Home News Putturu : ಮುಂದಿನ ಎಲೆಕ್ಷನ್ ವೇಳೆ ಪುತ್ತೂರು ಶಾಸಕ ಅಶೋಕ್ ರೈ ಬಿಜೆಪಿ ಸೇರ್ಪಡೆ?! ಕಾಂಗ್ರೆಸ್...

Putturu : ಮುಂದಿನ ಎಲೆಕ್ಷನ್ ವೇಳೆ ಪುತ್ತೂರು ಶಾಸಕ ಅಶೋಕ್ ರೈ ಬಿಜೆಪಿ ಸೇರ್ಪಡೆ?! ಕಾಂಗ್ರೆಸ್ ಕಾರ್ಯಕರ್ತರಿಂದಲೇ ಬಿಗ್ ಅಪ್ಡೇಟ್

Hindu neighbor gifts plot of land

Hindu neighbour gifts land to Muslim journalist

Putturu: ಪುತ್ತೂರಿನ ಹಾಲಿ ಕಾಂಗ್ರೇಸ್ ಶಾಸಕ ಅಶೋಕ್ ರೈ ಮುಂದಿನ ಚುನಾವಣೆಯ ವೇಳೆ ಬಿಜೆಪಿ ಸೇರುವುದು ಖಚಿತ ಎಂಬ ಸುದ್ದಿ ಬಂದಿದೆ. ಹಾಗಂತ ಇದನ್ನು ಯಾವುದೇ ಬಿಜೆಪಿ ನಾಯಕರಾಗಲಿ ಅಥವಾ ಎನ್ ಡಿಎ ಮೈತ್ರಿ ನಾಯಕರಾಗಲಿ ಹೇಳಿಲ್ಲ. ಬದಲಿಗೆ ಕಾಂಗ್ರೆಸ್ ಕಾರ್ಯಕರ್ತರೇ ಹೇಳಿದ್ದಾರೆ.

ಹೌದು, ಪುತ್ತೂರಿನ(Putturu) ಕಾಂಗ್ರೇಸ್ ಶಾಸಕ ಅಶೋಕ್ ರೈ(Ashok Rai) ವಿರುದ್ದ ಕಾಂಗ್ರೇಸ್ ಕಾರ್ಯಕರ್ತ ಗರಂ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಅವರೇ ಈ ರೀತಿ ಹೊಸ ಸವಾಲು ಹಾಕಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು ಮುಂದಿನ ಚುನಾವಣೆಗೆ ಅಶೋಕ್ ರೈಗಳು ಬಿಜೆಪಿಗೆ ಸೇರುವುದು ಖಚಿತ, ಮುಂದಿನ ಚುನಾವಣೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ ಅಂತ ರೈ ಹೇಳಲಿ. ಒಂದು ವೇಳೆ ಕಾಂಗ್ರೆಸ್ ಪಕ್ಷದಲ್ಲೇ ಇರ್ತಿನಿ ಅಂತ ಆದ್ರೆ ಅವರು ‘ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಬಂದು ಆಣೆಪ್ರಮಾಣ ಮಾಡಲಿ ಎಂದು ಸವಾಲೆಸೆದಿದ್ದಾರೆ.

ಅಲ್ಲದೆ ನಾನು ನಮ್ಮದೇ ಸರ್ಕಾರ ಇದೆ, ನಮ್ಮದೇ ಶಾಸಕರು ಇದೆ ಪುತ್ತೂರು ಅಭಿವೃದ್ದಿ ಆಗಬಹುದು ಎಂದು ನಂಬಿದ್ದೆ, ಆದ್ರೆ ಅಶೋಕ್‌ ರೈಗಳು ಪುತ್ತೂರಿಗೆ ಬೇಕಾದ ರಸ್ತೆಯನ್ನೇ ಸರಿಪಡಿಸುತ್ತಿಲ್ಲ, ಈ ಬಗ್ಗೆ ನಮಗೆ ಬೇಕಾದ ಮೂಲ ಸೌಕರ್ಯವನ್ನ ಒದಗಿಸದ ಬಗ್ಗೆ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಚಕಾರವೆತ್ತಿದ್ದೇನೆ, ಆದ್ರೆ ಶಾಸಕರು ಅವರ ಸಂಸ್ಕೃತಿಯನ್ನ ತೋರಿಸಿ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಈಶ್ವರಮಂಗಳ ಮೂಲದ ಅಶೋಕ್ ರೈ ಬೆಂಬಲಿಗನಿಂದ ಜೀವ ಬೆದರಿಕೆ ಬಂದಿದೆ. ಅಶೋಕ್ ರೈಗಳ ಬೆಂಬಲಿಗರ ಜೀವ ಬೆದರಿಕೆಗೆಲ್ಲ ಕುಗ್ಗಲ್ಲ , ಈಗಾಗ್ಲೇ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮಾಡ್ತೇನೆ ಎಂದ್ದಿದಾರೆ.