

Viral Video : ಸಾಮಾನ್ಯವಾಗಿ ಮಹಿಳೆಯರಿಗೆ ಜಿರಳೆ ಎಂದರೆ ಭಯ. ಮನೆಯಲ್ಲಿ ಅಥವಾ ತಾವು ಓಡಾಡುವ ಜಾಗದಲ್ಲಿ ಎಲ್ಲಾದರೂ ಜಿರಲೆ ಕಂಡರೆ ಕಿಟಾರನೆ ಕಿರುಚಿ ಓಡಿ ಬಿಡುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಓಡಾಡುತ್ತಿದ್ದ ಜಿರಲೆಯನ್ನು ಹಿಡಿದು ಬರ್ಗರ್ ಗೆ ಹಾಕಿ ತಿಂದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ಹುಡುಗಿಯೊಬ್ಬಳು ರೆಸ್ಟೋರೆಂಟ್‌ನಲ್ಲಿ ತನ್ನ ಬರ್ಗರ್ ಅನ್ನು ತಿನ್ನುತ್ತಾ ಕುಳಿತಿದ್ದಳು. ಆದರೆ ನಂತರ ಜಿರಳೆ ಅವಳ ಮೇಜಿನ ಮೇಲೆ ಬರುತ್ತದೆ. ಹುಡುಗಿ ಭಯದಿಂದ ಕಿರುಚುತ್ತಾ ಅಲ್ಲಿಂದ ಓಡಿಹೋಗುತ್ತಾಳೆ ಎಂದು ನೀವು ಭಾವಿಸುತ್ತೀರಿ. ಆದರೆ ಹುಡುಗಿ ಯಾವುದೇ ಭಯ ಅಥವಾ ಹಿಂಜರಿಕೆಯಿಲ್ಲದೆ ಜಿರಳೆಯನ್ನು ಎತ್ತಿಕೊಂಡು, ನಂತರ ಅದನ್ನು ತನ್ನ ಬರ್ಗರ್‌ಗೆ ಒಳಗೆ ಹಾಕಿ ಒತ್ತಿ ತಿನ್ನಲು ಪ್ರಾರಂಭಿಸುತ್ತಾಳೆ.
ಇನ್ಸ್ಟಾಗ್ರಾಮ್ ಖಾತೆಯೊಂದರಲ್ಲಿ ಹಂಚಿಕೊಂಡ ಈ ವಿಡಿಯೋ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡುತ್ತಿದೆ. ಇದನ್ನು ಕಂಡ ಜನ ಬಾಯಿಗೆ ಬಂದಂತೆ ಕಮೆಂಟ್ ಮಾಡುತ್ತಿದ್ದಾರೆ.
https://www.instagram.com/reel/DLxIFq7NMa9/?igsh=MXRuNzQ1NXBvOHczOQ==
ಇದನ್ನೂ ಓದಿ: Bridge collapse: ಗುಜರಾತ್‌ನಲ್ಲಿ ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು – ಕನಿಷ್ಠ 10 ಜನರ ಸಾವು













