Home Karnataka State Politics Updates ಕಾಂಗ್ರೆಸ್ ನಾಯಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪತ್ನಿ ವಿಜಯಮ್ಮ ವಿಧಿವಶ!

ಕಾಂಗ್ರೆಸ್ ನಾಯಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪತ್ನಿ ವಿಜಯಮ್ಮ ವಿಧಿವಶ!

Hindu neighbor gifts plot of land

Hindu neighbour gifts land to Muslim journalist

(Ramesh Kumar) ಅವರ ಪತ್ನಿ ನಿಧನರಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹಾಲಿ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಪತ್ನಿ ವಿಜಯಮ್ಮ(69) ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.

ವಿಜಯಮ್ಮ (Vijayamma) ಅವರು ಕಳೆದ 2 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಎರಡು ದಿನಗಳ ಹಿಂದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 2 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

ಮೃತರು ಪತಿ, ಒಬ್ಬ ಮಗಳು, ಒಬ್ಬ ಮಗ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ವಿಜಯಮ್ಮ ಅವರ ಅಂತ್ಯಕ್ರಿಯೆ ಎಲ್ಲಿ ನೆರವೇರಿಸಲಾಗುತ್ತದೆ ಎಂಬುದು ತಿಳಿದು ಬರಬೇಕಿದೆ. ಇದೀಗ ರಾಜಕೀಯ ಗಣ್ಯಮಾನ್ಯರು ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದ್ದಾರೆ.

ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಪತ್ನಿ ವಿಜಯಮ್ಮ ನಿಧನಕ್ಕೆ ಮೇಲ್ಮನೆಯ ವಿಪಕ್ಷ ಮುಖ್ಯ‌ ಸಚೇತಕರಾದ ಪ್ರಕಾಶ್ ರಾಠೋಡ್ ಅವರು ಕಂಬನಿ ಮಿಡಿದಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೀ ಎಂದು ಪ್ರಾರ್ಥಿಸಿದ್ದಾರೆ.

ಪಕ್ಷದ ಹಿರಿಯ ನಾಯಕರು, ಆತ್ಮೀಯರು ಆದ ಕೆ.ಆರ್ ರಮೇಶ್ ಕುಮಾರ್ ಧರ್ಮಪತ್ನಿ ವಿಜಯಮ್ಮ ಅವರು ನಿಧನರಾದ ಸುದ್ದಿ ತಿಳಿದು ಅತೀವ ನೋವಾಯಿತು. ರಮೇಶ್ ಕುಮಾರ್ ಅವರ ಕುಟುಂಬದ ಶೋಕದಲ್ಲಿ ನಾನೂ ಭಾಗಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.