Home Karnataka State Politics Updates Election Commission: ದೇಶದಲ್ಲಿ 64.2 ಕೋಟಿ ಜನರಿಂದ ಮತದಾನ – ವಿಶ್ವದಾಖಲೆ ಬರೆದ...

Election Commission: ದೇಶದಲ್ಲಿ 64.2 ಕೋಟಿ ಜನರಿಂದ ಮತದಾನ – ವಿಶ್ವದಾಖಲೆ ಬರೆದ ಲೋಕ ಚುನಾವಣೆ !!

Election Commission

Hindu neighbor gifts plot of land

Hindu neighbour gifts land to Muslim journalist

Election Commission: ದೇಶದಲ್ಲಿ 2024ರ ಲೋಕಸಭಾ ಚುನಾವಣೆಯ(Parliament Election) ಬಹಳ ಸುದೀರ್ಘ ಮತದಾನ ಪ್ರಕ್ರಿಯೆ ಮುಗಿದು ಇಂದು (ಜೂ.4) ಮತ ಎಣಿಕೆ ಶುರುವಾಗಿದೆ. ವಿಶೇಷ ಅಂದ್ರೆ ಈ ಸಲದ ಚುನಾವಣೆ ಮತದಾನದ ಮೂಲಕ ವಿಶ್ವ ದಾಖಲೆ ಬರೆದಿದೆ.

ಹೌದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 31.2 ಕೋಟಿ ಮಹಿಳೆಯರೂ ಸೇರಿದಂತೆ ಒಟ್ಟು 64.2 ಕೋಟಿ ಜನರು ಮತದಾನ(Voting) ಮಾಡಿದ್ದು, ಭಾರತ ವಿಶ್ವದಾಖಲೆ ಸ್ಥಾಪಿಸಿದೆ ಎಂದು ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್(Rajeev Kumar) ತಿಳಿಸಿದ್ದಾರೆ. ಭಾರತದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರೆದಿದ್ದ ಚುನಾವಣೋತ್ತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಎಷ್ಟು ತಂಡ, ಎಷ್ಟು ಸಿಬ್ಬಂದಿಗಳು ಭಾಗಿ:

ವಿಶ್ವದ ಅತಿದೊಡ್ಡ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲು 68,000 ಮೇಲ್ವಿಚಾರಣಾ ತಂಡಗಳು ಮತ್ತು 1.5 ಕೋಟಿ ಮತಗಟ್ಟೆ ಹಾಗೂ ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದರು.

ಇತರ ಅಂಶಗಳು:

* 2019 ರಲ್ಲಿ 540 ಮರು ಮತದಾನ ನಡೆದಿದ್ದರೆ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 39 ಮರುಮತದಾನಗಳು ನಡೆದಿವೆ.

* ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ದಶಕಗಳಲ್ಲೆ ಈ ಬಾರಿ ಒಟ್ಟಾರೆ ಶೇಕಡಾ 58.58 ಮತ್ತು ಕಣಿವೆಯಲ್ಲಿ ಶೇಕಡಾ 51.05 ರಷ್ಟು ಮತದಾನವಾಗಿದೆ ಎಂದು ಸಿಇಸಿ ಹೇಳಿದೆ.

* 2019 ರಲ್ಲಿ 3,500 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ, 2024 ರ ಚುನಾವಣೆಯಲ್ಲಿ ನಗದು, ಉಚಿತ ಕೊಡುಗೆಗಳು, ಡ್ರಗ್ಸ್ ಮತ್ತು ಮದ್ಯ ಸೇರಿದಂತೆ ರೂ. 10,000 ಕೋಟಿ ಮೌಲ್ಯದಷ್ಟು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.