Home Karnataka State Politics Updates 15 to Prime Minister Modi Money order: ಪ್ರಧಾನಿ ಮೋದಿಗೆ 15 ರೂ. ಮನಿಯಾರ್ಡರ್...

15 to Prime Minister Modi Money order: ಪ್ರಧಾನಿ ಮೋದಿಗೆ 15 ರೂ. ಮನಿಯಾರ್ಡರ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು!! ಯಾಕೆ ಗೊತ್ತಾ? ಇಲ್ಲಿದೆ ನೋಡಿ ಹಲವು ವಿಚಾರಗಳು!!

Prime Minister Modi
Image source- Vijayavani

Hindu neighbor gifts plot of land

Hindu neighbour gifts land to Muslim journalist

Prime Minister Modi: ಕಾಂಗ್ರೆಸ್‌(Congress) ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿ ಕುರಿತು ಬಿಜೆಪಿ ನಾಯಕರು(BJP Leaders)ಸಾಕಷ್ಟು ಹೇಳಿಕೆ ನೀಡುತ್ತಿದ್ದಾರೆ. ಶೀಘ್ರ ಜಾರಿಗೊಳಿಸಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಕೂಡ ಬಿಜೆಪಿಗೆ ಪ್ರಶ್ನೆಯ ಸುರಿಮಳೆಗೈದಿದ್ದು, ನಿಮ್ಮ ಮೋದಿ ಲೋಕಸಭಾ ಚುನಾವಣೆ ವೇಳೆ ಒಬ್ಬೊಬ್ಬರ ಖಾತೆಗೂ 15 ಲಕ್ಷ ಹಣ ಹಾಕುತ್ತೇವೆ ಎಂದಿದ್ದರು. ಅದೆಲ್ಲಿದೆ? ಎಂದು ಕೇಳುತ್ತಿದ್ದು, ಗ್ಯಾರಂಟಿಗಳ ನಡುವೆ ಈ ವಿಚಾರವೂ ಸದ್ದುಮಾಡುತ್ತಿದೆ. ಅಂತೆಯೇ ಇದೀಗ ಈ ವಿಚಾರವನ್ನು ಇಟ್ಟುಕೊಂಡು ಕೆಲವು ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ(Prime Minister Modi) ಮೋದಿಯವರನ್ನೇ ಗುರಿಯಾಗಿಸಿ ವಿಚಿತ್ರವಾದ ಪ್ರತಿಭಟನೆ ನಡೆಸಿದ್ದಾರೆ.

ಹೌದು, ಪ್ರಧಾನಿ ನರೇಂದ್ರ ಮೋದಿ ಅವರ 9 ವರ್ಷದ ಅಚ್ಛೇ ದಿನ್ ಸರ್ಕಾರದಲ್ಲಿ(Acche din Government) ಯಾರ ಖಾತೆಗೂ 15 ಲಕ್ಷ ರೂ. ಹಾಕಲಿಲ್ಲ ಹಾಗೂ ಬರಲೇ ಇಲ್ಲ ಎಂದು ಆಕ್ರೋಶ ಹೊರಹಾಕಿ, ಮೋದಿ ವಿರುದ್ಧ ವಿಚಿತ್ರವಾದ ಪ್ರತಿಭಟನೆ ನಡೆಸಿದ್ದು ಕಾಂಗ್ರೆಸ್ ಪಕ್ಷದಿಂದ ಒಂದಷ್ಟು ಮಂದಿ ಸೇರಿ ಇಂದು ಪ್ರಧಾನಿ ಮೋದಿಗೆ 15 ರೂ. ಮನಿಯಾರ್ಡರ್(Money order) ಮಾಡಿದ್ದಾರೆ.

ಒಂಬತ್ತು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಹಣ ಹಾಕುವುದು ಸೇರಿದಂತೆ ರಾಷ್ಟ್ರದ ಜನತೆಗೆ ನೀಡಿದ ಎಲ್ಲಾ ಭರವಸೆಗಳು ಸುಳ್ಳಾಗಿವೆ. ಅದಕ್ಕಾಗಿ ಸಾರ್ವಜನಿಕರ ಹಾಗೂ ಕಾಂಗ್ರೆಸ್ ಪಕ್ಷದಿಂದ ಒಂದಷ್ಟು ಮಂದಿ ಸೇರಿ ಇಂದು ಪ್ರಧಾನಿ ಮೋದಿಗೆ 15 ರೂ. ಮನಿಯಾರ್ಡರ್ ಮಾಡಿದ್ದಾರೆ.

ಅಂದಹಾಗೆ ಈ ಮನಿಯಾರ್ಡರ್​ ಜತೆಗೆ ಪ್ರಧಾನಿಗೆ ಕೆಲವು ಪ್ರಶ್ನೆಗಳನ್ನೂ ಕೇಳಿದ ಪೋಸ್ಟ್ ಇವರು ಕಳುಹಿಸಿಕೊಟ್ಟಿದ್ದಾರೆ.

