Home News Uttar Pradesh: ಬುಲ್ಡೋಜರ್ ನುಗ್ಗಿಸಿ ಬಿಜೆಪಿ ಕಚೇರಿಯನ್ನೇ ನೆಲಸಮ ಮಾಡಿದ ಯೋಗಿ ಸರ್ಕಾರ – ಕಾರಣವೇನು?

Uttar Pradesh: ಬುಲ್ಡೋಜರ್ ನುಗ್ಗಿಸಿ ಬಿಜೆಪಿ ಕಚೇರಿಯನ್ನೇ ನೆಲಸಮ ಮಾಡಿದ ಯೋಗಿ ಸರ್ಕಾರ – ಕಾರಣವೇನು?

Hindu neighbor gifts plot of land

Hindu neighbour gifts land to Muslim journalist

Uttar Pradesh: ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಬುಲ್ಡೋಜರ್ ಸರ್ಕಾರ ಇಂದ ದೇಶಾದ್ಯಂತ ಪ್ರಸಿದ್ಧಿ. ಯಾರಾದರೂ ತಪ್ಪು ಮಾಡಿದರೆ, ಅಪರಾಧ ಎಸಗಿದರೆ ಅವರ ಮನೆಗಳನ್ನು, ಸಂಬಂಧಪಟ್ಟ ಕಟ್ಟಡಗಳನ್ನು ನೆಲಸಮ ಮಾಡಿ ಬಿಸಾಕಿಬಿಡುತ್ತದೆ. ಆದರೆ ಸುಪ್ರೀಂ ಕೋರ್ಟ್ ಚಾಟಿ ಬೆನ್ನಲ್ಲೇ ಇದು ಕೊಂಚ ನಿಂತಿದೆ. ಆದರೀಗ ಯೋಗಿ ಸರ್ಕಾರ ಮತ್ತೊಂದು ಕೆಲಸಕ್ಕೆ ಕೈಹಾಕಿದ್ದು ಉತ್ತರ ಪ್ರದೇಶದಾದ್ಯಂತ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಕಾರ್ಯವನ್ನು ಮಾಡುತ್ತಿದೆ.

ಹೌದು, ಉತ್ತರ ಪ್ರದೇಶ(Uttar Pradesh)ದಾದ್ಯಂತ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಸರ್ಕಾರದ ಕಾರ್ಯ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಅಚ್ಚರಿ ಎಂಬಂತೆ ಯೋಗಿ ಸರ್ಕಾರ ಬಿಜೆಪಿ ಕಚೇರಿಯನ್ನೇ ಧ್ವಂಸ ಮಾಡಿದೆ. ಬುಲ್ಡೋಜರ್ ನುಗ್ಗಿಸಿ ಸ್ವಪಕ್ಷದ ಕಚೇರಿಯನ್ನು ನೆಲಸಮಗೊಳಿಸಿದೆ.

ಯಸ್… ಜಾಗವನ್ನು ಅತಿಕ್ರಮಣ ಮಾಡಿಕೊಂಡಿದೆ ಎನ್ನುವ ಆರೋಪದಲ್ಲಿ ಬಲ್ಲಿಯಾದಲ್ಲಿರೋ ಬಿಜೆಪಿ ಕಚೇರಿಯನ್ನೇ ಯೋಗಿ ಸರ್ಕಾರ ನೆಲಸಮ ಮಾಡಿದೆ. ಇದಕ್ಕೂ ಮುಂಚಿತವಾಗಿ ಜಿಲ್ಲಾಡಳಿತ ಹಾಗೂ ಪಾಲಿಕೆ ಆಡಳಿತವು ಬಿಜೆಪಿ ಶಿಬಿರ ಕಚೇರಿಯನ್ನು ತೆರವು ಮಾಡಲು ಎರಡು ಬಾರಿ ತೆರಳಿದ್ದತ್ತು. ಆದ್ರೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಂದ್ರ ಸಿಂಗ್‌ ವಿರೋಧದಿಂದ ಬರಿಗೈಯಲ್ಲಿ ವಾಪಸಾಗಬೇಕಾಯಿತು. ಆದರೆ ಈಗ ಯಾವ ವಿರೋಧವನ್ನು ಲೆಕ್ಕಿಸದೆ ಹೋಗಿ ಸರ್ಕಾರ ಮಹತ್ವದ ಕ್ರಮವನ್ನು ಕೈಗೊಂಡಿದೆ.