Home Karnataka State Politics Updates Digvijaya Singh: ಬಿಜೆಪಿ, ಆರ್ ಎಸ್ ಎಸ್ ಗೆ ನಾನು ಕರೋನಾ ವೈರಸ್ – ದಿಗ್ವಿಜಯ್...

Digvijaya Singh: ಬಿಜೆಪಿ, ಆರ್ ಎಸ್ ಎಸ್ ಗೆ ನಾನು ಕರೋನಾ ವೈರಸ್ – ದಿಗ್ವಿಜಯ್ ಸಿಂಗ್!

Digvijaya Singh
Image source: Jagran. com

Hindu neighbor gifts plot of land

Hindu neighbour gifts land to Muslim journalist

Digvijaya Singh: ಇಂದೋರ್ ನಿವಾಸಿಯಾದ ಶ್ರೀ ಸಿಲಾವತ್, ಕಾಂಗ್ರೆಸ್ ಪಕ್ಷವನ್ನು (Congress Party) ತೊರೆದು ಕೇಂದ್ರ ಸಚಿವ ಮತ್ತು ಬಿಜೆಪಿ(BJP) ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರ ನಿಷ್ಠಾವಂತ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ಜಲಸಂಪನ್ಮೂಲ ಸಚಿವ ಮತ್ತು ಬಿಜೆಪಿ ನಾಯಕರಾಗಿರುವ ತುಳಸಿರಾಮ್ ಸಿಲಾವತ್ ಅವರು ದಿಗ್ವಿಜಯ ಸಿಂಗ್ (Digvijaya Singh) ಅವರನ್ನು ಕಾಂಗ್ರೆಸ್‌ನ ಕರೋನವೈರಸ್ ಎಂಬುದಾಗಿ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೆ, ತುಳಸಿರಾಮ್ ಸಿಲಾವತ್ ಅವರು ದಿಗ್ವಿಜಯ ಸಿಂಗ್ ಚೀನಾದ ಉಜ್ಜಯಿನಿಯ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಹಾಕಾಲದಲ್ಲಿ ಮುಂದಿನ ಜನ್ಮದಲ್ಲಿ ಜನಿಸಬೇಕು ಎಂದು ಹೇಳಿದ್ದರು.

ಕಾಂಗ್ರೆಸ್ ಸೇವಾದಳದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಂದೋರ್‌ಗೆ ಆಗಮಿಸಿದ್ದ ಸಂದರ್ಭ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದವರಿಗೆ ನಾನು ಕರೋನ ವೈರಸ್ ಎಂದು ಹೇಳಿಕೊಂಡಿದ್ದಾರೆ. ಎರಡು ಸಂಘಟನೆಗಳಿಗೆ ಬಲಿಷ್ಠ ಎದುರಾಳಿಯಾಗಿರುವುದಾಗಿ ಸಿಲಾವತ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡು ರಾಜ್ಯ ಕ್ಯಾಬಿನೆಟ್ ಸಚಿವರಿಗೆ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯ ಕ್ಯಾಬಿನೆಟ್ ಸಚಿವರನ್ನು ಉದ್ದೇಶಿಸಿ ದಿಗ್ವಿಜಯ ಸಿಂಗ್ ಸಿಲಾವತ್ ಅವರ ವ್ಯವಹಾರ ಗಣನೀಯವಾಗಿ ಹೆಚ್ಚಾಗಿದ್ದು ಹೇಗೆ? ಸಚಿವರಿಗೆ ಇಷ್ಟೊಂದು ಹಣ ಬಂದಿದ್ದು ಎಲ್ಲಿಂದ? ಎಂದು ಮಾಧ್ಯಮಗಳು ಪ್ರಶ್ನಿಸಬೇಕು ಎಂದು ಇದೇ ಸಂದರ್ಭದಲ್ಲಿ ದಿಗ್ವಿಜಯ್ ಸಿಂಗ್ ಅವರು ಹೇಳಿದ್ದಾರೆ.

ಇದನ್ನೂ ಓದಿ: Preetham Gowda: ದೇವೆಗೌಡರ ಬಗ್ಗೆ ನನಗಿರುವ ಗೌರವ ಅವರ ಮನೆಯವರಿಗಿಲ್ಲ – ಬಿಜೆಪಿ ಶಾಸಕ ಪ್ರೀತಮ್ ಗೌಡ ಹೇಳಿಕೆ!