Home News Police Uniform: ಪೊಲೀಸರ ಯುನಿಫಾರ್ಮ್‌ನ ಈ ದಾರ ಯಾಕಿರುತ್ತೆ? ಇದರ ಹಿಂದಿನ ಗುಟ್ಟೇನು?

Police Uniform: ಪೊಲೀಸರ ಯುನಿಫಾರ್ಮ್‌ನ ಈ ದಾರ ಯಾಕಿರುತ್ತೆ? ಇದರ ಹಿಂದಿನ ಗುಟ್ಟೇನು?

Hindu neighbor gifts plot of land

Hindu neighbour gifts land to Muslim journalist

Police Uniform: ಸಮಾಜದಲ್ಲಿ ಶಾಂತಿ ಕಾಪಾಡುವ ಕೆಲಸವನ್ನು ಆರಕ್ಷಕ ಸಿಬ್ಬಂದಿ ಮಾಡುತ್ತಾರೆ. ಓರ್ವ ಪೊಲೀಸ್ ಸಿಬ್ಬಂದಿ ಎಲ್ಲರನ್ನು ನಿಯಂತ್ರಿಸುವ ಸಾಮಾರ್ಥ್ಯವನ್ನು ಹೊಂದಿರುತ್ತಾರೆ. ಇದಕ್ಕೆ ಕಾರಣ ಪೊಲೀಸರು ಧರಿಸಿರುವ ಖಾಕಿ. ಹೌದು, ಖಾಕಿ ಧರಿಸಿದ(Police Uniform) ಪೊಲೀಸ್ ಅಧಿಕಾರಿಯಲ್ಲಿ ಶಿಸ್ತು ಮತ್ತು ಒಂದು ರೀತಿಯ ಗತ್ತು ಕಾಣಬಹುದು. ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯದ ಪೊಲೀಸ್ ಸಿಬ್ಬಂದಿಯ ಸಮವಸ್ತ್ರದ ಬಣ್ಣ ಒಂದೇಯಾಗಿದ್ದು, ವಿನ್ಯಾಸದಲ್ಲಿ ಕೊಂಚ ವ್ಯತ್ಯಾಸಗಳು ಕಂಡು ಬರುತ್ತವೆ.

ನೀವೂ ಸಹ ಪೊಲೀಸರು ಧರಿಸಿರುವ ಸಮವಸ್ತ್ರ ಗಮನಿಸಿರಬಹುದು. ಪೊಲೀಸರ ಯುನಿಫಾರ್ಮ್ ಹೇಗಿರಬೇಕು ಎಂಬುದರ ಬಗ್ಗೆ ಕೆಲವೊಂದು ನಿಯಮಗಳಿವೆ. ಈ ನಿಯಮಗಳ ಪ್ರಕಾರ ಸಿಬ್ಬಂದಿಯೂ ಯುನಿಫಾರ್ಮ್ ಹೊಲಿಸುತ್ತಾರೆ. ಅದರಲ್ಲೂ ಪೊಲೀಸರ ಸಮವಸ್ತ್ರದ ಎಡಭಾಗದ ತೋಳಿನ ಭಾಗದಲ್ಲಿ ಸುರಳಿಯಾಕಾರದ ದಪ್ಪ ದಾರ ಇರುತ್ತದೆ. ಯಾಕೆ ಈ ರೀತಿ ದಪ್ಪ ದಾರ ಇರುತ್ತೆ ಎಂಬುದರ ಮಾಹಿತಿ ಇಲ್ಲಿದೆ.

ಪೊಲೀಸರ ಸಮವಸ್ತ್ರದಲ್ಲಿ ಸುರಳಿಯಾಕಾರದ ದಪ್ಪನೇ ದಾರ ಅಳವಡಿಸಲು ವಿಶೇಷ ಕಾರಣವಿದೆ. ಕೇವಲ ಚೆಂದಕ್ಕಾಗಿ ಇದನ್ನು ಹಾಕಿರುವುದಿಲ್ಲ. ಈ ದಾರದಿಂದ ವಿಶೇಷ ಕೆಲಸವಾಗುತ್ತದೆ. ಈ ದಾರವನ್ನು “ಲ್ಯಾನ್‌ಯಾರ್ಡ” (Lanyard) ಎಂದು ಕರೆಯಲಾಗುತ್ತದೆ. ಈ ದಾರವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಇದರ ಒಂದು ತುದಿ ಸಮವಸ್ತ್ರದ ಜೇಬಿಗೆ ಲಿಂಕ್ ಮಾಡಲಾಗಿರುತ್ತದೆ. ದಾರದ ತುದಿಗೆ ಸಿಟಿಯನ್ನು ಕಟ್ಟಲಾಗಿರುತ್ತದೆ. ಪೊಲೀಸರು ತಮ್ಮ ಬಳಿ ಯಾವಾಗಲೂ ಸಿಟಿ ಹೊಂದಿರುತ್ತಾರೆ. ಅದು ಕೈಗೆ ಬೇಗ ಸಿಗಲಿ ಎಂಬ ಉದ್ದೇಶದಿಂದ ಈ ದಾರದ ಕೊನೆಗೆ ಸಿಟಿ ಕಟ್ಟಿ ಜೇಬಿನಲ್ಲಿ ಇರಿಸಲಾಗಿರುತ್ತದೆ. ಮುಖ್ಯವಾಗಿ ತುರ್ತು ಸಂದರ್ಭಗಳಲ್ಲಿ ಸಿಟಿಯನ್ನು ಪೊಲೀಸರು ಬಳಕೆ ಮಾಡುತ್ತಾರೆ. ಅದರಲ್ಲೂ ಟ್ರಾಫಿಕ್ ಪೊಲೀಸರು ಹೆಚ್ಚಾಗಿ ಸಿಟಿಯನ್ನು ಬಳಸೋದನ್ನು ಇಂದು ಕಾಣಬಹುದಾಗಿದೆ.

­