Home Karnataka State Politics Updates BMTC Penalty: ಬಸ್ ನಲ್ಲಿ ಮಹಿಳೆಯರ ಸೀಟ್’ಲ್ಲಿ ಕೂತ್ರೆ ಏನಾಗುತ್ತೆ ಗೊತ್ತಾ ?! ಸಾರಿಗೆ...

BMTC Penalty: ಬಸ್ ನಲ್ಲಿ ಮಹಿಳೆಯರ ಸೀಟ್’ಲ್ಲಿ ಕೂತ್ರೆ ಏನಾಗುತ್ತೆ ಗೊತ್ತಾ ?! ಸಾರಿಗೆ ಇಲಾಖೆಯಿಂದ ಬಂದೇ ಬಿಡ್ತು ಹೊಸ ರೂಲ್ಸ್ !!

BMTC Penalty

Hindu neighbor gifts plot of land

Hindu neighbour gifts land to Muslim journalist

BMTC Penalty: ಮಹಿಳೆಯರಿಗೆ ಮೀಸಲಾದ ಸೀಟ್ ನಲ್ಲಿ ಕೂತು ಪ್ರಯಾಣಿಸುವವರಿಗೆ BMTC ಬಿಗ್ ಶಾಕ್ ನೀಡಿದೆ. ಜೊತೆಗೆ ಟಿಕೆಟ್ ಪಡೆಯದೆ ಪ್ರಯಾಣ ಮಾಡ್ತಿದ್ದವರಿಗೆ BMTC ದಂಡ (BMTC Penalty) ವಿಧಿಸಿದೆ.

ಹೌದು, ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿದ BMTC ನವೆಂಬರ್ ನಲ್ಲಿ ವಿಧಿಸಿದ ದಂಡದಿಂದ ಬೊಕ್ಕಸಕ್ಕೆ 6,68,610 ರೂ ಬಂದಿದೆ. ಇನ್ನು ಮಹಿಳಾ ಪ್ರಯಾಣಿಕರಲ್ಲಿ ಮೀಸಲಿರಿಸಿದ್ದ ಸೀಟ್ ನಲ್ಲಿ ಪ್ರಯಾಣಿಸಿದ್ದ 438 ಪುರುಷರಿಗೂ ದಂಡ ಹಾಕಲಾಗಿದೆ. ಇನ್ನು 16,421ಟ್ರಿಪ್ ಗಳಲ್ಲಿ ಚೆಕ್ಕಿಂಗ್ ಇನ್ಸ್ಪೆಕ್ಟರ್ ಗಳು ತಪಾಸಣೆ ಮಾಡಿದ್ದು, ಈ ವೇಳೆ 3,767ಮಂದಿ ಟಿಕೆಟ್ ರಹಿತ ಪ್ರಯಾಣ ಮಾಡಿರುವುದು ಪತ್ತೆಯಾಗಿದೆ. ಇದೇ ವೇಳೆ ಬೇಜವಾಬ್ದಾರಿ 1,062 ನಿರ್ವಾಹಕರ ವಿರುದ್ಧವೂ ನಿಗಮ ದಂಡ ವಿಧಿಸಿದೆ.

ಮುಖ್ಯವಾಗಿ ಮೋಟಾರು ವಾಹನ ಕಾಯ್ದೆ 1988ರ ಕಾಲಂ 177&94 ರ ಅನ್ವಯದಂತೆ ಮಹಿಳಾ‌ ಸೀಟ್ ನಲ್ಲಿ ಕುಳಿತ ಪ್ರಯಾಣಿಕರಿಂದ 43,800ರೂ ದಂಡ ವಸೂಲಿ ಮಾಡಲಾಗಿದೆ. ಈ ಮೂಲಕ ನವೆಂಬರ್ ತಿಂಗಳಲ್ಲಿ ಬಿಎಂಟಿಸಿ ಬೊಕ್ಕಸಕ್ಕೆ ಒಟ್ಟು 7,12,410 ರೂ ದಂಡ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ: Government Blocked Apps: ಮೊಬೈಲ್ ಬಳಕೆದಾರರಿಗೆ ಬ್ಯಾಡ್ ನ್ಯೂಸ್ – ಏಕಾಏಕಿ ಈ ಆಪ್ ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ ಮೋದಿ ಸರ್ಕಾರ