Home News Women Deadbody in Beach: ಕಡಲತೀರದಲ್ಲಿ ತುಂಬು ಗರ್ಭಿಣಿಯ ಶವ ಪತ್ತೆ!

Women Deadbody in Beach: ಕಡಲತೀರದಲ್ಲಿ ತುಂಬು ಗರ್ಭಿಣಿಯ ಶವ ಪತ್ತೆ!

Women Deadbody in Beach
Image source : istock

Hindu neighbor gifts plot of land

Hindu neighbour gifts land to Muslim journalist

Women Deadbody in Beach : ಕಡಲ ತೀರದಲ್ಲೊಂದು ಮನ ಕಲಕುವಂತ ಸ್ಥಿತಿಯಲ್ಲಿ ತುಂಬು ಗರ್ಭಿಣಿಯ ಶವವು ದೊರಕಿದ್ದು ಕಡಲತೀರ ಮೌನ ತಳೆದಿದೆ. ಹೌದು, ಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್​ನಲ್ಲಿ ( Women Deadbody in Beach) ಗರ್ಭಿಣಿಯೊಬ್ಬರ ಶವ ಇರುವ ಮಾಹಿತಿ ಪೊಲೀಸರಿಗೆ ದೊರಕಿದ್ದು, ಮಹಿಳೆಯ ಅರೆಬೆತ್ತಲೆ ದೇಹವು ಸಮುದ್ರ ತೀರದಲ್ಲಿ ಮರಳಿನಲ್ಲಿ ಹೂತುಹೋಗಿತ್ತು ಎನ್ನಲಾಗಿದೆ.

ಸಮುದ್ರ ತೀರದಲ್ಲಿದ್ದ ಸ್ಥಳೀಯರು ಮೃತದೇಹದ ಪತ್ತೆಯಾಗಿರುವ ಮಾಹಿತಿ ಪೊಲೀಸರಿಗೆ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಮೂಲತಃ ಪೆಡಗಂಟ್ಯಾಡ ಪ್ರದೇಶದ ಮಹಿಳೆ ಮಂಗಳವಾರ ಸಂಜೆಯಿಂದ ತನ್ನ ಅತ್ತೆಯ ಮನೆಯಿಂದ ನಾಪತ್ತೆ ದೂರು ದಾಖಲಾಗಿದ್ದು, ಆತ್ಮಹತ್ಯೆ ಪತ್ರವನ್ನು ರೂಮ್​ನಲ್ಲಿ ಇಟ್ಟು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯೂಪೋರ್ಟ್ ಪೊಲೀಸ್ ಇನ್ಸ್‌ಪೆಕ್ಟರ್ ಸುವ್ವಾರಿ ರಾಮು ತಿಳಿಸಿದ್ದಾರೆ.

ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು, ಆದರೆ ಆಕೆ ಐದು ತಿಂಗಳ ಗರ್ಭಿಣಿ ಎಂಬುದು ತಿಳಿದುಬಂದಿದೆ. ಆಕೆ ಮನೆಯಿಂದ ಹೊರ ಹೋಗುವ ಮೊದಲು ಪತಿಯೊಂದಿಗೆ ಜಗಳವಾಡಿದ್ದಳು ಎನ್ನುವ ವಿಚಾರ ಲಭ್ಯವಾಗಿದೆ.

ಆಕೆಯ ಪತಿ ಸಾಫ್ಟ್​ವೇರ್ ಎಂಜಿನಿಯರ್ ಕಳೆದ 15 ದಿನಗಳ ಹಿಂದೆ ಕಚೇರಿಗೆ ಹಿಂದಿರುಗಿದ್ದ, ಅಲ್ಲಿಯವರೆಗೂ ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಆದರೆ ಅತ್ತೆ ಹಾಗೂ ಸೊಸೆ ನಡುವಿನ ಸಂಬಂಧ ಸರಿ ಇಲ್ಲದ ಕಾರಣ ಮನನೊಂದು ಪತಿಯ ವಿರಹ ತಾಳಲಾರದೆ, ಆಕೆಯ ಮನಸ್ಸು ವಿಚಲಿತಗೊಂಡ ಕಾರಣ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಪೊಲೀಸ್ ತನಿಖೆಯಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಕೊಲೆಯ ಕುರುಹುಗಳಾವುದೂ ಗೋಚರಿಸಿಲ್ಲ. ಆಕೆಯ ಕೋಣೆಯಿಂದ ಸೂಸೈಡ್ ನೋಟ್ ಪತ್ತೆಯಾಗಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ.

ಮರಣೋತ್ತರ ಪರೀಕ್ಷೆ ಆಗುವರೆಗೂ ಅನುಮಾನಾಸ್ಪದ ಸಾವು ಎಂದೇ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಂಗ್ ಜಾರ್ಜ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿ: Supreme court: ಆಯುರ್ವೇದ ಡಾಕ್ಟರ್ Vs MBBS ಸಂಬಳ: ಇಬ್ಬರೂ ಸಮಾನ ವೇತನಕ್ಕೆ ಅರ್ಹರಲ್ಲ ಎಂದ ಸುಪ್ರೀಂ, ಯಾರಿಗೆ ಜಾಸ್ತಿ ?!