Home Karnataka State Politics Updates Hassan pen drive case: ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣ; ಮಾಜಿ ಕಾರು...

Hassan pen drive case: ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣ; ಮಾಜಿ ಕಾರು ಚಾಲಕನಿಂದ ಸ್ಫೋಟಕ ಹೇಳಿಕೆ

Hassan Pen Drive Case

Hindu neighbor gifts plot of land

Hindu neighbour gifts land to Muslim journalist

Hassan pen drive case: ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಕುರಿತಂತೆ ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಇದೀಗ ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದಾರೆ.

ಇದನ್ನೂ ಓದಿ:  Parliment Election : ಬಿಜೆಪಿ ಸೇರಿದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ !!

ನಾನು ಬಿಜೆಪಿ ಮುಖಂಡ ದೇವರಾಜೆಗೌಡಗೆ ಬಿಟ್ಟು ಬೇರೆ ಯಾರಿಗೂ ಪೆನ್‌ಡ್ರೈವ್‌ ನೀಡಿಲ್ಲ. ರೇವಣ್ಣ, ಪ್ರಜ್ವಲ್‌ ಜೊತೆ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದೇನೆ. ನನ್ನ ಮೇಲೆ ದೌರ್ಜನ್ಯ ನಡೆಸಿ, ನನ್ನ ಜಮೀನು ಬರೆಸಿಕೊಂಡಿದ್ರು, ನನ್ನ ಹೆಂಡತಿ ಮೇಲೆ ಹಲ್ಲೆ ಮಾಡಿದ್ದರು. ಹಾಗಾಗಿ ನಾನು ಕೆಲಸ ಬಿಟ್ಟಿದ್ದೆ. ಅವರ ವಿರುದ್ಧ ಕೇಸ್‌ ಹಾಕಿ ಹೋರಾಟಕ್ಕೆ ಸಿದ್ಧನಾಗಿದ್ದೆ ಎಂದು ಹಾಸನದಲ್ಲಿ ಕಾರ್ತಿಕ್‌ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ಇದನ್ನೂ ಓದಿ:  Amith Shah: ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ; ಕೇಂದ್ರ ಸಚಿವ ಅಮಿತ್‌ ಶಾ ಮೊದಲ ಪ್ರತಿಕ್ರಿಯೆ

ಈ ಸಂದರ್ಭದಲ್ಲಿ ಅವರ ವಿರುದ್ಧ ದೇವರಾಜೇಗೌಡರೂ ಹೋರಾಟಕ್ಕೆ ಯತ್ನಿಸುತ್ತಿರುವುದು ಗಮನಕ್ಕೆ ಬಂತು. ಹಾಗಾಗಿ ಅವರ ಬಳಿ ಹೋಗಿ ನನಗಾದ ಅನ್ಯಾಯನ ಹೇಳಿಕೊಂಡೆ. ಅನ್ಯಾಯಕ್ಕೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ ದೇವರಾಜೇಗೌಡರು ಕೇಸ್‌ ತೆಗೆದುಕೊಳ್ಳಲಿಲ್ಲ. ಹಾಗಾಗಿ ನಾನು ಬೇರೆ ಲಾಯರ್‌ ಮೂಲಕ ಕೇಸ್‌ ಹಾಕಿದ್ದೆ ಎಂದು ಮಾಜಿ ಕಾರು ಚಾಲಕ ಕಾರ್ತಿಕ್‌ ಹೇಳಿಕೆ ನೀಡಿದ್ದಾರೆ.