Home Karnataka State Politics Updates Harish Poonja: ಭಯೋತ್ಪಾದಕರನ್ನು ಹಿಡಿದು ತಂದಾಗಲೂ ಪೊಲೀಸ್‌ ಠಾಣೆಗೆ ನುಗ್ತೀರಾ ಎಂದು ಹೈಕೋರ್ಟ್ ಪ್ರಶ್ನೆ! ಹರೀಶ್...

Harish Poonja: ಭಯೋತ್ಪಾದಕರನ್ನು ಹಿಡಿದು ತಂದಾಗಲೂ ಪೊಲೀಸ್‌ ಠಾಣೆಗೆ ನುಗ್ತೀರಾ ಎಂದು ಹೈಕೋರ್ಟ್ ಪ್ರಶ್ನೆ! ಹರೀಶ್ ಪೂಂಜಾ ಪ್ರತಿಕ್ರಿಯೆ ಹೀಗಿತ್ತು!

Hindu neighbor gifts plot of land

Hindu neighbour gifts land to Muslim journalist

Harish Poonja: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಹೈಕೋರ್ಟ್ ಇದೀಗ ತೀಕ್ಷ್ಮವಾಗಿ ತರಾಟೆಗೆ ತೆಗೆದುಕೊಂಡಿದ್ದು ಅಲ್ಲದೇ ಅವರಿಗೆ ಕೋರ್ಟ್ ಉದಾಹರಣೆ ಸಹಿತ ಪ್ರಶ್ನೆ ಮಾಡಿದೆ. ಹೌದು, ಹರೀಶ್ ಪೂಂಜಾ (Harish Poonja) ಅವರು ತನ್ನ ಬೆಂಬಲಿಗರನ್ನು ಪೊಲೀಸರು ಬಂಧಿಸಿದ ವಿಚಾರದಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನು ನಿಂದಿಸಿರುವ ವಿಚಾರವನ್ನೂ ಹೈಕೋರ್ಟ್ ಇದೀಗ ಪ್ರಶ್ನೆ ಮಾಡಿದ್ದು,

ಭಯೋತ್ಪಾದಕರನ್ನು ಹಿಡಿದು ತಂದಾಗಲೂ ಪೊಲೀಸ್‌ ಠಾಣೆಗೆ ನುಗ್ಗುತ್ತೀರಾ ಎಂದು ಹೈಕೋರ್ಟ್ ಪೂಂಜರನ್ನು ಪ್ರಶ್ನಿಸಿದೆ.

ಹರೀಶ್ ಪೂಂಜಾ ಅವರು ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನು ನಿಂದಿಸಿ, ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪದಡಿ ದಾಖಲಾದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದರು. ಇದೀಗ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದೆ.

“ಪೊಲೀಸ್‌ ಠಾಣೆಗೆ ಏಕೆ ಹೋಗಿದ್ದೀರಿ? ಶಾಸಕರಾದ ಕಾರಣ ಠಾಣೆಗೆ ಹೋಗಿ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಬಹುದೇ? ಇದು ಸರಿಯೇ? ಭಯೋತ್ಪಾದಕರನ್ನು ಪೊಲೀಸರು ಹಿಡಿದು ತಂದರೆ, ಆಗಲೂ ಪೊಲೀಸ್ ಠಾಣೆಗೆ ಹೋಗಿ ಪೊಲೀಸರನ್ನು ಪ್ರಶ್ನೆ ಮಾಡುತ್ತೀರಾ? ಕಾನೂನಿಗೆ ನಾವು ಯಾವತ್ತಿಗೂ ಬದ್ಧರಾಗಿರಬೇಕು. ಅಲ್ಲದೇ ಶಾಸಕರು ಇರೋದು ಶಾಸನ ರೂಪಿಸಲು. ಅದರಂತೆ ಶಾಸನ ರಚನೆ ಮಾಡುವುದಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಅದುಬಿಟ್ಟು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದಲ್ಲ” ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ ಪ್ರಶ್ನಿಸಿದೆ.