Home News MP: ಹಾವುಗಳಿಗೆ ಜನ್ಮ ನೀಡಿದ ಮಹಿಳೆ? ಅಚ್ಚರಿ ಸತ್ಯ ಬಿಚ್ಚಿಟ್ಟ ವೈದ್ಯರು

MP: ಹಾವುಗಳಿಗೆ ಜನ್ಮ ನೀಡಿದ ಮಹಿಳೆ? ಅಚ್ಚರಿ ಸತ್ಯ ಬಿಚ್ಚಿಟ್ಟ ವೈದ್ಯರು

Hindu neighbor gifts plot of land

Hindu neighbour gifts land to Muslim journalist

MP: ಮಧ್ಯಪ್ರದೇಶದ ಛತ್ತರ್ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಹಾವಿನ ಮರಿಗಳಿಗೆ ಜನ್ಮನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಆದರೆ ಈ ಕುರಿತಾಗಿ ಡಾಕ್ಟರ್ ಎಲ್ಲದಕ್ಕೂ ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಹಲ್ಕೆ ಅಹಿರ್ವಾರ್ ಪತ್ನಿ ರಿಂಕಿ ಅವರಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಬಳಿಕ ಎರಡು ಹಾವಿನ ಮರಿಗಳಿಗೆ ನಮ್ಮ ನೀಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು. ಸುದ್ದಿ ಹರಡುತ್ತಿದ್ದಂತೆ, ಗ್ರಾಮಸ್ಥರು ತಮ್ಮ ಮನೆಯಲ್ಲಿ ಜಮಾಯಿಸಿದರು ಮತ್ತು ಹಾವಿನ ಮರಿಗಳು ಎಂದು ಕರೆಯಲ್ಪಡುವ ಹಾವುಗಳನ್ನು ಪ್ಲಾಸ್ಟಿಕ್ ಬಟ್ಟಲಿನ ಕೆಳಗೆ ಇಡಲಾಗಿತ್ತು. ನಂತರ ರಿಂಕಿಯನ್ನು ರಾಜನಗರ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು.

ಬಳಿಕ ವೈದ್ಯರು ಆಕೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸತ್ಯ ಏನೆಂದು ಬಯಲಾಗಿದೆ. ಕುರಿತಾಗಿ ಮಾತನಾಡಿದ ವೈದ್ಯರು ರಿಂಕಿ ನಮ್ಮ ಆಸ್ಪತ್ರೆಗೆ ಬಂದು ಇತ್ತೀಚೆಗೆ ತನ್ನ ಋತುಚಕ್ರವಿದೆ ಎಂದು ಹೇಳಿದರು, ಅದು ಸೋಮವಾರ ನಿಂತುಹೋಯಿತು. ಪರೀಕ್ಷೆಯ ನಂತರ, ಅವಳು ಗರ್ಭಿಣಿಯಲ್ಲ ಎಂಬುದು ಸ್ಪಷ್ಟವಾಯಿತು. ಮರಿ ಹಾವುಗಳು ಎಂದು ಅವಳು ಭಾವಿಸಿದ್ದು ವಾಸ್ತವವಾಗಿ ರಕ್ತ ಹೆಪ್ಪುಗಟ್ಟುವಿಕೆ, ಅವು ಕೆಲವೊಮ್ಮೆ ದಾರದಂತಹ ಅಥವಾ ಉದ್ದನೆಯ ಆಕಾರದಲ್ಲಿ ಕಾಣಿಸಿಕೊಳ್ಳಬಹುದು ‘ಹಾವಿನಂತಹ ವಸ್ತು’ ಸ್ವಲ್ಪ ಸಮಯದ ನಂತರ ಕರಗಿತು, ಮತ್ತು ಮಹಿಳೆ ಕೂಡ ಇದನ್ನು ಒಪ್ಪಿಕೊಂಡಳು ಎಂದು ಅವರು ಹೇಳಿದರು

ಇದನ್ನೂ ಓದಿ: Tamilunadu : 22 ತಿಂಗಳಲ್ಲಿ 300 ಲೀಟರ್ ‘ಎದೆ ಹಾಲು’ ದಾನ ಮಾಡಿದ ಮಹಿಳೆ!!