Home Karnataka State Politics Updates C M Siddaramiah : ಎಚ್‍ಡಿಕೆ ಗೆ ಸಚಿವ ಜಮೀರ್ ‘ಕರಿಯ ಕುಮಾರಸ್ವಾಮಿ’ ಎಂದ ವಿಚಾರ...

C M Siddaramiah : ಎಚ್‍ಡಿಕೆ ಗೆ ಸಚಿವ ಜಮೀರ್ ‘ಕರಿಯ ಕುಮಾರಸ್ವಾಮಿ’ ಎಂದ ವಿಚಾರ – ಕೊನೆಗೂ ಮೌನ ಮುರಿದ ಸಿಎಂ ಸಿದ್ದರಾಮಯ್ಯ!!

Hindu neighbor gifts plot of land

Hindu neighbour gifts land to Muslim journalist

C M Siddaramiah : ಚನ್ನಪಟ್ಟಣ ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಕುಮಾರಸ್ವಾಮಿಯವರಿಗೆ (HD Kumarswamy) ಕರಿಯ ಎನ್ನುವ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmad Khan) ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ಸ್ವತಹ ಕಾಂಗ್ರೆಸ್ ಪಕ್ಷದ ನಾಯಕರೆಲ್ಲರೂ ಖಂಡಿಸಿದ್ದರು. ಅಲ್ಲದೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಸೋಲೆಗೆ ಇದು ಕಾರಣವಾಗಬಹುದು ಎಂದೆಲ್ಲ ವಿಶ್ಲೇಷಸಲಾಗಿತ್ತು. ಇದೀಗ ಈ ನಡುವೆಯೇ ಈ ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ(CM Siddaramiah ) ಪ್ರತಿಕ್ರಿಯೆ ನೀಡಿದ್ದಾರೆ.

 

 ಹೌದು ಜಮೀರ್ ಅಹಮದ್ ಹೇಳಿದ ಕರಿಯ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಈಗ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಜಮೀರ್ ಯಾವುದೇ ಕಾರಣಕ್ಕೂ ಆ ರೀತಿ ಹೇಳಿಕೆ ಕೊಡಬಾರದಿತ್ತು. ಅವರ ಹೇಳಿಕೆ ಸರಿಯಲ್ಲ, ನಾನು ಅದನ್ನು ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 

 ಅಲ್ಲದೆ ಬಳಿಕ ಮಾತನಾಡಿದ ಅವರು ‘ಅವರ ನಡುವೆ ಏನೇ ಪ್ರೀತಿ ಇರಲಿ, ವಿಶ್ವಾಸವೇ ಇರಲಿ. ಆದರೆ ದೇಹದ ಬಣ್ಣದ ವಿಚಾರವಾಗಿ ಜಮೀರ್ ಮಾತನಾಡಬಾರದಿತ್ತು ಎಂದು,ವಿರೋಧಿಸಿದ್ದಾರೆ.