Home Karnataka State Politics Updates ನೂತನ ಸಭಾಪತಿ, ‘ಪಂಚ ಭಾಷಾ ತಾರೆ ‘ ಯುಟಿ ಖಾದರ್ ಸಾಹೇಬ್ರಿಗೆ ಕನ್ನಡ ಕಷ್ಟವಾಗುತ್ತಾ? ಆರಗ...

ನೂತನ ಸಭಾಪತಿ, ‘ಪಂಚ ಭಾಷಾ ತಾರೆ ‘ ಯುಟಿ ಖಾದರ್ ಸಾಹೇಬ್ರಿಗೆ ಕನ್ನಡ ಕಷ್ಟವಾಗುತ್ತಾ? ಆರಗ ಜ್ಞಾನೇಂದ್ರ ಸದನದಲ್ಲಿ ಹೇಳಿದ್ದೇನು ?

Araga Jnanendra- UT Khader
Image source: Deccan Herald

Hindu neighbor gifts plot of land

Hindu neighbour gifts land to Muslim journalist

Araga Jnanendra- UT Khader : ರಾಜ್ಯ ವಿಧಾನಸಭಾ 16 ನೇ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಬಹುಮತ ಪಡೆಯುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಮಾತುಕತೆಯ ಬಳಿಕ ಸಿದ್ದರಾಮಯ್ಯ ಅವರೇ ಈ ರಾಜ್ಯದ 16 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಉಳಿದಂತೆ ಇತರ ಖಾತೆಗಳಿಗೂ ಸಚಿವರುಗಳ ಆಯ್ಕೆ ಬಹುತೇಕ ಪೂರ್ಣಗೊಂಡಿದೆ.

ಕಾಂಗ್ರೆಸ್ ನ ಪ್ರಭಾವಿ, ಸೋಲಿಲ್ಲದ ಸರದಾರ ಮಂಗಳೂರಿನ ಯು.ಟಿ ಖಾದರ್ (Araga Jnanendra- UT Khader )ಅವರು 16 ನೇ ನೂತನ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು,ಸದನದಲ್ಲಿ ನೂತನ ಸ್ಪೀಕರ್ ಗೆ ಸದಸ್ಯರಿಂದ ಅಭಿನಂದನೆ, ಶ್ಲಾಘನೆ, ಮಾರ್ಗದರ್ಶನ ನಡೆಯಿತು. ಅಂತೆಯೇ ಅಭಿಪ್ರಾಯ, ಅಭಿನಂದನೆ ಸಲ್ಲಿಸಲು ಎದ್ದು ನಿಂತ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತು ಆರಂಭಿಸಿ ಅಧ್ಯಕ್ಷರನ್ನು ಗೌರವಿಸಿ ಅಭಿನಂದಿಸಿದರು.

“ಖಾದರ್ ಸಾಹೇಬ್ರು ಕರಾವಳಿ ಮಂಗಳೂರಿನ ಒಂದು ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆ ಇರುವಂತಹ ಮುಸ್ಲಿಂ (ಬ್ಯಾರಿ) ಸಮುದಾಯದಿಂದ ಬಂದವರು. ಅಲ್ಲದೇ ನಮ್ಮ ತೀರ್ಥಹಳ್ಳಿಗೆ ತಾವು ಬಹಳ ಹತ್ತಿರದವರು.ನಾನು ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ ಅನೇಕ ವಿಚಾರಗಳ ಚರ್ಚೆ, ಹಿಜಾಬ್ ವಿವಾದದ ಸಂದರ್ಭ ತಾವು ಕೊಟ್ಟ ಸಲಹೆ, ಸೂಚನೆಗಳು ಬಹಳ ಉಪಯೋಗಕ್ಕೆ ಬಂತು” ಎಂದರು.

