Home Karnataka State Politics Updates “ನಾನೇನು ಆಕೆಯನ್ನು ರೇಪ್ ಮಾಡಿದ್ದೇನಾ!??”ಮಾಧ್ಯಮದ ಮೇಲೆ ರೇಗಾಡಿದ ಶಾಸಕ ಲಿಂಬಾವಳಿ!!

“ನಾನೇನು ಆಕೆಯನ್ನು ರೇಪ್ ಮಾಡಿದ್ದೇನಾ!??”
ಮಾಧ್ಯಮದ ಮೇಲೆ ರೇಗಾಡಿದ ಶಾಸಕ ಲಿಂಬಾವಳಿ!!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದಲ್ಲದೇ, ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗುವಂತೆ ಪೊಲೀಸರಿಗೆ ಸೂಚಿಸಿ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

ಮಹಿಳೆಯ ಮೇಲೆ ದರ್ಪ ತೋರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ವಿಚಾರವು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಈ ಬಗ್ಗೆ ಸುದ್ದಿಗಾರರು ಲಿಂಬಾವಳಿಯವರನ್ನು ದರ್ಪ ಮೆರೆದ ವಿಡಿಯೋ ಬಗ್ಗೆ ಗಮನ ಸೆಳೆದಿದ್ದಾರೆ. ಈ ವೇಳೆ ಮಾತನಾಡಿದ ಲಿಂಬಾವಳಿ “ನಾನು ನಿಮ್ಮನ್ನು ಆಕೆಯ ಪರವಾಗಿ ಮಾತನಾಡುವುದಕ್ಕೆ ಕರೆಸಿರೋದ, ಮಹಿಳೆಗೆ ಹಾಗೆ ಮಾಡಿದ್ದೀರಿ, ಹೀಗೆ ಮಾಡಿದ್ದೀರಿ ಅಂತೀರಲ್ವ, ನಾನೇನು ಆಕೆಯನ್ನು ರೇಪ್ ಮಾಡಿದ್ದೇನಾ” ಎಂದು ಮಾಧ್ಯಮದ ಮೇಲೆಯೇ ಮುಗಿಬಿದ್ದರು.

ಸದ್ಯ ಪತ್ರಕರ್ತರನ್ನು ಪ್ರಶ್ನಿಸುವ ವಿಡಿಯೋ ಸಹ ವೈರಲ್ ಆಗಿದ್ದು, ಲಿಂಬಾವಳಿಯವರು ಒಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮುಂದಾಗಿ ಒಂದರ ಮೇಲೊಂದರಂತೆ ವಿವಾದಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ.