Home Karnataka State Politics Updates Belagavi Session Vidhasbaha: ನಾಳೆ ಬೆಳಗಾವಿ ಅಧಿವೇಶನನಕ್ಕೆ ಸಕಲ ಸಿದ್ಧತೆ: 21 ಕೋಟಿ ಖರ್ಚು

Belagavi Session Vidhasbaha: ನಾಳೆ ಬೆಳಗಾವಿ ಅಧಿವೇಶನನಕ್ಕೆ ಸಕಲ ಸಿದ್ಧತೆ: 21 ಕೋಟಿ ಖರ್ಚು

Hindu neighbor gifts plot of land

Hindu neighbour gifts land to Muslim journalist

Belagavi Session Vidhasbaha: ಸೋಮವಾರದಿಂದ ಬೆಳಗಾವಿ ಅಧಿವೇಶನ (Belagavi Winter Session) ಆರಂಭಗೊಳ್ಳಲಿದೆ. ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಪ್ರತಿವರ್ಷ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತದೆ.ಬೆಳಗಾವಿಯಲ್ಲಿ ಈವರೆಗೆ 13 ಬಾರಿ ಉಭಯ ಸದನಗಳ ಅಧಿವೇಶನ ನಡೆದಿದ್ದು, ಒಟ್ಟು 170 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಕಳೆದ ವರ್ಷ 15 ಕೋಟಿ ರೂ. ವೆಚ್ಚದಲ್ಲಿ ಅಧಿವೇಶನ ಮುಕ್ತಾಯಗೊಂಡಿತ್ತು. ಈ ಸಲದ 10 ದಿನದ ಬೆಳಗಾವಿ ಅಧಿವೇಶನಕ್ಕೆ 21 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ.

ಶಾಸಕರು, ಅಧಿಕಾರಿಗಳ ವಸತಿಗಾಗಿ 3 ಸಾವಿರ ಕೋಠಡಿಗಳು ಬುಕ್ಕಿಂಗ್ ಆಗಿದ್ದು 6 ಸಾವಿರ ಪೊಲೀಸ್ ಸಿಬ್ಬಂದಿ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಸುವರ್ಣ ಸೌಧದ ಸುತ್ತಮುತ್ತ ವ್ಯಾಪ ಪೊಲೀಸ್ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ.ಇಷ್ಟೆಲ್ಲಾ ಖರ್ಚು ವೆಚ್ಚ ಮಾಡಿದ್ರೂ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂಬುವುದು ಪ್ರತಿವರ್ಷ ಕೇಳಿ ಬರುತ್ತಿರುವ ಆರೋಪವಾಗಿದೆ. ನೆಪ ಮಾತ್ರಕ್ಕೆ ಎಂಬಂತೆ ಕೊನೆಯ 2 ದಿನಗಳ ಕಾಲ ಉತ್ತರ ಕರ್ನಾಟಕದ ಭಾಗದ ಚರ್ಚೆಗೆ ಸಮಯ ನೀಡಲಾಗುತ್ತದೆ. ಉಳಿದಂತೆ ಹೆಚ್ಚಿನ ಅವಧಿಯಲ್ಲಿ ಇತರ ಚರ್ಚೆಗಳು, ಗಲಾಟೆ, ಗದ್ದಲವೇ ಗಮನ ಸೆಳೆಯುತ್ತದೆ. ಹೀಗಾಗಿ ಈ ಬಾರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಒಟ್ಟು 84 ಸಂಘಟನೆಗಳು ಸಿದ್ಧತೆ ನಡೆಸಿಕೊಂಡಿವೆ. ಹೆಸರು ಕಾಳು, ಸೋಯಾಬಿನ್, ಬೆಳೆಗಳಿಗೆ ಪರಿಹಾರ ನೀಡುವಂತೆ ಬಿಜೆಪಿ ಸುವರ್ಣ ಸೌಧ ಮುತ್ತಿಗೆಗೆ ನಿರ್ಧಾರ ಮಾಡಿದೆ. ಕಬ್ಬು ಬೆಳೆಗಾರರ ವಿವಿಧ ಸಮಸ್ಯೆ ಇತ್ಯರ್ಥಕ್ಕೆ ರೈತರ ಬೃಹತ್ ಪ್ರತಿಭಟನೆ ನಡೆಸಲು ತಯಾರಿ ಮಾಡಿಕೊಂಡಿದೆ.ಇನ್ನು ಸರ್ಕಾರಿ ನೇಮಕಾತಿಗಾಗಿ ಆಗ್ರಹಿಸಿ ಯುವ ಸಮೂಹದಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಪಂಚಮಸಾಲಿ ಸಮಾಜದಿಂದ ಮೌನ ಪ್ರತಿಭಟನೆಗೆ ತೀರ್ಮಾನ ಮಾಡಲಾಗಿದ್ದು ಇದನ್ನು ಸರ್ಕಾರ ಹೇಗ ಎದುರಿಸುತ್ತೆ ಕಾದು ನೋಡಬೇಕಿದೆ.