Home News ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ ಎಕ್ಸರೇ ನೋಡಿ ದಂಗಾದ ವೈದ್ಯರು ! ಅಷ್ಟಕ್ಕೂ ಹೊಟ್ಟೆಯೊಳಗಿದ್ದದೇನು?

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ ಎಕ್ಸರೇ ನೋಡಿ ದಂಗಾದ ವೈದ್ಯರು ! ಅಷ್ಟಕ್ಕೂ ಹೊಟ್ಟೆಯೊಳಗಿದ್ದದೇನು?

Hindu neighbor gifts plot of land

Hindu neighbour gifts land to Muslim journalist

ದಿನಕ್ಕೊಂದರಂತೆ ಆಸ್ಪತ್ರೆಗಳಲ್ಲಿ ಚಿತ್ರ-ವಿಚಿತ್ರವಾದ ಘಟನೆಗಳು ವರದಿಯಾಗುತ್ತಲೆ ಇದೆ. ಜನರ ದೇಹಗಳಲ್ಲಿ ವಸ್ತುಗಳು ಪತ್ತೆಯಾಗುವಂತಹ ಅಥವಾ ಶಸ್ತ್ರ ಚಿಕಿತ್ಸೆ ಬಳಿಕ ವೈದ್ಯರ ಮರೆವಿನಿಂದ ಯಾವುದಾದರೂ ವಸ್ತುಗಳನ್ನು ಬಿಟ್ಟಂತಹ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಈಗ ಅಂತಹದೆ ಘಟನೆಯೊಂದು ಬೆಳಕಿಗೆ ಬಂದಿದ್ದು, ಪರೀಕ್ಷಿಸಲು ಬಂದಿದ್ದ ವ್ಯಕ್ತಿಯ ಎಕ್ಸ್-ರೇ ನೋಡಿ ವೈದ್ಯರೇ ಬೆಕ್ಕಸ ಬೆರಗಾಗಿದ್ದಾರೆ.!!

ಹೌದು, ಆತ ಬಿಹಾರದ ಮುಜಾಫರ್‌ಪುರದ ನಿವಾಸಿಯಾಗಿದ್ದು, ಕಳೆದ 20 ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದನು. ಮೊದ ಮೊದಲು ಸಾಮಾನ್ಯ ಹೊಟ್ಟೆ ನೋವೆಂದು ಅಷ್ಟೊಂದು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ನೋವು ಹೆಚ್ಚಾದ ಪರಿಣಾಮ ಹತ್ತಿರದಲ್ಲಿದ್ದ ಆಸ್ಪತ್ರೆಗೆ ತೆರಳಿದ್ದನು. ಆತನ ಎಕ್ಸ್-ರೇ ಮಾಡಿ ನೋಡಿದಾಗ ಯುವಕನ ಗುದದ್ವಾರದಲ್ಲಿ ಸ್ಟೀಲ್ ಗ್ಲಾಸ್ ಸಿಲುಕಿಕೊಂಡಿರುವುದು ಪತ್ತೆಯಾಗಿತ್ತು. ಇದನ್ನು ಕಂಡ ವೈದ್ಯರು ಶಾಕ್ ಆಗಿದ್ದಾರೆ.

ಯುವಕನ ಬಳಿ ನಿಜಾಂಶವನ್ನು ವಿಚಾರಿಸಿದಾಗ, ಸಂತ್ರಸ್ತ ಯುವಕನು 15 ದಿನಗಳ ಹಿಂದೆ ತನ್ನ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದನಂತೆ. ಅಲ್ಲಿ ಆತನ ಸಂಬಂಧಿಕರು ಥಳಿಸಿ, ಮೂರ್ಛೆ ಬರುವಂತೆ ಮಾಡಿದ್ದಾರೆ. ಅಲ್ಲಿಂದ ಬಂದ ಬಳಿಕ ಯುವಕನಿಗೆ ಗುದದ್ವಾರದಲ್ಲಿ ನೋವಿನ ಅನುಭವ ಪ್ರಾರಂಭವಾಯಿತು. ಇದಾದ ಕೆಲ ದಿನಗಳಲ್ಲೆ ಹೊಟ್ಟೆ ನೋವು ಆರಂಭವಾಯಿತು. ತಮ್ಮ ಹಳ್ಳಿಯಲ್ಲಿನ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆದರೂ ಯುವಕನ ಹೊಟ್ಟೆನೋವು ಕಡಿಮೆಯಾಗಿರಲಿಲ್ಲ.

15 ದಿನವಾದರೂ ಹೊಟ್ಟೆನೋವು ವಾಸಿಯಾಗದೇ ನೋವು ಹೆಚ್ಚಾದಾಗ ಚಿಕಿತ್ಸೆಗಾಗಿ ಯುವಕ ಎಸ್‌ಕೆಎಂಸಿಎಚ್ ತಲುಪಿದಾಗ ವೈದ್ಯರು ಎಕ್ಸ್-ರೇ ಮಾಡಿಸಿದಾಗ ಗುದದ್ವಾರದಲ್ಲಿ ಗಾಜು ಅಂಟಿಕೊಂಡಿರುವುದು ಕಂಡುಬಂದಿದೆ. ಇನ್ನು ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡದೇ ಗಾಜು ತೆಗೆಯುವ ಪ್ರಯತ್ನ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಇದರಲ್ಲಿ ಯಶಸ್ವಿಯಾಗದಿದ್ದರೆ ಮಾತ್ರ ಯುವಕರು ಆಪರೇಷನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.