Home News ಹಿಂದೂ ಮಹಿಳೆಯ ಶಿರಚ್ಛೇದ ಮಾಡಿದ ದುಷ್ಕರ್ಮಿಗಳು | ಚರ್ಮ ಸುಲಿದು ಗದ್ದೆಗೆ ಎಸೆದ ಪಾಪಿಗಳು

ಹಿಂದೂ ಮಹಿಳೆಯ ಶಿರಚ್ಛೇದ ಮಾಡಿದ ದುಷ್ಕರ್ಮಿಗಳು | ಚರ್ಮ ಸುಲಿದು ಗದ್ದೆಗೆ ಎಸೆದ ಪಾಪಿಗಳು

Hindu neighbor gifts plot of land

Hindu neighbour gifts land to Muslim journalist

ಕೆಲವೊಮ್ಮೆ ದಬ್ಬಾಳಿಕೆ ಅನ್ನೋದು ಯಾರಿಗೆ ಯಾವ ರೀತಿ ಆದರೂ ಆಗಬಹುದು. ಹೌದು ಕೆಲವೊಂದು ಸಲ ಹೆಣ್ಣಾಗಿ ಹುಟ್ಟಬಾರದು ಅನ್ನಿಸುವಷ್ಟು ಶಿಕ್ಷೆ ನೀಡುತ್ತಾರೆ. ಅನ್ಯಾಯಗಳಿಗೆ ಕೊನೆ ಇಲ್ಲವೇನೋ ಅಥವಾ ಜನರಿಗೆ ಕಾನೂನಿನ ಭಯ ಇಲ್ಲವೋ ಅರ್ಥ ಆಗುತ್ತಿಲ್ಲ.

ಇದೀಗ ಹಿಂದು ಸಮುದಾಯದ ವಿಧವೆ ಮಹಿಳೆಯೊಬ್ಬಳನ್ನು ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿರುವ ಘಟನೆ ಪಾಕಿಸ್ತಾನದ ಸಿಂಜೋರೋ ಪಟ್ಟಣದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

40 ವರ್ಷದ ದಯಾ ಬೆಲ್ ಎಂಬ ಮಹಿಳೆಯನ್ನು ಆರೋಪಿಗಳು ಹತ್ಯೆ ಮಾಡಿ, ಆಕೆಯ ಎದೆಯನ್ನು ಕತ್ತರಿಸಿದ್ದಾರೆ. ನಂತರ ಮೃತದೇಹದಿಂದ ಚರ್ಮವನ್ನು ಕಿತ್ತೆಸೆದು ಅಮಾನುಷವಾಗಿ ವರ್ತಿಸಿದ್ದಾರೆ .

ಮೃತ ಮಹಿಳೆ ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಘಟನೆಯ ಬಗ್ಗೆ ಪಾಕಿಸ್ತಾನ ಮೂಲದ ಹಿಂದು ಸಮುದಾಯದ ಮಹಿಳಾ ಸೆನೆಟರ್ ಕೃಷ್ಣ ಕುಮಾರಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಹಿಂದು ವಿಧವೆ ಮಹಿಳೆಯನ್ನು ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ. ನಂತರ ಎದೆಯ ಭಾಗವನ್ನು ಕತ್ತರಿಸಿ, ಮುಖದ ಮೇಲಿನ ಚರ್ಮವನ್ನು ಸುಲಿದಿದ್ದಾರೆ. ಮೃತದೇಹ ಗದ್ದೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ಮಹಿಳೆಯ ಕುಟುಂಬ ಸದಸ್ಯರ ವಿವರಗಳನ್ನು ಪಡೆದಿದ್ದಾರೆ.

ಸಿಂಜೋ‌ ಹಾಗೂ ಶಹಪುರ್ಚಕರ್ ಪೊಲೀಸ್ ತಂಡಗಳು ಘಟನಾ ಸ್ಥಳಕ್ಕೆ ಬಂದು ತಪಾಸಣೆ ನಡಿಸಿವೆ ಎಂದು ಮಾಹಿತಿ ದೊರೆತಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ನಾಯಕರು ತಿಳಿಸಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ತನಿಖೆ ನಂತರ ತಿಳಿದು ಬರಬೇಕಿದೆ.