Home Karnataka State Politics Updates Open Bar : ಮದುವೆ ಸಮಾರಂಭಗಳಲ್ಲಿ ಓಪನ್ ಬಾರ್‌ಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್

Open Bar : ಮದುವೆ ಸಮಾರಂಭಗಳಲ್ಲಿ ಓಪನ್ ಬಾರ್‌ಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್

Open Bar

Hindu neighbor gifts plot of land

Hindu neighbour gifts land to Muslim journalist

Open Bar : ಚುನಾವಣೆ (Election) ಮುಗಿಯುವವರೆಗೂ ಸಮಾರಂಭಗಳಲ್ಲಿ ಮದ್ಯ (Alcohol) ಬಳಕೆ ಮಾಡಬಾರದು ಎಂದು ಚುನಾವಣಾ ಆಯೋಗವು (Election Commission) ಆದೇಶ ಹೊರಡಿಸಿತ್ತು. ಇದರ ವಿರುದ್ಧ ಜನರು ರೊಚ್ಚಿಗೆ ಎದ್ದಿದ್ದರು. ಇದೀಗ ಚುನಾವಣಾ ಆಯೋಗವು ಮದ್ಯ ಸರಬರಾಜಿಗೆ ಒಪ್ಪಿಗೆ ನೀಡಿದೆ. ( Election commission green signal to open Bar)

ಕೊಡಗು ವಿಶೇಷವಾದ ಸಂಸ್ಕೃತಿಯನ್ನು ಹೊಂದಿದ ಜಿಲ್ಲೆ. ಮದುವೆ ಮುಂತಾದ ಸಮಾರಂಭದಲ್ಲಿ ಮದ್ಯ. ಮಾಂಸ ಇಲ್ಲದೆ ಹೋದರೆ ಅಲ್ಲಿ ಮದುವೆಯೇ ನಡೆಯುವುದಿಲ್ಲ. ಅಂತದ್ದರಲ್ಲಿ ಚುನಾವಣಾ ಸಂದರ್ಭ ಓಪನ್ ಬಾರ್ ಗೆ ಆಯೋಗವು ನಿರ್ಭಂಧ ವಿಧಿಸಿತ್ತು.

ಈ ಹಿನ್ನೆಲೆ ಕೊಡಗಿನ ಜನರು ಮದ್ಯ ಬಳಕೆ ಮಾಡಲು ಅವಕಾಶ ಕಲ್ಪಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದೀಗ ಮದ್ಯ ನಿಷೇಧ ನಿರ್ಬಂಧ ಸಡಿಲಿಸಿ ಖಾಸಗಿ ಸಮಾರಂಭಗಳಲ್ಲಿ ಮದ್ಯ ಬಳಕೆ ಮಾಡಲು ಅವಕಾಶ ನೀಡುವಂತೆ ರಾಜ್ಯದ ಎಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ರಾಜ್ಯ ಜಂಟಿ ಚುನಾವಣಾಧಿಕಾರಿ ಸೂಚನೆ ಕೊಟ್ಟಿದ್ದಾರೆ.

ಹಾಗಾಗಿ ಕೊಡಗಿನಲ್ಲಿ ನಿಶ್ಚಿತಾರ್ಥ, ಮದುವೆ, ನಾಮಕರಣ ಸೇರಿದಂತೆ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಲು ನಿರ್ಬಂಧ ಹೇರಿದ್ದ ಬಗ್ಗೆ ಚುನಾವಣಾಧಿಕಾರಿಗಳಿಗೆ ಕೊಡವ ಸಮಾಜ, ಕೊಡವ ಗೌಡ ಸಮಾಜ ಸೇರಿದಂತೆ ವಿವಿಧ ಸಮಾಜಗಳಿಂದ ದೂರು ಸಲ್ಲಿಕೆ ಆಗಿತ್ತು. ಅಲ್ಲದೇ ಬಿಜೆಪಿಯಿಂದ ಕಿಲನ್ ಗಣಪತಿ ಎಂಬವರು ಎಲ್ಲಾ ಸಂಸ್ಥೆಗಳ ಪರವಾಗಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ನಿರ್ಬಂಧ ಸಡಿಲಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಆದರೆ ಕೆಲವೊಂದು ಕಂಡೀಷನ್ ಅನ್ನು ಆಯೋಗ ವಿಧಿಸಿದೆ. ಯಾವುದೇ ರಾಜಕೀಯ ಪಕ್ಷಗಳಿಂದ ಅಥವಾ ರಾಜಕಾರಣಿಗಳಿಂದ ನಡೆಯುವ ಸಭೆ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಬಾರದು ಎಂದಿದೆ ಚುನಾವಣಾ ಆಯೋಗ. ಉಳಿದಂತೆ ಚುನಾವಣಾ ನೀತಿ ಸಂಹಿತೆಗೆ ಅನುಗುಣವಾಗಿ ಎಂದಿನಂತೆ ಮದ್ಯ ಸರಬರಾಜಿಗೆ ಅನುಮತಿ ನೀಡಬಹುದು ಎಂದು ಚುನಾವಣಾ ಅಯೋಗವು ಆದೇಶ ಹೊರಡಿಸಿದೆ.

ಕೊಡಗಿನಲ್ಲಿ ಪ್ರತೀ ಸಮಾರಂಭಗಳಲ್ಲಿ ಮದ್ಯ ಸೇವಿಸುವುದು ಅವರ ಸಂಸ್ಕೃತಿಯ ಒಂದು ಭಾಗ. ಈಗ ರಾಜ್ಯದಲ್ಲಿ ಚುನಾವಣಾ ಬಿಸಿ ಹೆಚ್ಚಾಗಿರುವುದರಿಂದ ಸಮಾರಂಭಗಳಲ್ಲಿ ಮದ್ಯದ ವ್ಯವಸ್ಥೆ ಮಾಡಬಾರದು ಎಂದು ಚುನಾವಣಾ ಆಯೋಗವು ಈ ಹಿಂದೆ ಆದೇಶ ಹೊರಡಿಸಿತ್ತು. ಈಗ, ಕೊಡಗಿನ ಸಂಸ್ಕೃತಿಯ ಭಾಗವಾದ ಈ ಬಾರ್ ಕಲ್ಚರ್ ಗೆ ಆದೇಶವನ್ನು ಹಿಂಪಡೆಯುವ ಮೂಲಕ ಕೊಡಗಿನ ಜನರಿಗೆ ಒಳ್ಳೆಯ ಸುದ್ದಿಯನ್ನು ನೀಡಿದೆ ರಾಜ್ಯ ಚುನಾವಣಾ ಆಯೋಗ.