Home News Azaruddin: ಸ್ಟೇಡಿಯಂ ಸ್ಟ್ಯಾಂಡ್‌ನಿಂದ ಹೆಸರು ತೆಗೆದರೆ ಕೋರ್ಟ್‌ಗೆ; ಅಜರುದ್ದೀನ್

Azaruddin: ಸ್ಟೇಡಿಯಂ ಸ್ಟ್ಯಾಂಡ್‌ನಿಂದ ಹೆಸರು ತೆಗೆದರೆ ಕೋರ್ಟ್‌ಗೆ; ಅಜರುದ್ದೀನ್

Hindu neighbor gifts plot of land

Hindu neighbour gifts land to Muslim journalist

Azaruddin: ಹೈದರಾಬಾದ್ ಕ್ರಿಕೆಟ್ ಕ್ರೀಡಾಂಗಣದ ಸ್ಟಾಂ ಡ್‌ನಿಂದ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದು ಹಾಕುವಂತೆ ಕ್ರಿಕೆಟ್ ಹೈದರಾಬಾದ್ ಸಂಸ್ಥೆ(ಎಚ್‌ಸಿಎ) ಒಂಬಡ್ಸ್‌ಮನ್‌ ಸೂಚಿಸಿದ್ದಾರೆ.

ಎಚ್‌ಸಿಎ ಎಥಿಕ್ಸ್ ಆಫೀಸರ್ ಆಗಿರುವ ನಿವೃತ್ತ ನ್ಯಾ.ಈಶ್ವರಯ್ಯ ಅವರು ಎಚ್‌ಸಿಎ ಸದಸ್ಯ ಘಟಕವಾದ ಲಾರ್ಡ್ಸ್ ಕ್ರಿಕೆಟ್ ಕ್ಲಬ್ ಸಲ್ಲಿಸಿದ್ದ ಅರ್ಜಿ ಆಧಾರದಲ್ಲಿ ಈ ಸೂಚನೆ ನೀಡಿದ್ದಾರೆ. ಅಲ್ಲದೆ, ಪಂದ್ಯಗಳ ಟಿಕೆಟ್‌ನಲ್ಲೂ ಅಜರುದ್ದೀನ್ ಹೆಸರು ಮುದ್ರಿಸದಂತೆ ಆದೇಶಿಸಿದ್ದಾರೆ.

ಇದರ ಬೆನ್ನಲ್ಲೇ, ಹೆಸರು ತೆಗೆದು ಹಾಕುವ ಕ್ರಮದ ವಿರುದ್ದ ಹೈಕೋರ್ಟ್ ಮೆಟ್ಟಿಲೇರು ವುದಾಗಿ ಅಜರುದ್ದೀನ್ ಎಚ್ಚರಿಸಿದ್ದಾರೆ.

ಭಾರತ ಪರ 99 ಟೆಸ್ಟ್, 334 ಏಕದಿನ ಪಂದ್ಯಗಳನ್ನು ಆಡಿರುವ ಅಜರುದ್ದೀನ್ ಅವರು 2019ರಲ್ಲಿ ಎಚ್‌ಸಿಎ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಬಳಿಕ ಕ್ರೀಡಾಂಗಣದ ನಾರ್ಥ್ ಸ್ಟ್ಯಾಂಡ್‌ಗೆ ತಮ್ಮ ಹೆಸರಿಡುವ ನಿರ್ಣಾಯ ಕೈಗೊಂಡಿದ್ದರು. ಆದರೆ ಅಜರುದ್ದೀನ್ ಎಚ್‌ಸಿಯ ನಿಯಮ ಗಾಳಿಗೆ ತೂರಿ, ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.