Home Karnataka State Politics Updates ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಇ – ಸ್ವತ್ತು ಮೂಲಕ ಖಾತೆ | 94C ಅರ್ಜಿ...

ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಇ – ಸ್ವತ್ತು ಮೂಲಕ ಖಾತೆ | 94C ಅರ್ಜಿ ಹಾಕಲು ಅವಧಿ ಒಂದು ವರ್ಷ ಮುಂದುವರಿಕೆ-ಆರ್ ಅಶೋಕ್

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಇ -ಸ್ವತ್ತು ಮೂಲಕ ಖಾತೆ ಮಾಡಿಕೊಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿ, ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ 94c ಮತ್ತು 94cc ಅಡಿಯಲ್ಲಿ ನೀಡಿದ ಹಕ್ಕುಪತ್ರಗಳ ನೋಂದಣಿಯ ನಂತರ ಇ – ಸ್ವತ್ತು ಅಥವಾ ಇ -ಖಾತಾ ವ್ಯವಸ್ಥೆಯ ಮೂಲಕ ಖಾತೆ ಚೆಕ್ಕುಬಂದಿ ಮಾಡಿಕೊಡಲು ಚಿಂತಿಸಲಾಗಿದೆ ಎಂದು ಹೇಳಿದ್ದಾರೆ.

94c ಮತ್ತು 94cc ಅಡಿಯಲ್ಲಿ ಅರ್ಜಿ ಸಲ್ಲಿಕೆ ಅವಧಿಯನ್ನು ಒಂದು ವರ್ಷದ ವರೆಗೆ ವಿಸ್ತರಿಸಲಾಗಿದೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಗುವುದು. ಇದುವರೆಗೆ 94ಸಿ ಅಡಿ 1,53,197 ಮಂದಿಗೆ ಹಕ್ಕುಪತ್ರ ನೀಡಲಾಗಿದೆ. 42,170 ಅರ್ಜಿಗಳು ಬಾಕಿ ಇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.