Home Karnataka State Politics Updates ಮೋದಿಯವರನ್ನು ಇನ್ನೊಂದು ಬಾರಿ ನರಹಂತಕ ಎಂದರೆ ಸಿದ್ದರಾಮಯ್ಯ ಅವರ ನಾಲಿಗೆ ಕಿತ್ತು ಬಿಸಾಡಬೇಕಾಗುತ್ತದೆ -ಈಶ್ವರಪ್ಪ

ಮೋದಿಯವರನ್ನು ಇನ್ನೊಂದು ಬಾರಿ ನರಹಂತಕ ಎಂದರೆ ಸಿದ್ದರಾಮಯ್ಯ ಅವರ ನಾಲಿಗೆ ಕಿತ್ತು ಬಿಸಾಡಬೇಕಾಗುತ್ತದೆ -ಈಶ್ವರಪ್ಪ

Hindu neighbor gifts plot of land

Hindu neighbour gifts land to Muslim journalist

K S Eshwarappa :ಪುತ್ತೂರು : ಪ್ರಧಾನಿ ನರೇಂದ್ರ ಮೋದಿಯವರನ್ನು ಇನ್ನೊಂದು ಬಾರಿ ನರಹಂತಕ ಎಂದು ಹೇಳಿದರೆ, ಏಕವಚನದಲ್ಲಿ ಕರೆದರೆ ಸಿದ್ದರಾಮಯ್ಯ ಅವರ ನಾಲಿಗೆ ಕಿತ್ತು ಬಿಸಾಡಬೇಕಾಗುತ್ತದೆ ಎಂದು ಮಾಜಿ ಸಚಿವ ,ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ (K S Eshwarappa) ಹೇಳಿದ್ದಾರೆ.

ಪುತ್ತೂರು ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಸಮೀಪದ ವೇದಿಕೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಕಾಲದಲ್ಲಿ ಪಾಕಿಸ್ತಾನವನ್ನು ಜಗತ್ತಿನ ಎಲ್ಲ ರಾಷ್ಟ್ರಗಳು ಬೆಂಬಲಿಸುತ್ತಿದ್ದವು. ಈಗ ಎಲ್ಲ ರಾಷ್ಟ್ರಗಳು ಮೋದಿಯವರನ್ನು ಬೆಂಬಲಿಸುತ್ತಿವೆ. ಮೋದಿಯವರನ್ನು ವಿರೋಧಿಸುವವರು ಜಗತ್ತಿನಲ್ಲಿ ಇಬ್ಬರು ಮಾತ್ರ. ಒಂದು ಪಾಕಿಸ್ತಾನ, ಇನ್ನೊಬ್ಬರು ಸಿದ್ಧರಾಮಯ್ಯ.ದೇಶ ದ್ರೋಹಿಗಳಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ನೀಡಿದರು.

ದೇಶದಲ್ಲಿ ಸುಮಾರು 10 ಕೋಟಿ ಸದಸ್ಯತ್ವ ಪಡೆದ ಒಂದೇ ಒಂದು ಪಕ್ಷ ಅದು ಬಿಜೆಪಿ ಮಾತ್ರ. ಎಲ್ಲಾ ಜನರು ಬಿಜೆಪಿಯನ್ನು ಬಂದು ಸೇರುತ್ತಿದ್ದಾರೆ. ನಾವು ಅಭಿವೃದ್ಧಿ ಬಗ್ಗೆ ವಿವರಿಸಲು ಹೋಗುವುದಿಲ್ಲ. ಎಲ್ಲವೂ ಪತ್ರಿಕೆಯಲ್ಲಿ ಬರುತ್ತಿದೆ. ಅನೇಕ ಹೊಸ ಹೊಸ ರೈಲುಗಳು ಬಂದಿವೆ. ಕೌಶಲ್ಯಾಭಿವೃದ್ಧಿ ಯೋಜನೆ ಮೂಲಕ ಉದ್ಯೋಗಾವಕಾಶ ನೀಡುತ್ತಿದೆ ಎಂದು ಈಶ್ವರಪ್ಪ ಹೇಳಿದರು.