Home News WhatsApp: ಜೂನ್ 1 ರಿಂದ ಕೆಲವು ಮೊಬೈಲ್ ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ವಂತೆ!

WhatsApp: ಜೂನ್ 1 ರಿಂದ ಕೆಲವು ಮೊಬೈಲ್ ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ವಂತೆ!

Hindu neighbor gifts plot of land

Hindu neighbour gifts land to Muslim journalist

WhatsApp: ಜೂನ್ 1 ರಿಂದ ಮೆಟಾ ಮಾಲೀಕತ್ವದ ವ್ಯಾಟ್ಸಾಪ್ ಅಪ್‌ಡೇಟ್ ಆಗುತ್ತಿದ್ದು, ಇದರ ಪರಿಣಾಮ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲವಂತೆ.

ಈ ಪೈಕಿ ಸ್ಯಾಮಸಂಗ್ ಗ್ಯಾಲಕ್ಸಿ ಎಸ್4, ಸ್ಯಾಮ್‌ಸಂಹ್ ಗ್ಯಾಲಕ್ಸಿ ನೋಟ್ 3, ಸೋನಿ ಎಕ್ಸ್ಪೀರಿಯಾ ಝೆಡ್1, ಎಲ್‌ಜಿ ಜಿ2, ಹುವೈ ಆ್ಯಸೆಂಡ್ ಪಿ6, ಮೋಟೋ ಜಿ, ಮೊಟೋರೋಲಾ ರೇಜರ್ ಹೆಚ್‌‌ಡಿ, ಮೋಟೋ ಇಸೇರಿದಂತೆ ಕೆಲ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯ ವಹಿಸುವುದಿಲ್ಲ.

ಇನ್ನೂ ಆ್ಯಪಲ್ ಫೋನ್ ಪೈಕಿ ಐಫೋನ್ 5ಎಸ್, ಐಫೋನ್ 6, ಐಫೋನ್ 6 ಪ್ಲಸ್, ಐಫೋನ್ 6ಎಸ್ ಪ್ಲಸ್, ಐಫೋನ್ ಎಸ್ಇ ಫಸ್ಟ್ ಜನರೇಶನ್ ವರ್ಕ್ ಆಗುವುದಿಲ್ಲ. ವಾಟ್ಸಾಪ್ ಅಪ್ ಡೇಟ್ ಆಗುವ ಕಾರಣದಿಂದಾಗಿ ಫೋನ್‌ಗಳ ಆಪರೇಟಿಂಗ್ ಸಿಸ್ಟಮ್(ಒಎಸ್) ಸಪೋರ್ಟ್ ಮಾಡುವುದಿಲ್ಲ ಹಾಗೂ ಈ ಅಪ್ ಡೇಟ್ ಅನ್ನು ಬಳಕೆದಾರರ ಸುರಕ್ಷತೆ ದೃಷ್ಟಿಯಿಂದ ಮಾಡಲಾಗಿದೆ.

ಇಂತಹ ಬಳಕೆದಾರರು ಆಪರೇಟಿಂಗ್ ಸಿಸ್ಟಮ್ ಅನ್ನು ಅಪ್ ಗ್ರೇಡ್ ಮಾಡಿಕೊಳ್ಳಬಹುದಾಗಿದ್ದು, ಈ ರೀತಿ ಮಾಡುವುದರಿಂದ ಡೇಟಾ ಡಿಲೀಟ್ ಆಗುವ ಸಾಧ್ಯತೆಯೂ ಇರುತ್ತದೆ. ಒಎಸ್ ಅಪ್‌ಡೇಟ್ ಮಾಡಿದರೂ ಸೆಕ್ಯೂರಿಟಿ ಸಮಸ್ಯೆಗಳು ಹೆಚ್ಚು. ಹೀಗಾಗಿ ಹೊಸ ಫೋನ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳುವುದು ಸೂಕ್ತ ಎನ್ನಲಾಗಿದೆ.