Home News ರೈಲಿನೊಳಗೆ ನೂಡಲ್ ಬೇಯಿಸಿದ ಮಹಿಳೆ, ಕ್ರಮಕ್ಕೆ ಮುಂದಾದ ಇಲಾಖೆ

ರೈಲಿನೊಳಗೆ ನೂಡಲ್ ಬೇಯಿಸಿದ ಮಹಿಳೆ, ಕ್ರಮಕ್ಕೆ ಮುಂದಾದ ಇಲಾಖೆ

Hindu neighbor gifts plot of land

Hindu neighbour gifts land to Muslim journalist

ಮುಂಬೈ: ಎಕ್ಸ್‌ಪ್ರೆಸ್ ರೈಲಿನ ಎ.ಸಿ.ಬೋಗಿಯೊಳಗೆ ಎಲೆಕ್ನಿಕ್ ಕೆಟಲ್‌ನಲ್ಲಿ ನೂಡಲ್ಸ್ ಬೇಯಿಸಿದ ಮಹಿಳಾ ಪ್ರಯಾಣಿಕರೊಬ್ಬರ ವಿರುದ್ಧ ರೈಲ್ವೆ ಇಲಾಖೆ ಕ್ರಮಕ್ಕೆ ಮುಂದಾಗಿದೆ. ರೈಲಿನಲ್ಲಿ ಮಹಿಳೆ ನೂಡಲ್ ಬೇಯಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಕೇಂದ್ರ ರೈಲ್ವೆ ಇಲಾಖೆ ಆಕೆಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದೆ.

ಮೊಬೈಲ್ ಚಾರ್ಜಿಂಗ್‌ ಗೆಂದು ಇಟ್ಟ ಪ್ಲಗ್ ಬಳಸಿಕೊಂಡು ಮಹಿಳೆಯು ಕೆಟಲ್‌ನಲ್ಲಿ ನೂಡಲ್ ತಯಾರಿಸಿದ್ದಾರೆ. ಇದೇ ರೀತಿ 10-15 ಜನರಿಗೆ ಚಹಾ ಕೂಡಾ ಮಾಡಬಲ್ಲೆ ಎಂದು ಆಕೆ ಹೇಳಿದ ವಿಡಿಯೋ ವೈರಲ್ ಆಗಿದೆ.

ಮಹಿಳೆ ಮತ್ತು ಆ ವಿಡಿಯೊವನ್ನು ಪೋಸ್ಟ್ ಮಾಡಿದ ಚಾನೆಲ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇವೆ’ ಎಂದು ರೈಲ್ವೆ ಇಲಾಖೆ ‘ಎಕ್ಸ್’ನಲ್ಲಿ ತಿಳಿಸಿದೆ. ರೈಲಿನಲ್ಲಿ ಎಲೆಕ್ನಿಕ್ ಕೆಟಲ್ ಬಳಕೆ ನಿರ್ಬಂಧಿಸಲಾಗಿದೆ. ಇದರಿಂದಾಗಿ ಬೆಂಕಿ ಅವಘಡ ಸಂಭವಿಸಬಹುದು, ಜತೆಗೆ ರೈಲಿನ ವಿದ್ಯುತ್ ವ್ಯವಸ್ಥೆಗೆ ಹಾನಿಯಾಗಬಹುದು ಎoದಿದೆ ಇಲಾಖೆ.