ಕಾಂಗ್ರೆಸಿಗರು ಕೇಳಿರುವ ಪ್ರಶ್ನೆಗಳು
1. ಹೊರ ದೇಶದಲ್ಲಿರುವ ಕಪ್ಪು ಹಣ ತರಲಿಲ್ಲ
2. ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳಿದರೂ ಯಾರ ಖಾತೆಗೂ 15 ರೂ. ಸಹ ಇದುವರೆಗೂ ಬಂದಿಲ್ಲ
3. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರೂ ಇರುವ ಉದ್ಯೋಗವನ್ನೂ ಎಲ್ಲರಿಂದ ಕಸಿಯುತ್ತಿರುವುದೇಕೆ?
4. ಉದ್ಯೋಗ ನೀಡಿ ಎಂದರೆ ಪಕೋಡ ಮಾರಿ ಎಂದರು ಬಿಜೆಪಿಯ ಕೇಂದ್ರ ಸರ್ಕಾರದವರು.
5. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದರೂ ಭ್ರಷ್ಟ ಮುಖ್ಯಮಂತ್ರಿಗಳೊಂದಿಗೆ ವೇದಿಕೆ ಹಂಚಿಕೊಂಡರು.
6. ಅಚ್ಛೇ ದಿನ್, ಅಚ್ಛೇ ದಿನ್ ಎಂದು ನಿತ್ಯವೂ ಹೇಳಿ ಪ್ರತಿಯೊಬ್ಬರ ಮೇಲೂ ಸಾಲದ ಹೊರೆಯನ್ನು ಹೊರಿಸಿದರು ನರೇಂದ್ರ ಮೋದಿ.
7. ಕೇಂದ್ರ ಸರ್ಕಾರದ ಎಲ್ಲ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ.
8. ತೆರಿಗೆ ಹಣವನ್ನು ವಂಚಿಸಿರುವ ಉದ್ಯಮಗಳೊಂದಿಗೆ ಶಾಮಿಲಾಗಿ ಅವರನ್ನು ಹೊರದೇಶಕ್ಕೆ ಕಳುಹಿಸಿದ್ದಾರೆ.
9. ದೇಶದ ಅನ್ನದಾತರಿಗೆ ನ್ಯಾಯಯುತ ಕಾಯ್ದೆ ತರದೆ ರೈತ ವಿರೋಧಿ ಮಸೂದೆ ಜಾರಿಗೆ ತಂದಿದ್ದು ಕೇಂದ್ರ ಸರ್ಕಾರದ ಅತಿ ದೊಡ್ಡ ಅಪರಾಧ.
10. ನರೇಂದ್ರ ಮೋದಿ ನೀಡಿರುವ ಎಲ್ಲಾ ಭರವಸೆಗಳು ಸುಳ್ಳಾಗಿವೆ. ಅವರು ದೇಶಕ್ಕೆ ನೀಡಿದ ಕೊಡುಗೆ ಎಂದರೆ ಅದು ಸುಳ್ಳಿನ ಕೊಡುಗೆಗಳು ಮಾತ್ರ.

ಜಿಪಿಒ ಕೇಂದ್ರ ಕಚೇರಿ ಬಳಿ ನಡೆದ ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್, ಮನೋಹರ್, ಕಾಂಗ್ರೆಸ್ ಮುಖಂಡರಾದ ಎ.ಆನಂದ್, ಪ್ರಕಾಶ್, ರವಿಶೇಖರ್, ಹೇಮರಾಜು, ಚಂದ್ರಶೇಖರ್, ಅನಿಲ್ ಕುಮಾರ್, ಉಮೇಶ್, ಚಿನ್ನಿ ಪ್ರಕಾಶ್, ಓಬಳೇಶ್ ಮುಂತಾದವರಿದ್ದರು.

ಇನ್ನು ಈ ಬಗ್ಗೆ ನಿನ್ನೆ ದಿನ ಬೆಂಗಳೂರಿನಲ್ಲಿ(Bangalore) ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ(CM siddaramaiah) “ಗ್ಯಾರಂಟಿ ಯೋಜನೆಗಳ ಜಾರಿ ವಿಚಾರದಲ್ಲಿ ಸರಕಾರ ತನ್ನ ಬದ್ಧತೆ ಸ್ಪಷ್ಟಪಡಿಸಿದೆ. ಪ್ರಧಾನಿ ಮೋದಿ ಅವರು ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳಿದ್ದರು. ಅದು ಏನಾಯ್ತು ಅಂತಾ ಬಿಜೆಪಿಯವರು ಮೊದಲು ಮಾತನಾಡಿದಲಿ” ಎಂದು ತಿರುಗೇಟು ನೀಡಿದ್ದಾರೆ.

 

ಇದನ್ನು ಓದಿ: Kadaba Taluk Office: ಕಡಬ ತಾಲೂಕು ಕಛೇರಿಯಲ್ಲಿ 5 ತಿಂಗಳಾದರೂ ವಿಲೇವಾರಿವಾಗದ 94ಸಿ ಕಡತ! ಪ್ರಶ್ನಿಸಿದ ಪತ್ರಕರ್ತನಿಗೆ ದಬಾಸಿದ ತಾಲೂಕು ಕಛೇರಿ ಸಿಬ್ಬಂದಿ