Home News Koppala: ಗೃಹಲಕ್ಷ್ಮೀ ಹಣದಲ್ಲಿ ಬೋರ್‌ವೆಲ್‌ ಕೊರೆಸಿದ ಮಹಿಳೆ!

Koppala: ಗೃಹಲಕ್ಷ್ಮೀ ಹಣದಲ್ಲಿ ಬೋರ್‌ವೆಲ್‌ ಕೊರೆಸಿದ ಮಹಿಳೆ!

Hindu neighbor gifts plot of land

Hindu neighbour gifts land to Muslim journalist

Koppala: ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಿಂದ ಬಂದಿದ್ದ ಹಣದಲ್ಲಿ ಮಹಿಳೆಯೊಬ್ಬರು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದಲ್ಲಿ ಬೋರ್‌ವೆಲ್ ಕೊರೆಸಿದ್ದಾರೆ. ಬೋರ್‌ವೆಲ್‌ನಿಂದ 2.5 ಇಂಚು ನೀರು ಬಂದಿದೆ. ಹಟ್ಟಿ ಗ್ರಾಮದ ಹನುಮವ್ವ ಅವರು ಸತತ ಆರು ತಿಂಗಳಿನಿಂದ ಶಾಸಕ ರಾಘವೇಂದ್ರ ಹಿಟ್ನಾಳ ಅವರೇ ಬಂದು ಬೋರ್‌ವೆಲ್‌ಗೆ ಚಾಲನೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು.

ಇದೀಗ ಬುಧವಾರ ಶಾಸಕರು ಹನುಮವ್ವ ಅವರ ಹೊಲದಲ್ಲಿ ಬೋರ್‌ವೆಲ್‌ ಕೊರೆಸಲು ಚಾಲನೆ ನೀಡಿದರು. ಗೃಹಲಕ್ಷ್ಮೀ ಹಣವನ್ನು ಬೋರ್‌ವೆಲ್‌ ಕೊರೆಸಬೇಕೆಂದೇ ಕೂಡಿಟ್ಟಿದ್ದೆವು. ಈಗ ಕಾಲ ಕೂಡಿ ಬಂದಿದ್ದರಿಂದ ಶಾಸಕರ ನೇತೃತ್ವದಲ್ಲಿ ಬೋರ್‌ವೆಲ್‌ ಕೊರೆಯಿಸಿದ್ದು ನೀರು ಸಹ ಬಂದಿದೆ ಎಂದು ಹನುಮವ್ವ ತಳವಾರ ಸಂತೋಷ ವ್ಯಕ್ತಪಡಿಸಿದ್ದಾರೆ.