Home Karnataka State Politics Updates Chikkaballapura: ಕಾಂಗ್ರೆಸ್ ಕಚೇರಿಯಲ್ಲಿ ಅಟೆಂಡರ್ ಆಗಿದ್ದ ಯುವಕನಿಗೆ ಒಲಿದ ಪ್ರಾಧಿಕಾರದ ಸದಸ್ಯ ಪಟ್ಟ !!

Chikkaballapura: ಕಾಂಗ್ರೆಸ್ ಕಚೇರಿಯಲ್ಲಿ ಅಟೆಂಡರ್ ಆಗಿದ್ದ ಯುವಕನಿಗೆ ಒಲಿದ ಪ್ರಾಧಿಕಾರದ ಸದಸ್ಯ ಪಟ್ಟ !!

Hindu neighbor gifts plot of land

Hindu neighbour gifts land to Muslim journalist

 

Chikkaballapura : ಅದೃಷ್ಟ ಯಾವಾಗ, ಹೇಗೆ ಒಲಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತಯೇ ಚಿಕ್ಕಬಳ್ಳಾಪುರದಲ್ಲಿ ಒಂದು ವಿಶಿಷ್ಟವಾದ ಘಟನೆ ನಡೆದಿದ್ದು  ಕಾಂಗ್ರೆಸ್ ಕಚೇರಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡಿಕೊಂಡಿದ್ದ ಯುವಕನಿಗೆ ಇದೀಗ ಪ್ರಾಧಿಕಾರದ ಸದಸ್ಯ ಪಟ್ಟ ಒಲಿದು ಬಂದಿದೆ.

 

ಹೌದು.. ಜಿಲ್ಲಾ ಕಾಂಗ್ರೆಸ್ ಕಚೇರಿ ಸಹಾಯಕನಾಗಿದ್ದ ಮೊಹಮ್ಮದ್ ಹಮೀಮ್ ಎಂಬಾತನಿಗೆ ಪ್ರಾಧಿಕಾರದ ಸದಸ್ಯ ಸ್ಥಾನ ಒಲಿದು ಬಂದಿದೆ. ಇನ್ನೂ ಹದಿಹರೆಯದ ಯುವಕನಾಗಿರುವ ಹಮೀಮ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕೆಲಸ ಮಾಡುತ್ತಾನೆ. ಪಕ್ಷದ ಕಚೇರಿಯನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ಪಕ್ಷದ ಸಭೆ, ಸಮಾರಂಭಗಳಿಗೆ ವೇದಿಕೆ ಸಿದ್ಧಪಡಿಸುವುದು, ಪಕ್ಷದ ಬಾವುಟ, ಬ್ಯಾನರ್ ಕಟ್ಟುವುದು ಹೀಗೆ ಪಕ್ಷದ ಕಚೇರಿಯಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ.

 

ಹೀಗೆ ಪಕ್ಷದ ಸಾಮಾನ್ಯ ಯುವಕ ಅಮೀಮ್‌ಗೆ ಇದೀಗ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ನೇಮಿಸುವ ಮಹತ್ವದ ಹುದ್ದೆಗೆ ಶಾಸಕ ಪ್ರದೀಪ್ ಈಶ್ವರ್ ನೇಮಿಸಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಪ್ರದೀಪ್ ಈಶ್ವರ್ ಅವರು ಹಲವು ದಿನಗಳ ಹಿಂದೆ ಚಿಕ್ಕಬಳ್ಳಾಪುರ ನಗರಸಭೆಗೆ 5 ಮಂದಿ ಸರ್ಕಾರಿ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡುವಾಗ ಆ ಯುವಕನಿಗೆ ಈ ಉಡುಗೊರೆ ನೀಡಿದ್ದಾರೆ.