Home News Dasara: ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆ: ಮುಖ್ಯಮಂತ್ರಿಗೆ ಲೀಗಲ್ ನೋಟಿಸ್

Dasara: ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆ: ಮುಖ್ಯಮಂತ್ರಿಗೆ ಲೀಗಲ್ ನೋಟಿಸ್

Hindu neighbor gifts plot of land

Hindu neighbour gifts land to Muslim journalist

Dasara: ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರ ಆಯ್ಕೆ ವಿರೋಧಿಸಿ ರಾಜ್ಯದ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಲೀಗಲ್ ನೋಟಿಸ್ ಜಾರಿಮಾಡಲಾಗಿದೆ.

‘ಬಾನು ಅವರು ಭುವನೇಶ್ವರಿ ದೇವಿ ಹಾಗೂ ಕನ್ನಡ ಬಾವುಟದಲ್ಲಿನ ಕೆಂಪು- ಹಳದಿ ಕುರಿತು ಹಾಸ್ಯ ಮಾಡಿದ್ದು, ಮೂರ್ತಿ ಪೂಜೆ ವಿರೋಧಿಸುವುದಾಗಿ ಹೇಳಿದ್ದು, ಅದು ಹಿಂದೂಗಳ ಭಾವನೆಗೆ ಅವಮಾನ ಉಂಟುಮಾಡಿದೆ. ಹೀಗಾಗಿ ಅವರಿಗೆ ನೀಡಿದ ದಸರಾ (Dasara) ಉದ್ಘಾಟನೆ ಆಹ್ವಾನವನ್ನು ಹಿಂಪಡೆಯಬೇಕು’ ಎಂದು ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:IB Recruitment 2025: 10th ಪಾಸಾದವರಿಗೆ ಸರ್ಕಾರಿ ಉದ್ಯೋಗ ಅವಕಾಶ 

‘ಏಳು ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು’ ಎಂದೂ ಮಾಹಿತಿ ನೀಡಿದ್ದಾರೆ.