Home News Bengaluru : ಪ್ರೇಯಸಿಯೊಂದಿಗೆ 8 ದಿನಗಳಿಂದ ಲಾಡ್ಜ್ ನಲ್ಲಿ ತಂಗಿದ್ದ ಪುತ್ತೂರಿನ ಯುವಕ – 9ನೇ...

Bengaluru : ಪ್ರೇಯಸಿಯೊಂದಿಗೆ 8 ದಿನಗಳಿಂದ ಲಾಡ್ಜ್ ನಲ್ಲಿ ತಂಗಿದ್ದ ಪುತ್ತೂರಿನ ಯುವಕ – 9ನೇ ದಿನಕ್ಕೆ ಶವವಾಗಿ ಪತ್ತೆ!!

Hindu neighbor gifts plot of land

Hindu neighbour gifts land to Muslim journalist

Bengaluru : ಬೆಂಗಳೂರಿನ ಲಾಡ್ಜ್ ನಲ್ಲಿ ತನ್ನ ಪ್ರೇಯಸಿಯೊಂದಿಗೆ ಸುಮಾರು ಎಂಟು ದಿನಗಳಿಂದಲೂ ತಂಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಯುವಕನೊಬ್ಬ ಇದೀಗ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾನೆ.

ಹೌದು, ಪುತ್ತೂರಿನಿಂದ ಬಂದಿದ್ದ ಯುವಕ ತಕ್ಷಿತ್ ವಿರಾಜಪೇಟೆಯ ಯುವತಿ ರಕ್ಷಿತಾ ಜೊತೆ ಲಾಡ್ಜ್ ಮಾಡಿಕೊಂಡಿದ್ದನು. ಸುಮಾರು ಎಂಟು ದಿನಗಳಿಂದಲೂ ಕೂಡ ಅದೇ ಲಾಡ್ಜ್ ನಲ್ಲಿ ವಾಸವಾಗಿದ್ದರು. ಕೊನೆ ದಿನ ಸ್ವಿಗ್ಗಿಯಿಂದ ಊಟ ಆರ್ಡರ್ ಮಾಡಿದ ಪ್ರೇಮಿಗಳು ಒಟ್ಟಿಗೆ ಊಟ ಮಾಡಿದ್ದರು. ನಂತರ ಇಬ್ಬರಿಗೆ ಫುಡ್ ಪಾಯ್ಸಿನ್ ಆಗಿ ಮಾತ್ರೆಗಳನ್ನು ತಿಂದಿದ್ದರು. ಸ್ವಲ್ಪ ಸುಧಾರಿಸಿಕೊಂಡ ಬಳಿಕ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾರೆ. ಆದರೆ ಯುವಕ ತಕ್ಷಿತ್ ಮಾತ್ರ ಮೃತಪಟ್ಟಿದ್ದಾನೆ.

ಬೆಂಗಳೂರಿನ (Bengaluru) ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರ್ಯಾಂಡ್ ಚಾಯ್ಸ್ ಎನ್ನುವ ಲಾಡ್ಜ್​ ನಲ್ಲಿ ನಡೆದಿದೆ. 8 ದಿನವೂ ಊಟ ತರಿಸಿಕೊಂಡು ಊಟ ಮಾಡಿದ್ದರು. ನಂತರ ಮೆಡಿಕಲ್ ಗೆ ಹೋಗಿ ಇಬ್ಬರು ಮಾತ್ರೆಗಳನ್ನು ಸೇವಿಸಿದ್ದಾರೆ.ಸುಧಾರಿಸಿಕೊಂಡ ಬಳಿಕ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾರೆ. ಆದರೆ ತಕ್ಷಿತ್ ಮಾತ್ರ ಮಲಗಿದ್ದವನು ಮತ್ತೆ ಏಳಲೇ ಇಲ್ಲ. ಯುಡಿಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಯುವಕನ ಸಾವಿಗೆ ತನಿಖೆಯಿಂದಷ್ಟೇ ಕಾರಣ ತಿಳಿದು ಬರಬೇಕಿದೆ.