Home News Viral News: 10 ನಿಮಿಷ ಟಾಯ್ಲೆಟ್ ಬ್ರೇಕ್ ಪ್ರಶ್ನಿಸಿದ ಬಾಸ್ ; ರಾಜೀನಾಮೆ ನೀಡಿ ಹೊರಬಂದ...

Viral News: 10 ನಿಮಿಷ ಟಾಯ್ಲೆಟ್ ಬ್ರೇಕ್ ಪ್ರಶ್ನಿಸಿದ ಬಾಸ್ ; ರಾಜೀನಾಮೆ ನೀಡಿ ಹೊರಬಂದ ಲೇಡಿ !

Viral News
image source: Jobstreet

Hindu neighbor gifts plot of land

Hindu neighbour gifts land to Muslim journalist

Viral News: ಕಂಪನಿ ಉದ್ಯೋಗಿಯೊಬ್ಬರು ಕೇವಲ ಹತ್ತು ನಿಮಿಷಗಳ ಕಾಲ ಕೆಲಸದಿಂದ ಬ್ರೇಕ್ ತೆಗೆದುಕೊಂಡು ವಾಶ್’ರೂಂ ಗೆ ಹೋಗಿದ್ದಕ್ಕೆ ಬಾಸ್ ಪ್ರಶ್ನೆ ಮಾಡಿದ್ದು, ಈ ಹಿನ್ನೆಲೆ ಮಹಿಳೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕಂಪನಿಯಿಂದ ಹೊರ ನಡೆದ ಘಟನೆ ಬೆಳಕಿಗೆ ಬಂದಿದೆ (Viral News).

ಮಹಿಳೆ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಉದ್ಯೋಗಕ್ಕೆ ಸೇರಿ ಮೂರು ದಿನಗಳಾಗಿತ್ತು. ಕೆಲಸದ ವೇಳೆ ಮಹಿಳೆ ಹತ್ತು ನಿಮಿಷಗಳ ಕಾಲ ಟಾಯ್ಲೆಟ್ ಬ್ರೇಕ್ ತೆಗೆದುಕೊಂಡಿದ್ದಾರೆ. ಇದನ್ನು ಬಾಸ್‌ ಪ್ರಶ್ನಿಸಿದ್ದಾರೆ. ಯಾಕಾಗಿ 10 ನಿಮಿಷ ಟಾಯ್ಲೆಟ್ ಬ್ರೇಕ್‌ ತೆಗೆದುಕೊಂಡದ್ದು ಹಾಗೂ ಕೊಟ್ಟಿರುವ ವರ್ಕ್ ಫಿನಿಶ್ ಮಾಡಲು ಯಾಕೆ ತಡವಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ ಎಂಬುದನ್ನು ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜೊತೆಗೆ ಮಹಿಳೆಗೆ ಅವರು ಕೆಲಸ ನೀಡುತ್ತಿರಲಿಲ್ಲ. ಸಹೋದ್ಯೋಗಿಯೊಬ್ಬರು ಗೈಡ್ ಮಾಡುತ್ತಿದ್ದರು. ಅವರು ಆರು ಗಂಟೆಗೆ ಮನೆಗೆ ಹೋಗುವಂತೆ ಸೂಚಿಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ, ಮಹಿಳೆ ಘಟನೆಯ ಬಗ್ಗೆ ವಿವರಿಸಿದರೆ ಬಾಸ್ ಮಹಿಳೆಯದೇ ತಪ್ಪು ಎನ್ನುವಂತೆ ಆರೋಪಿಸಿದ್ದು, ಇದರಿಂದ ಬೇಸತ್ತ ಮಹಿಳೆ ಕೆಲಸವನ್ನು ತೊರೆದಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಹಿಳೆ, “ಇಂಥಾ ಟಾಕ್ಸಿಕ್‌ ಅಗಿರುವ ಕೆಲಸ ಮಾಡುವ ಸ್ಥಳವನ್ನು ಬಿಟ್ಟು ಬಂದಿದ್ದಕ್ಕಾಗಿ ತುಂಬಾ ಖುಷಿಯಾಗಿದ್ದೇನೆ” ಎಂದು‌ ಹೇಳಿದ್ದಾರೆ. ಸದ್ಯ ಮಹಿಳೆ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗಿದ್ದು, ಜನರು ವಿಧವಿಧವಾದ ಕಾಮೆಂಟ್ ಮಾಡಿದ್ದಾರೆ. ಹಲವರು ಮಹಿಳೆಯ ಮುಂದಿನ ಉದ್ಯೋಗಕ್ಕೆ ಶುಭಹಾರೈಸಿದರೆ, ಕೆಲವರು ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿದ್ದೀರಿ ಎಂದು ಮಹಿಳೆ ಪರ ವಾದಿಸಿದ್ದಾರೆ