Home News Relationship: ಯುವತಿಯರಿಗೆ ಬೋಳು ತಲೆ ಪುರುಷರ ಮೇಲೆ ಹೆಚ್ಚು ಕ್ರಶ್ ಆಗುತ್ತೆ: ಯಾಕೆ ಗೊತ್ತಾ?

Relationship: ಯುವತಿಯರಿಗೆ ಬೋಳು ತಲೆ ಪುರುಷರ ಮೇಲೆ ಹೆಚ್ಚು ಕ್ರಶ್ ಆಗುತ್ತೆ: ಯಾಕೆ ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Relationship: ಹುಡುಗಿಯರಿಗೆ ಯುವಕರ ಮೇಲೆ ಕ್ರಶ್ ಉಂಟಾಗಳು ನಾನಾ ಕಾರಣ ಇರುತ್ತವೆ. ಅದರಲ್ಲೂ ಬೋಳು ತಲೆಯ ಯುವಕರು ಹೆಚ್ಚಿನ ಹುಡುಗಿಯರಿಗೆ ಇಷ್ಟ ಆಗುತ್ತಾರೆ ಅನ್ನೋ ಒಂದು ಟಾಪಿಕ್ ಇದೆ. ಹೌದು, ಯಾಕಂದ್ರೆ ಉದಾಹರಣೆಗೆ ಹಾಲಿವುಡ್‌ನ ಹಲವು ಹೀರೋಗಳು ಬೋಳು ತಲೆಯವರು. ಈ ಹೀರೋಗಳ ಮೇಲೆ ಹುಡುಗಿಯರಿಗೆ ಕ್ರಶ್ ಇದ್ದೇ ಇದೆ. ಅಲ್ಲದೇ ಇವರು ತುಂಬಾ ಆಕರ್ಷಕ ಎಂದು ಹೇಳುವುದುಂಟು.

ಹೌದು, ಬೋಳುತಲೆಯ ಪುರುಷರ ಬಗ್ಗೆ ಮಹಿಳೆಯರು ಹೆಚ್ಚು ಆಸಕ್ತರಾಗುವುದು ನಿಜ. ಇದಕ್ಕೆ ಯಾವುದೇ ಪರ್ಫೆಕ್ಟ್ ವಿವರಣೆ ಸಿಗಲಾರದು.  ಆದರೆ ಕೆಲವು ಅಧ್ಯಯನಗಳು ಬಾಲ್ಡಿ ಗಂಡಸರು ಕೆಲವು ಮಹಿಳೆಯರನ್ನು ಲೈಂಗಿಕವಾಗಿ (Relationship)  ಹೆಚ್ಚು ಆಕರ್ಷಿಸುತ್ತಾರೆ ಎಂಬುದೂ ಕಂಡುಬಂದಿದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಬೋಳು ಪುರುಷರು ತಮ್ಮದೇ ಪ್ರಾಯದ ಇತರರಿಗಿಂತ ದೈಹಿಕವಾಗಿ ಹೆಚ್ಚು ಅಂದವಾಗಿ ಮತ್ತು ಯಶಸ್ವಿಯೂ ಆಗಿರುತ್ತಾರೆ ಎಂದು ಜನ ನಂಬುತ್ತಾರೆ ಎಂದು ಕಂಡುಬಂದಿದೆ.

ಇನ್ನು ಸಾರ್ಲ್ಯಾಂಡ್ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞ ರೊನಾಲ್ಡ್ ಹೆನ್ಸ್ ಅವರು 20,000ಕ್ಕೂ ಹೆಚ್ಚು ಮಂದಿಯನ್ನು ಒಳಗೊಂಡ ಜಾಗತಿಕ ಸಂಶೋಧನೆಯನ್ನು ನಡೆಸಿದರು. ಅವರ ಸಂಶೋಧನೆಯ ಪ್ರಕಾರ, ಬೋಳು ಪುರುಷರು ಹೆಚ್ಚು ವಯಸ್ಸಾದವರಂತೆ ಕಂಡರೂ, ಹೆಚ್ಚು ಬುದ್ಧಿವಂತರು ಎಂದು ಜನ ಗ್ರಹಿಸುತ್ತಾರೆ. ಆದರೆ, ಅರ್ಧ ತಲೆ ಬೋಳಾದವರು ಹೆಚ್ಚು ಆಕರ್ಷಕ ಎಂದು ಮಹಿಳೆಯರು ಭಾವಿಸುವುದಿಲ್ಲ. ಬದಲಾಗಿ, ಪೂರ್ತಿಯಾಗಿ ತಲೆ ಬೋಳಾದವರನ್ನು ಹೆಚ್ಚು ಆಕರ್ಷಕ ಎಂದು ತಿಳಿಯುತ್ತಾರಂತೆ.

