Home News ಮೈಸೂರು ಅರಮನೆ ಮುಂಭಾಗದ ಸ್ಫೋಟಕ್ಕೆ ಅಸಲಿ ಕಾರಣ ಏನು? ಇಲ್ಲಿದೆ ಮಾಹಿತಿ

ಮೈಸೂರು ಅರಮನೆ ಮುಂಭಾಗದ ಸ್ಫೋಟಕ್ಕೆ ಅಸಲಿ ಕಾರಣ ಏನು? ಇಲ್ಲಿದೆ ಮಾಹಿತಿ

Image Credit: Tv9 Kannada

Hindu neighbor gifts plot of land

Hindu neighbour gifts land to Muslim journalist

ಮೈಸೂರು: ಅರಮನೆ ಮುಂಭಾಗದಲ್ಲಿ ಹೀಲಿಯಂ ಗ್ಯಾಸ್‌ ತುಂಬಿದ್ದ ಸಿಲಿಂಡರ್‌ ಸ್ಫೋಟಗೊಂಡು ಬಲೂನ್‌ ವ್ಯಾಪಾರಿ ಸಲೀಂ ಮೃತಪಟ್ಟ ಘಟನೆಯ ಅಸಲಿ ಕಾರಣ ಬಹಿರಂಗವಾಗಿದೆ. ಬಲೂನ್‌ಗಳಿಗೆ ಹೀಲಿಯಂ ಗ್ಯಾಸ್‌ ತುಂಬಿಸುತ್ತಿದ್ದ ಸಲೀಂ, ಮಾತ್ರವಲ್ಲದೇ ಸಿಲಿಂಡರ್‌ ಅನ್ನು ವೇಗವಾಗಿ ಆನ್‌-ಆಫ್‌ ಮಾಡಿದ್ದರಿಂದ ಒಳಭಾಗದಲ್ಲಿ ಹೀಟ್‌ ಉಂಟಾಗಿ ಒತ್ತಡ ಹೆಚ್ಚಾಗಿತ್ತು. ಪರಿಣಾಮ ಸಿಲಿಂಡರ್‌ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.

ಮೈಸೂರಿಗೆ ಕಳೆದ ವಾರ ವ್ಯಾಪಾರದ ನಿಮಿತ್ತ ಉತ್ತರಪ್ರದೇಶದಿಂದ ಇಲ್ಲಿಗೆ ಬಂದಿದ್ದ. ಒಂದು ವಾರದಿಂದ ಮೈಸೂರು ಅರಮನೆ ಸುತ್ತಮುತ್ತ ವಸ್ತುಪ್ರದರ್ಶನ ಆವರಣದಲ್ಲಿ ಸೈಕಲ್‌ ಮೇಲೆ ಹೀಲಿಯಂ ಗ್ಯಾಸ್‌ ಸಿಲಿಂಡರ್‌ ಇಟ್ಟುಕೊಂಡು ಬಲೂನ್‌ ಮಾರಾಟ ಮಾಡುತ್ತಿದ್ದ. ಘಟನೆ ನಡೆದ ದಿನ ರಾತ್ರಿ ಸುಮಾರು 8.30 ರ ವೇಳೆಗೆ ವರಾಹ ಗೇಟ್‌ ಬಳಿ ಬಲೂನ್‌ ಮಾರಾಟ ಮುಗಿಸಿ, ದೊಡ್ಡಕೆರೆ ಮೈದಾನದ ಎದುರುಗಡೆ ಇರುವ ಜಯಮಾರ್ತಾಂಡ ಗೇಟ್‌ ಬಳಿ ಬಂದಾ ಈ ಅವಘಡ ನಡೆದಿದೆ.

ಆ ಸಮಯದಲ್ಲಿ ಬಲೂನ್‌ ಖರೀದಿಗೆ ಸಾರ್ವಜನಿಕರು ಸೇರಿದ್ದು, ಸಲೀಂ ನಿರಂತರವಾಗಿ ಗ್ಯಾಸ್‌ ತುಂಬಿಸುತ್ತಿದ್ದ, ಸಿಲಿಂಡರನ್ನು ಪದೇ ಪದೇ ಆನ್‌ ಆಫ್‌ ಮಾಡಿದ್ದರಿಂದ ಒಳಭಾಗದಲ್ಲಿ ತಾಪಮಾನ ಹೆಚ್ಚಾಗಿ ಒತ್ತಡ ಉಂಟಾಗಿದ್ದು, ಏಕಾಏಕಿ ಸಿಲಿಂಡರ್‌ ಸ್ಫೋಟಗೊಂಡಿದ್ದು, ಸಲೀಂ ಅಲ್ಲೇ ಮೃತಪಟ್ಟಿದ್ದಾರೆ. ಸಲೀಂ ಪಕ್ಕ ನಿಂತಿದ್ದ ನಾಲ್ವರು ಗಂಭೀರ ಗಾಯವಾಗಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಘಟನೆ ಕುರಿತು ಮೈಸೂರು ಪೊಲೀಸರು ಕೇಸು ದಾಖಿಲಿಸಿಕೊಂಡಿದ್ದಾರೆ. ಎಫ್‌ಎಸ್‌ಎಲ್‌ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದೆ.