಂದೇ ವಾಹನದಲ್ಲಿ ಬಂದು...

Karnataka Election -2023 : ಈ ಶಾಸಕನ ವಿರುದ್ಧ ತೊಡೆ ತಟ್ಟಿ ಒಂದೇ ವಾಹನದಲ್ಲಿ ಬಂದು ನಾಮಪತ್ರ ಸಲ್ಲಿಸಿದ ಇಬ್ಬರು ಪಕ್ಷೇತರ ಅಭ್ಯರ್ಥಿಗಳು

Karnataka Election -2023

Hindu neighbor gifts plot of land

Hindu neighbour gifts land to Muslim journalist

Independent candidates : ರಾಜ್ಯ ವಿಧಾನಸಭೆಯ ಚುನಾವಣೆ ನಿಮಿತ್ತ ನಿನ್ನ ವರೆಗೂ ನಾಮಪತ್ರ ಸಲ್ಲಿಸಲು ಗಡುವುನೀಡಲಾಗಿತ್ತು. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು, ಟಿಕೆಟ್ ಸಿಗದೆ ಬಂಡಯಾ ಎದ್ದವರು ಎಲ್ಲರೂ ತರಾತುರಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಇಲ್ಲೊಂದು ಕ್ಷೇತ್ರದಲ್ಲಿ ಶಾಸಕನ ವಿರುದ್ಧ ತೊಡೆ ತಟ್ಟಿದ್ದ ಇಬ್ಬರು ಪಕ್ಷೇತರ ಅಭ್ಯರ್ಥಿಗಳು (Independent candidates) ಒಂದೇ ವಾಹನದಲ್ಲಿ ಬಂದು ನಾಮಪತ್ರ ಸಲ್ಲಿಸಿರುವ ವಿಶೇಷ ಘಟನೆ ನಡೆದಿದೆ.

ಹೌದು, ಧಾರವಾಡ ಗ್ರಾಮೀಣ (Dharawada Rural) ಕ್ಷೇತ್ರದ ಹಾಲಿ ಶಾಸಕನ ವಿರುದ್ಧ ತೊಡೆ ತಟ್ಟಿದ್ದ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಒಂದೇ ವಾಹನದಲ್ಲಿ ಬಂದು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಅಂದಹಾಗೆ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ನಿನ್ನೆ ದಿನ ನಾಲ್ಕು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು ಅದರಲ್ಲಿ ಈ ಎರಡು ನಾಮಪತ್ರಗಳು ಮಾತ್ರ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕರಾಗಿರುವ ಅಮೃತ ದೇಸಾಯಿ ಕಳೆದ 2018 ರ ಚುನಾವಣೆಗೆ ಧಾರವಾಡ ಗ್ರಾಮೀಣ ಕ್ಷೇತ್ರದ (Amruta Desai) ಅವರೊಂದಿಗೆ ನಿಂತು ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಸವರಾಜ ಕೊರವರ ಹಾಗೂ ತವನಪ್ಪ ಅಷ್ಟಗಿ ಇಂದು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಗಮನಾರ್ಹ ವಿಷಯ ಏನಂದ್ರೆ, ಬಸವರಾಜ ಕೊರವರ ಹಾಗೂ ತವನಪ್ಪ ಅಷ್ಟಗಿ ಇಬ್ಬರೂ ಸಹ ಒಂದೇ ವಾಹನದಲ್ಲಿ ಮೆರವಣಿಗೆ ಮೂಲಕ ಆಗಮಿಸಿ, ಬೇರೆ ಬೇರೆಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿಗೆ ಹಿನ್ನಡೆಯಾಗುತ್ತಾ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇದನ್ನೂ ಓದಿ: Shivmogga BJP Ticket : ಕೊನೆಯ ಹಂತದಲ್ಲಿ ಕೈ ತಪ್ಪಿದ ಶಿವಮೊಗ್ಗ ಟಿಕೆಟ್! ರಾಜಕೀಯ ನಿಲುವು ಪ್ರಕಟಿಸಿದ ತಂದೆ – ಮಗ!