Home Karnataka State Politics Updates Congress – BJP: ಕಾಂಗ್ರೆಸ್‌ ಕೊಟ್ಟ ಗ್ಯಾರಂಟಿ ಜಾರಿಗೊಳಿಸಿ ರಾಜ್ಯದಲ್ಲಿ ಶಾಂತಿ,ಸುವ್ಯವಸ್ಥೆ ಕಾಪಾಡಬೇಕು : ಬಿಜೆಪಿ...

Congress – BJP: ಕಾಂಗ್ರೆಸ್‌ ಕೊಟ್ಟ ಗ್ಯಾರಂಟಿ ಜಾರಿಗೊಳಿಸಿ ರಾಜ್ಯದಲ್ಲಿ ಶಾಂತಿ,ಸುವ್ಯವಸ್ಥೆ ಕಾಪಾಡಬೇಕು : ಬಿಜೆಪಿ ಆಗ್ರಹ

Congress - BJP

Hindu neighbor gifts plot of land

Hindu neighbour gifts land to Muslim journalist

Congress – BJP: ಬೆಂಗಳೂರು : ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರದ ಪಟ್ಟವೇರಿದ ಕಾಂಗ್ರೆಸ್‌ ಗ್ಯಾರಂಟಿಗಳನ್ನು ಪೂರೈಸಿ ರಾಜ್ಯದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಬಿಜೆಪಿ (Congress – BJP) ಆಗ್ರಹಿಸಿದೆ.

ಬಿಜೆಪಿಯ ಅಧಿಕೃತ ಟ್ಟಿಟ್ಟರ್‌ ಖಾತೆಯಲ್ಲಿ ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ ಅಧಿಕೃತವಾಗಿ ಜಾರಿ ಮಾಡುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. “ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕದ ಜನರನ್ನು ಮೂರ್ಖರನ್ನಾಗಿ ಮಾಡುವುದನ್ನು ಬಿಟ್ಟು, ಚುನಾವಣಾ ಪೂರ್ವ ನೀಡಿದ್ದ ಗ್ಯಾರಂಟಿಗಳನ್ನು ಕೊಟ್ಟ ಮಾತಿನಂತೆ ಈಡೇರಿಸಬೇಕು.

ಕಾಂಗ್ರೆಸ್ ತನ್ನ ಸುಳ್ಳು ಗ್ಯಾರಂಟಿಗಳ ಮೂಲಕ ಕನ್ನಡಿಗರಿಗೆ ವಿಶ್ವಾಸ ದ್ರೋಹಮಾಡಲು ಹೊರಟಿದೆ. ಇದನ್ನು ಕನ್ನಡಿಗರು ಸಹಿಸುವುದಿಲ್ಲ. ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಕೊಟ್ಟ ಗ್ಯಾರಂಟಿಗಳನ್ನು ಪೂರೈಸಿ ರಾಜ್ಯದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಬೇಕು” ಎಂಬ ವಿಡಿಯೋವೊಂದನ್ನು ಹರಿಬಿಡುವ ಮೂಲಕ ಕಾಂಗ್ರೆಸ್‌ ಸರ್ಕಾರ ವಿರುದ್ಧ ಆಗ್ರಹಿಸಿದ್ದಾರೆ.

 

 

ಇದನ್ನು ಓದಿ: Laughing Snake video: ಮುಟ್ಟಿದೊಡನೆ ಬಿದ್ದು ಬಿದ್ದು ನಗುತ್ತೆ ಈ ಹಾವು ; ವಿಡಿಯೋ ನೋಡಿ!