Home Karnataka State Politics Updates Nisha Yogishwar: ‘ಎಲ್ಲಾ ಸತ್ಯವನ್ನು ಬಿಚ್ಚಿಟ್ಟು ಮುಖವಾಡ ಕಳಚುತ್ತೇನೆ’ ತಂದೆ ಯೋಗೇಶ್ವರ್ ವಿರುದ್ಧವೇ ಬಾಂಬ್ ಸಿಡಿಸಿ,...

Nisha Yogishwar: ‘ಎಲ್ಲಾ ಸತ್ಯವನ್ನು ಬಿಚ್ಚಿಟ್ಟು ಮುಖವಾಡ ಕಳಚುತ್ತೇನೆ’ ತಂದೆ ಯೋಗೇಶ್ವರ್ ವಿರುದ್ಧವೇ ಬಾಂಬ್ ಸಿಡಿಸಿ, ಭಯಾನಕ ಸತ್ಯಗಳನ್ನು ಬಿಚ್ಚಿಟ್ಟ ಪುತ್ರಿ ನಿಶಾ !!

Hindu neighbor gifts plot of land

Hindu neighbour gifts land to Muslim journalist

Nisha Yogishwar: ಚೆನ್ನಪಟ್ಟ ಕ್ಷೇತ್ರದ ಉಪ ಚುನಾವಣೆ ಕಾವು ಜೋರಾಗಿದೆ. ಈ ವಿಚಾರವಾಗಿ ಈಗ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್‌(C P Yogishwar )ಬಂಡಾಯವೆದ್ದಿದ್ದು ತಮ್ಮ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಚನ್ನಪಟ್ಟಣದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವ ಇಂಗಿತ ಹೊರಹಾಕಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್‌ ಪಕ್ಷ ಸೇರುವ ಸುಳಿವು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಯೋಗೇಶ್ವರ್ ಪುತ್ರಿ ನಿಶಾ(Nisha Yogishwar) ತಮ್ಮ ತಂದೆಯ ವಿರುದ್ಧವೇ ಹೊಸ ಬಾಂಬ್ ಸಿಡಿಸಿದ್ದಾರೆ.

ಹೌದು, ಒಂದೆಡೆ ಚನ್ನಪಟ್ಟಣದಲ್ಲಿ(Channapattana) ಟಿಕೆಟ್‌ ಪಡೆಯಲು ಸಿಪಿವೈ ಹರಸಾಹಸ ಪಡುತಿದ್ದರೆ, ಮತ್ತೊಂದೆಡೆ ಅಪ್ಪನಿಂದ ಅಂತರ ಕಾಯ್ದುಕೊಂಡಿರುವ ಪುತ್ರಿ ನಿಶಾ ಮತ್ತೆ ಟಾಂಗ್ ನೀಡಿದ್ದಾರೆ. ಹೀಗಾಗಿ ಈಗ ಅಪ್ಪ – ಮಗಳ ಜಗಳ ಮತ್ತೆ ಮುನ್ನೆಲೆಗೆ ಬಂದಿದೆ. ‘ಕೆಲವರು ಒಳ್ಳೆಯವರಂತೆ ಸಮಾಜಕ್ಕೆ ಬಿಂಬಿಸಿ ತೋರಿಸಿದ್ದಾರೆ. ಅಂಥವರ ಸತ್ಯವನ್ನು ಹೊರ ತರುತ್ತೇನೆ” ಇದು ಸಿಪಿ ಯೋಗೇಶ್ವರ್‌ ಅವರ ಪುತ್ರಿ ನಿಶಾ ಯೋಗೇಶ್ವರ್ (Nisha Yogeshwar) ಹೊಸ ಬಾಂಬ್ ಸಿಡಿಸಿದ್ದಾರೆ. ಸದ್ಯ ನಿಶಾ ಅವರು ಯಾರ ಹೆಸರು ಬಳಸದೇ ಮಾರ್ಮಿಕವಾಗಿ ನಿಶಾ ವಾಗ್ದಾಳಿ ನಡೆಸಿದ್ದಾರೆ.

https://www.instagram.com/reel/DBY1E1KKKNM/?igsh=ZXZoOHN1M3V5OWFv

ಅಲ್ಲದೆ ‘ನಾನು ನನ್ನ ಜೀವನದಲ್ಲಿ ನೆಮ್ಮದಿಯಾಗಿ ಇರಲು ಪ್ರಯತ್ನಿಸಿದೆ. ಆದರೆ‌ ಏನನ್ನೂ ಮಾಡದ ಪರಿಸ್ಥಿತಿಯಿದೆ. ಯಾವ ಕ್ಷೇತ್ರದಲ್ಲೂ ಮುಂದೆ ಬರದಂತೆ‌ ಮಾಡಿದ್ದಾರೆ. ವಿದ್ಯಾಭ್ಯಾಸ, ಸಿನಿಮಾ‌ ಕ್ಷೇತ್ರದಿಂದಲೂ ನನಗೆ ಸಕ್ಸಸ್ ಆಗದಂತೆ ನೋಡಿಕೊಂಡರು. ಪದವಿ ಮಾಡದಂತೆ ಒತ್ತಡ ಹಾಕಿದರು. ಕಷ್ಟಪಟ್ಟು ಕಾಲೇಜಿಗೆ ಟಾಪರ್ ಆದೆ. ಉದ್ಯೋಗ ಮಾಡದಂತೆ ಒತ್ತಡ ಹಾಕಿದರು. ರಾಜಕೀಯದಲ್ಲಿ ಬರುವುದಕ್ಕೆ‌ ಪ್ರಯತ್ನ ಪಟ್ಟೆ. ಅಲ್ಲೂ ನಾನೂ ರಾಜಕೀಯಕ್ಕೆ ಬರದಂತೆ‌ ನೋಡಿಕೊಂಡರು. ಈಗ ಸಮಾಜ ಸೇವೆ ಮಾಡುವುದಕ್ಕೆಂದು ಹೊರಟರೂ ಬಿಡುತ್ತಿಲ್ಲ” ಎಂದು ವಿಡಿಯೋದಲ್ಲಿ ನಿಶಾ ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.