Home News Karnataka Govt: ರಾಜ್ಯ ಸರ್ಕಾರದಿಂದ ಮತಾಂತರ ನಿಷೇಧ ಕಾಯ್ದೆ ವಾಪಸ್?

Karnataka Govt: ರಾಜ್ಯ ಸರ್ಕಾರದಿಂದ ಮತಾಂತರ ನಿಷೇಧ ಕಾಯ್ದೆ ವಾಪಸ್?

Hindu neighbor gifts plot of land

Hindu neighbour gifts land to Muslim journalist

Karnataka Gvt: ಬಿಜೆಪಿ ಸರ್ಕಾದ ಅವಧಿಯಲ್ಲಿ ಜಾರಿಗೊಳಿಸಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಇದೀಗ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯುತ್ತಾ? ಎಂಬ ಚರ್ಚೆ ಶುರುರುವಾಗಿದೆ.

ಹೌದು, ಇತ್ತೀಚಿಗೆ ಬೆಂಗಳೂರಿನ ಶಿವಾಜಿನಗರದಲ್ಲಿನ ಕಾರ್ಯಕ್ರಮದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆಯುವಂತೆ ಕ್ರೈಸ್ತ ಸಮುದಾಯದವರಿಂದ ಸಿಎಂ ಸಿದ್ಧರಾಮಯ್ಯಗೆ ಮನವಿ ಮಾಡಲಾಗಿತ್ತು. ಈ ಮನವಿಗೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ ಎನ್ನಲಾಗುತ್ತಿದೆ. ಇಷ್ಟೇ ಅಲ್ಲದೆ ಶನಿವಾರದಂದು ಮೈಸೂರಲ್ಲಿ ಮತಾಂತರ ಅವರವರ ಹಕ್ಕು ಆಗಿದೆ. ಅದನ್ನು ತಪ್ಪಿಸಲು ಆಗೋದಿಲ್ಲ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸ್ ಪಡೆಯುವ ಸುಳಿವನ್ನು ಸಿಎಂ ಸಿದ್ಧರಾಮಯ್ಯ ನೀಡಿದ್ರಾ ಎನ್ನುವಂತ ಚರ್ಚೆ ಶುರುವಾಗಿದೆ.

ಇದನ್ನೂ ಓದಿ:Breast Ironing: ಇಲ್ಲಿ ಇಸ್ತ್ರಿ ಮಾಡಿ ಪ್ರಾಯದ ಹುಡುಗಿಯರ ಸ್ತನವನ್ನ ಚಪ್ಪಟೆ ಮಾಡ್ತಾರೆ !! ಕಾರಣ ಮಾತ್ರ ಅಚ್ಚರಿ

ಅಂದಹಾಗೇ ಕಳೆದ ವರ್ಷವೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆಯುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ವಿಧಾನಸಭೆಯಲ್ಲಿ ಈ ಕುರಿತಾದ ಯಾವುದೇ ಮಸೂದೆಯನ್ನು ಸರ್ಕಾರ ಮಂಡಿಸಿರಲಿಲ್ಲ. ಹೀಗಾಗಿ ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.