” ತಮ್ಮ ಪೀಠದಿಂದ ಹಲವಾರು ಒಳ್ಳೊಳ್ಳೆ ವಿಚಾರಗಳ ಚರ್ಚೆಗೆ ಉತ್ತೇಜನ ನೀಡಿ, ಸಭೆಯನ್ನು ನಿಯಂತ್ರಣ ಮಾಡಿಕೊಡಬೇಕು.ಪ್ರತಿಪಕ್ಷದ ಉಪನಾಯಕರಾಗಿ ಸಂಯಮದಿಂದ ನಡೆದುಕೊಂಡು, ಗೊಂದಲ ಉಂಟಾಗದಂತೆ ಮುನ್ನಡೆಸಿದ್ದೀರಿ. ಬಹುಷಃ ಭಾಷೆ ಸ್ವಲ್ಪ ಕಷ್ಟ ಆಗುತ್ತದೋ ಏನೋ ಎನ್ನುವ ಸಂಶಯ ಇದೆ. ಆದರೂ ನಿಮ್ಮ ಬಗ್ಗೆ ನಮಗೆಲ್ಲಾ ಗೊತ್ತಿರುವುದರಿಂದ ಅದನ್ನು ತಿದ್ದಿಕೊಳ್ಳುತ್ತೀರಿ ಎನ್ನುವ ಭರವಸೆ ಇದೆ ” ಎಂದಿದ್ದಾರೆ ಆರಗಜ್ಞಾನೇಂದ್ರ.

ನಿಜಕ್ಕೂ ಇಲ್ಲಿ ಖಾದರ್ ಸಾಹೇಬ್ರಿಗೆ ಕನ್ನಡ ಕಷ್ಟವಾಗುತ್ತದೆಯೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಿದ್ದು ಸಹಜ. ಯುಟಿ ಖಾದರ್ ಅವರು ಮಾತಾಡುವ ಕನ್ನಡ ಕೇಳಲು ಒಂಥರಾ ಖುಷಿ ಆಗುತ್ತದೆ. ಅವತ್ತು ಬಳ್ಳಾರಿಯಲ್ಲಿ ಗಣಿ ಧಣಿ ಜನಾರ್ದನ ರೆಡ್ಡಿ ಕನ್ನಡ ಮಾತಾಡ್ತಾ ಇದ್ರಲ್ವ, ಒಂದು ಥರ ಖಾದರ್ ಸರ್ ಕನ್ನಡದ ಮೋಡಿ ಆ ಥರ ಇದೆ. ಖಾದರ್ ಅವರು ಮಂಗಳೂರಿನವರೇ ಆಗಿರುವುದರಿಂದ ಅವರಿಗೆ ಕನ್ನಡ ಬರಲ್ಲ ಅನ್ನುವುದು ತಪ್ಪಾಗುತ್ತದೆ. ಅತ್ತ ಖಾದರ್’ರ ಮಾತೃ ಭಾಷೆ ಬ್ಯಾರಿ. ಯುಟಿ ಖಾದರ್ ತುಳುವರೊಂದಿಗೆ ತುಳು, ವಿವಿಧ ಇಲಾಖೆಗಳೊಂದಿಗೆ ಕನ್ನಡ ಮಾತಾಡುತ್ತಾರೆ. ಅಲ್ಲದೇ ಖಾದರ್ ಕಾನೂನು ವ್ಯಾಸಂಗ ಮಾಡಿರುವುದರಿಂದ ಅವರು ಇಂಗ್ಲಿಷ್, ಹಿಂದಿಯಲ್ಲೂ ಪರಿಣಿತ. ಪಂಚ ಭಾಷೆಗಳಲ್ಲೂ ಸಂಹವನ ನಡೆಸಬಲ್ಲ ಚಾಕಚಕ್ಯತೆ, ಸಮಚಿತ್ತದಿಂದ ಇರಬಲ್ಲ ಮನಸ್ಸು, ಕಾನೂನೂ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಬುದ್ಧಿವಂತಿಕೆ, ಮಾತಿನಲ್ಲಿ ಹಿಡಿತ, ಅತ್ಯಗತ್ಯವಾದ ತಾಳ್ಮೆ – ಈ ಗುಣಗಳಲ್ಲೂ ನೂತನ ಸಭಾಪತಿಯವರು ಪರಿಣಿತರು. ಹಾಗಾಗಿ ಅವರಿಗೆ ಸ್ಪೀಕರ್ ಹುದ್ದೆ ನಿಭಾಯಿಸೋದು ಕಷ್ಟವಾಗಲಾರದು.

ಇದನ್ನೂ ಓದಿ: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಸೋಮವಾರದಿಂದಲೇ ಪ್ರಾರಂಭ, ಆದರೂ ಗೊಂದಲದಲ್ಲಿ ಪೋಷಕರು ಮತ್ತು ಶಿಕ್ಷಕರು !