Home News ಪತಿಯ ಆಸೆ ತೀರಿಸಲು ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಕಳಿಸಿದ ಪತ್ನಿ!! ಪತಿಗೆ ಹೋಗಬೇಕಾಗಿದ್ದ ವಿಡಿಯೋ...

ಪತಿಯ ಆಸೆ ತೀರಿಸಲು ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಕಳಿಸಿದ ಪತ್ನಿ!! ಪತಿಗೆ ಹೋಗಬೇಕಾಗಿದ್ದ ವಿಡಿಯೋ ತಪ್ಪಿ ಹೋಯ್ತು ಫೇಸ್ ಬುಕ್ ನಲ್ಲಿ ಲೈವ್

Hindu neighbor gifts plot of land

Hindu neighbour gifts land to Muslim journalist

ವಿದೇಶದಲ್ಲಿರುವ ತನ್ನ ಪ್ರೀತಿಯ ಪತಿಯ ಆಸೆ ತೀರಿಸಲು ಹೋದ ಪತ್ನಿಯೊಬ್ಬಳು ಪೇಚಿಗೆ ಸಿಲುಕಿ ಪೊಲೀಸರ ಮೊರೆ ಹೋದ ಘಟನೆಯೊಂದು ಬೆಳಕಿಗೆ ಬಂದಿದೆ. ತನ್ನ ಪತಿಯ ಬಯಕೆಯಾದ ಸ್ನಾನ ಮಾಡುವ ವಿಡಿಯೋ ವನ್ನು ಮಹಿಳೆ ಪತಿಗೆ ಕಳುಹಿಸುವಾಗ ತಪ್ಪಿ ಫೇಸ್ ಬುಕ್ ಲೈವ್ ನಲ್ಲಿ ಪೋಸ್ಟ್ ಮಾಡಿದ್ದು, ಐದು ನಿಮಿಷಗಳಲ್ಲಿ ಬರೋಬ್ಬರಿ 2000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದಲ್ಲದೆ ಫೋರ್ನ್ ವೆಬ್ ಸೈಟ್ ಗಳಲ್ಲೂ ಹರಿದಾಡಿದ ಘಟನೆ ಸ್ಪೇನ್ ನಲ್ಲಿ ನಡೆದಿದೆ.

ವಿದೇಶದಲ್ಲಿರುವ ಪತಿಯು ಪತ್ನಿಯೊಂದಿಗೆ ಸೆಕ್ಸ್ ಚಾಟ್ ನಡೆಸುತ್ತಿದ್ದನು. ಒಂದು ದಿನ ಆತನಿಗೆ ಆಕೆ ಸ್ನಾನ ಮಾಡುವ ವಿಡಿಯೋ ಬೇಕೆಂಬ ಆಸೆ ಆಗಿ ತನ್ನ ಮಡದಿಯೊಂದಿಗೆ ಕೇಳಿಕೊಂಡಿದ್ದನು.ಪತಿಯ ಬಯಕೆ ತೀರಿಸಲು ಪತ್ನಿ ಮುಂದಾಗಿದ್ದು ಆತ ಹೇಳಿದಂತೆಯೇ ಸ್ನಾನದ ವಿಡಿಯೋ ಸೆರೆ ಹಿಡಿದು ಕಳುಹಿಸಿದ್ದಾಳೆ.

ಇತ್ತ ವಿಡಿಯೋ ಗಾಗಿ ಕಾದು ಕಾದು ಸುಸ್ತಾದ ಪತಿರಾಯ ಪುನಃ ಆಕೆಯನ್ನು ಕೇಳಿದಾಗ ಆಕೆ ಕಳುಹಿಸಿದ್ದೇನೆ ಎಂಬ ಉತ್ತರ ನೀಡಿದ್ದಾಳೆ. ಇದರಿಂದ ಅನುಮಾನಗೊಂಡ ಆತ ಫೇಸ್ ಬುಕ್ ನಲ್ಲಿ ನೋಡಿದಾಗ ತನ್ನ ಪತ್ನಿಯ ಸ್ನಾನದ ವಿಡಿಯೋ ಲೈವ್ ಆಗಿ ಹರಿದಾಡುತ್ತಿದೆ. ಕೂಡಲೇ ಆಕೆಗೆ ಡಿಲೀಟ್ ಮಾಡುವಂತೆ ಹೇಳಿದ್ದು ಅದಾಗಲೇ ಆಕೆ ಡಿಲೀಟ್ ಕೂಡಾ ಮಾಡಿದ್ದಾಳೆ.

ಆದರೆ ಅಷ್ಟೊತ್ತಿಗಾಗಲೇ ಅದು ಎರಡು ಸಾವಿರಕ್ಕೂ ಮಿಕ್ಕಿ ವೀಕ್ಷಕರ ಕಣ್ಣು ತುಂಬಿಸಿದ್ದು, ಅದೂ ಅಲ್ಲದೇ ಫೋರ್ನ್ ವೆಬ್ ಸೈಟ್ ನಲ್ಲೂ ಹರಿದಾಡಿದೆ. ಇದರಿಂದ ಕೆಂಡಾಮಂಡಲವಾದ ಪತ್ನಿ ಪೊಲೀಸರ ಮೊರೆ ಹೋಗಿದ್ದು ರಕ್ಷಿಸುವಂತೆ ಕೋರಿಕೊಂಡಿದ್ದಾಳೆ.