ಇಷ್ಟು ಮಾತ್ರವಲ್ಲ ಬೋಳು ತಲೆಯವರು, ಹುಡುಗಿಯರ ಕಣ್ಣಿನಲ್ಲಿ ಅತ್ಯಂತ ಆಕರ್ಷಕ ಪುರುಷರು, ಅವರಿಗೆ ಲೈಂಗಿಕ ಸಾಮರ್ಥ್ಯವೂ ಹೆಚ್ಚು, ಅವರು ಗಂಟೆಗಟ್ಟಲೆ ಸಂಭೋಗಿಸಬಲ್ಲರು ಎಂದೆಲ್ಲಾ ಕೊಚ್ಚಿಕೊಳ್ಳುವುದುಂಟು. ಇದು ಎಷ್ಟು ನಿಜ ಅನ್ನೋದು ಇಲ್ಲಿದೆ ನೋಡಿ.

ಬೋಳು ತಲೆಯವರಿಗೆ ಲೈಂಗಿಕ ಸಾಮರ್ಥ್ಯವೂ ಹೆಚ್ಚು ಅನ್ನೋದು ಇದು ಪೂರ್ತಿ ನಿಜವಲ್ಲ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಈ ನಂಬಿಕೆ ಹೇಗೆ ಬಂತೋ ಗೊತ್ತಿಲ್ಲ. ಆದರೆ ಪುರುಷರ ತಲೆಕೂದಕು ಸೇರಿದಂತೆ ದೇಹದ ನಾನಾ ಕಡೆ ಬೆಳೆಯುವ ಕೂದಲಿಗೂ ಅವರಲ್ಲಿ ಸ್ರಾವವಾಗುವ ಟೆಸ್ಟೋಸ್ಟಿರಾನ್ ಹಾರ್ಮೋನ್‌ಗೂ ಸಂಬಂಧವಿದೆ.

ಆದರೆ ಹೆಚ್ಚು ಟೆಸ್ಟೋಸ್ಟಿರಾನ್ ಉತ್ಪಾದನೆಯಿಂದ ತಲೆಕೂದಲು ಬಿದ್ದುಹೋಗುತ್ತದೆ ಹಾಗೂ ಅದೇ ಕಾಮಾಸಕ್ತಿಗೂ ಕಾರಣ ಎಂದ ನಂಬಲಾಗಿತ್ತು. ಅದು ಪೂರ್ತಿ ನಿಜವಲ್ಲ. ಯಾಕೆಂದರೆ ಪುರುಷರಲ್ಲಿ ತಲೆಕೂದಲು ಉದುರಲು ಕಾರಣವಾಗುವುದು ಟೆಸ್ಟೋಸ್ಟಿರಾನ್ ಅಲ್ಲ. ಬದಲಾಗಿ, ಡಿಹೈಡ್ರೋಟೆಸ್ಟೋಸ್ಟಿರಾನ್ ಎಂಬ ಇನ್ನೊಂದು ಹಾರ್ಮೋನ್. ಇದು ಹೆಚ್ಚಾಗಿ ಸ್ರವಿಸಿದರೆ ತಲೆಕೂದಲು ಉದುರುತ್ತದೆ. ಇದಕ್ಕೂ ಕಾಮಾಸಕ್ತಿಗೂ ಸಂಬಂಧವಿಲ್ಲ. ಹೀಗಾಗಿ ಬೋಳು ಅಥವಾ ಬಾಲ್ಡಿ ಪುರುಷರು ಹೆಚ್ಚು ಕಾಮಾಸಕ್ತರು ಎಂಬುದು ಸರಿಯಲ್ಲ .