Home Karnataka State Politics Updates Parliment Election: NDA ಮಿತ್ರ ಪಕ್ಷಗಳ ಜತೆ ಕಾಂಗ್ರೆಸ್ ಮಾತುಕೆ – ಛಿದ್ರ ಛಿದ್ರವಾಗುತ್ತಾ ಬಿಜೆಪಿ...

Parliment Election: NDA ಮಿತ್ರ ಪಕ್ಷಗಳ ಜತೆ ಕಾಂಗ್ರೆಸ್ ಮಾತುಕೆ – ಛಿದ್ರ ಛಿದ್ರವಾಗುತ್ತಾ ಬಿಜೆಪಿ ಮೈತ್ರಿ ಕೋಟೆ ?!

Parliament Election

Hindu neighbor gifts plot of land

Hindu neighbour gifts land to Muslim journalist

Parliment Election: ಬಿಜೆಪಿಗೆ ಸರಳ ಬಹುಮತ ಬರುತ್ತದೆ ಎಂದು ತಿಳಿಯುತ್ತಿದ್ದಂತೆ ಕಾಂಗ್ರೆಸ್ NDA ಮೈತ್ರಿ ಪಕ್ಷಗಳಿಗೆ ಗಾಳ ಹಾಕಿದೆ. ಚಂದ್ರಬಾಬು ನಾಯ್ಡು(Chnadrababu Naydu) ಹಾಗೂ ನಿತೀಶ್ ಕುಮಾರ್(Nithish Kumar) ಈ ಸಲ ಕಿಂಖ್ ಮೇಕರ್ ಆಗಲಿದ್ದಾರೆ.

ಹೌದು, ಲೋಕಸಭಾ ಚುನಾವಣೆ(Parliament Election) ಮತ ಎಣಿಕೆ ಇಡೀ ದೇಶದ ಜನರನ್ನೇ ಅಚ್ಚರಿಗೊಳಿಸಿದೆ. ಬಿಜೆಪಿ 350+ ಎಂದು ಹೇಳಿದ್ದ ಸಮೀಕ್ಷೆಗಳ ಭವಿಷ್ಯ ಟುಸ್ ಎನಿಸುತ್ತಿದೆ. ಯಾಕೆಂದರೆ NDA ಮೈತ್ರಿ ಪಕ್ಷಗಳು 300ಗಡಿ ದಾಟಲೂ ಹೆಣಗಾಡುತ್ತಿವೆ. ಅಚ್ಚರಿ ಅಂದ್ರೆ ಇಂಡಿಯಾ ಕೂಟ 220ರ ಗಡಿ ದಾಟಿದ್ದು NDA ಮಿತ್ರ ಪಕ್ಷಗಳಿಗೆ ಗಾಳ ಹಾಕುತ್ತಿದೆ.

ಬಿಹಾರ ಮತ್ತು ಆಂಧ್ರಪ್ರದೇಶದಲ್ಲಿ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ನೇತೃತ್ವದ ಬಿಜೆಪಿ ಮಿತ್ರಪಕ್ಷಗಳು ಭರ್ಜರಿ ಗೆಲುವು ಸಾಧಿಸಿವೆ. ಬಿಹಾರದಲ್ಲಿ 32 ಸೀಟ್ ಹಾಗೂ ಆಂಧ್ರದಲ್ಲಿ 22 ಸೀಟ್ ಇವರ ಪಾಲಾಗಿದೆ. ಹೀಗಾಗಿ ಕಾಂಗ್ರೆಸ್ ಈ ಇಬ್ಬರು ನಾಯಕರ ಮನೆ ಕದ ತಟ್ಟಿದೆ. ಇವರಿಬ್ಬರ ಮನ ವೊಲಿಸಲು ಕಾಂಗ್ರೆಸ್ ಯಶಸ್ವಿಯಾದರೆ ಬಹುಮತದತ್ತ ಇಂಡಿಯಾ ದಾಪುಗಾಲು ಇಡಲಿದೆ. ಇದರಿಂದ ಬಿಜೆಪಿ NDA ಕೋಟೆ ಛಿದ್ರವಾಗಲಿದೆ.