Home News Youtuber Arrest: ಪ್ರಿಯಾಂಕಾ ಗಾಂಧಿ ಬೆಂಗಾವಲು ವಾಹನ ತಡೆದ ಯೂಟ್ಯೂಬರ್‌: ಬಂಧನ

Youtuber Arrest: ಪ್ರಿಯಾಂಕಾ ಗಾಂಧಿ ಬೆಂಗಾವಲು ವಾಹನ ತಡೆದ ಯೂಟ್ಯೂಬರ್‌: ಬಂಧನ

Hindu neighbor gifts plot of land

Hindu neighbour gifts land to Muslim journalist

Youtuber Arrest: ಕೇರಳದ ತ್ರಿಶೂರ್‌ನಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬೆಂಗಾವಲು ವಾಹನವನ್ನು ತಡೆದಿದ್ದಕ್ಕಾಗಿ ಅನೀಶ್ ಅಬ್ರಹಾಂ ಎಂಬ ಯೂಟ್ಯೂಬರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ವರದಿಯ ಪ್ರಕಾರ, ಶನಿವಾರ ನಡೆದ ಈ ಘಟನೆಯಲ್ಲಿ ಬೆಂಗಾವಲು ವಾಹನದಲ್ಲಿ ಪೈಲಟ್ ವಾಹನವು ಪದೇ ಪದೇ ಹಾರ್ನ್ ಮಾಡಿದ್ದರಿಂದ ಅನೀಶ್ ಕೋಪಗೊಂಡು ತಮ್ಮ ಕಾರನ್ನು ಅಡ್ಡ ನಿಲ್ಲಿಸಿದ್ದಾರೆ. ಪೊಲೀಸರು ಅನೀಶ್ ಕಾರನ್ನು ತೆರವುಗೊಳಿಸಲು ಮುಂದಾದ ವೇಳೆ ವಾಗ್ವಾದ ನಡೆಯಿತು ಎಂದು ವರದಿ ಹೇಳಿದೆ.

ಘಟನೆಗೆ ಸಂಬಂಧಪಟ್ಟಂತೆ ಮನ್ನುತ್ತಿ ಪೊಲೀಸರು ಎಳನಾಡು ನಿವಾಸಿ ಅನೀಶ್ ಅಬ್ರಹಾಂ ಅವರನ್ನು ಕಸ್ಟಡಿಗೆ ಪಡೆದು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶನಿವಾರ ರಾತ್ರಿ ಪ್ರಿಯಾಂಕಾ, ವಯನಾಡ್ ಮತ್ತು ಮಲಪ್ಪುರಂ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅಲ್ಲಿಂದ ಕಾರ್ಕ್ರಮ ಮುಗಿಸಿ ಮಲಪ್ಪುರಂನ ವಂದೂರಿನಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ಮನ್ನುತ್ತಿ ಬೈಪಾಸ್ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉದ್ದೇಶಪೂರ್ವಕವಾಗಿ ಬೆಂಗಾವಲು ವಾಹನ ತಡೆದು, ಜೀವಕ್ಕೆ ಅಪಾಯವನ್ನುಂಟು ಮಾಡುವುದು ಮತ್ತು ಪೊಲೀಸ್ ನಿರ್ದೇಶನಗಳನ್ನು ಪಾಲಿಸದಿರುವ ಆರೋಪದ ಮೇಲೆ ಅಬ್ರಹಾಂ ಅವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ, ನಂತರ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.