Home Karnataka State Politics Updates Siddaramaiah : ಪಕ್ಷ, ತತ್ವ, ಸಿದ್ದಾಂತ ಎನ್ನುತ್ತಿದ್ರು ಈಶ್ವರಪ್ಪ, ಈಗೇನಾಯ್ತು ನೋಡ್ರಪ್ಪ ?! – ಸಿದ್ದರಾಮಯ್ಯ

Siddaramaiah : ಪಕ್ಷ, ತತ್ವ, ಸಿದ್ದಾಂತ ಎನ್ನುತ್ತಿದ್ರು ಈಶ್ವರಪ್ಪ, ಈಗೇನಾಯ್ತು ನೋಡ್ರಪ್ಪ ?! – ಸಿದ್ದರಾಮಯ್ಯ

Siddaramaiah

Hindu neighbor gifts plot of land

Hindu neighbour gifts land to Muslim journalist

EX CM-Siddaramaiah : ಬೆಳಗಾವಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ (EX CM-Siddaramaiah)ಬಿಜೆಪಿ ಅವರು ತಮ್ಮ ಪಕ್ಷದ ಹಿರಿಯ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ದೂರಿದ್ದು ಅಲ್ಲದೆ, ಇದೀಗ ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಹಾಗೂ ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ಘೋಷಿಸದಿರುವುದಕ್ಕೆ ಅತೃಪ್ತಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದರೆ ಅವರನ್ನು ಸ್ವಾಗತಿಸಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅದಲ್ಲದೆ ಸದಾ ಪಕ್ಷ, ತತ್ವ, ಸಿದ್ಧಾಂತ ಎನ್ನುತ್ತಿದ್ದ ಈಶ್ವರಪ್ಪ ಈಗ ಎಲ್ಲಿಗೆ ಹೋದರು. ಅವರ ಸ್ಥಿತಿ ಈಗ ಏನಾಯ್ತು ನೋಡಿ. ಇದನ್ನು ನೋಡಿದರೆ ಗೊತ್ತಾಗುತ್ತದೆ ಬಿಜೆಪಿ ಅವರು ಅವರ ಪಕ್ಷದ ಹಿರಿಯ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ನಿಂದಿಸಿದ್ದಾರೆ.

siddaramaiah : ಈಗಾಗಲೇ ನಮ್ಮ ಪಕ್ಷಕ್ಕೆ ಲಕ್ಷ್ಮಣ್ ಸವದಿ ಆಗಮನದಿಂದ ಬೆಳಗಾವಿ ಭಾಗದಲ್ಲಿ ಕಾಂಗ್ರೆಸ್‌ಗೆ ಬಲ ಬಂದಂತಾಗಿದೆ ಎಂದು ಸಿದ್ದರಾಮಯ್ಯ ಸಂತೋಷ ವ್ಯಕ್ತ ಪಡಿಸಿದ್ದಾರೆ.

ಇನ್ನು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ಸೋಮಣ್ಣ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ ಅವನು ಹೊರಗಿನವನು ಅವನ ಪರವಾಗಿ ಅಲ್ಲಿ ಒಂದು ಮತವೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸದ್ಯ ಜಗದೀಶ್ ಶೆಟ್ಟರ್ ಜೊತೆಗೆ ನಾನು ಮಾತನಾಡಿಲ್ಲ ಅವರು ಕಾಂಗ್ರೆಸ್‌ಗೆ ಬರುವುದಾದರೆ ಅವರನ್ನು ಸ್ವಾಗತಿಸುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.